ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವೀರ ಯೋಧನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ

ಗದಗ ಜಿಲ್ಲೆಯ ನರಗುಂದ ತಾಲೂಕ ರಡೇರನಾಗನೂರ ಗ್ರಾಮದ ವೀರಯೋಧ ಹುತಾತ್ಮ ರಾಮನಗೌಡ ಚಂದ್ರಗೌಡ ಕರಬಸನಗೌಡ್ರ ಇವರು 2002 ರಲ್ಲಿ ಚಂಡೀಘಡದ ಐಟಿಬಿಪಿ ಗೆ ನೇಮಕವಾಗಿದ್ದರು, ಅಸ್ಸಾಂ ಮತ್ತು ಸಿಕ್ಕಿಂ ನಡುವಿನ ಬಾಂಗ್‌ ಡೊಂಗ್ರ್‌ ಎಂಬಲ್ಲಿ ಹಿಮಪಾತವಾಗುವ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಕ್ತದೊತ್ತಡದಲ್ಲಿ ತೀವ್ರ ಏರುಪೇರಾಗಿ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ 2024 ಪೆಬ್ರುವರಿ 4 ರ ಭಾನುವಾರ ಬೆಳಿಗ್ಗೆ ಯೋಧ ಹುತಾತ್ಮರಾಗಿದ್ದರು. ಫೆ. 7 ಬುಧವಾರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಿ ಅಂದೇ ಬೆಳಿಗ್ಗೆ 9.00 ಘಂ.ಗೆ ಸರಕಾರದ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ದಿ : 25-01-2025 ಶನಿವಾರ ಸಮಯ: ಸಂಜೆ 5-00 ಘಂಟೆಗೆ ವೀರಯೋಧ ಹುತಾತ್ಮ ರಾಮನಗೌಡ ಚಂದ್ರಗೌಡ ಕರಬಸನಗೌಡ್ರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಲಾಗುತ್ತಿದೆ. ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ರಡೇರನಾಗನೂರ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ಶ್ರೀ ಮ.ನಿ.ಪ್ರ ಶಾಂತಲಿಂಗ ಮಹಾಸ್ವಾಮಿಗಳು ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ಇವರ ಸಾನಿಧ್ಯ ಹಾಗೂ ಶ್ರೀಮತಿ ಸಾವಕ್ಕೆ ಬ. ಮೇಟಿ ಅಧ್ಯಕ್ಷರು ಗ್ರಾಮ ಪಂಚಾಯತ ರಡೇರನಾಗನೂರ ಇವರ ಅಧ್ಯಕ್ಷತೆಯಲ್ಲಿ ನೆರವೇರಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ, ಸನ್ಮಾನ್ಯಶ್ರೀ ಎಚ್. ಕೆ. ಪಾಟೀಲ ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು. ಮುಖ್ಯ ಅತಿಥಿಗಳಾಗಿ ಸನ್ಮಾನ್ಯಶ್ರೀ ಸಿ. ಸಿ. ಪಾಟೀಲ ಮಾನ್ಯ ಶಾಸಕರು, ಹಾಗೂ ಮಾಜಿ ಸಚಿವರು, ನರಗುಂದ. ಶ್ರೀ ಪಿ.ಸಿ. ಗದ್ದಿಗೌಡರ ಮಾನ್ಯ ಸಂಸದರು ಬಾಗಲಕೋಟಿ ಮತಕ್ಷೇತ್ರ, ಶ್ರೀ ಎನ್. ಎಚ್. ಕೋನರಡ್ಡಿ ಮಾನ್ಯ ಶಾಸಕರು, ನವಲಗುಂದ, ಶ್ರೀ ಬಿ. ಆರ್. ಯಾವಗಲ್ಲ ಮಾಜಿ ಸಚಿವರು, ನರಗುಂದ, ಶ್ರೀ ಕೆ. ಎಲ್. ಪಾಟೀಲ ಅಧ್ಯಕ್ಷರು, ರಡ್ಡಿ ಸಹಕಾರಿ ಬ್ಯಾಂಕ್ ನಿ.,ಧಾರವಾಡ ಹಾಗೂ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು, ಹಾಗೂ ಇನ್ನಿತರ ಗಣ್ಯ ಮಾನ್ಯರು, ಜಿಲ್ಲೆಯ ಮಾಜಿ ಯೋಧರು ಹಾಗೂ ಹಾಲಿ ಯೋಧರು ಹಾಗೂ ರಡೇರನಾಗನೂರ ಗ್ರಾಮದ ಸಮಸ್ತ ಗುರುಹಿರಿಯರು
ನಾಗರಿಕರು, ಎಲ್ಲಾ ಯುವಕ ಮಂಡಳಗಳು ಮತ್ತು ಯುವಕ ಮಿತ್ರರು ಭಾಗವಹಿಸಲಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ