ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ತೇರು
ಬಿರು ಬಿಸಿಲಿನಲ್ಲಿ ಜನಸಾಗರವೇ ಜೋರು
ರಸ್ತೆ ಉದ್ದಕ್ಕೂ ಪಾನಕ ಮಜ್ಜಿಗೆ ನೀರು
ಎಲ್ಲೆಂದರಲ್ಲಿ ವಾಹನಗಳದೇ ಕಾರುಬಾರು
ಚಿತ್ತ ನಕ್ಷತ್ರದ ಶುಭದ ದಿನದಂದು.
ಕಾಯಕಯೋಗಿಯನ್ನು ಒಮ್ಮೆ ನೆನೆದು.
ಕರ್ಪೂರ ಕೊಬ್ಬರಿಯನ್ನು ಅರ್ಪಿಸಿದೆನು ಅಂದು.
ಭಕ್ತಿಯಿಂದ ಕೈ ಮುಗಿದು ನಿಂತಿರುವೆ ಎಂದೆಂದೂ
ಹೆಂಡತಿ ಮಕ್ಕಳು ಕುಟುಂಬದೊಂದಿಗೆ ಬಂದು
ಸ್ವಾಮಿಯ ಸೇವೆ ಮಾಡಬೇಕು ಎಂದೆಂದೂ
ಮುಕ್ತಿ ಬಾವುಟಕ್ಕೆ ಶಿರಬಾಗಿ ಶರಣೆಂದು
ತೇರಿನ ಮೇಲೆ ಎಸೆ ಬೇಕು ಬಾಳೆ ಕರಿ ಮೆಣಸು ತಂದು
ಮಣಿಯ ಹಗ್ಗವ ಹಿಡಿದು ರಥವ ಎಲ್ಲರೂ ಎಳೆದು
ತೇರಿಗೆ ಎಸೆದಂತಹ ಕಾಳು ಮೆಣಸನ್ನು ಹುಡುಕುತ್ತಾ ಆಯ್ದು
ತಮ್ಮ ತಮ್ಮ ಮನೆಗಳಿಗೆ ಕೊಂಡು ಹೊಯ್ದು.
ಮನೆಯ ದವಸ ಧಾನ್ಯಗಳಲ್ಲಿ ಬೆರೆಸುವರು ಅಂದು
ಬಗೆ ಬಗೆ ಅಂಗಡಿ ಮುಂಗಟ್ಟುಗಳು
ಎಲ್ಲೆಂದರಲ್ಲಿ ಹೆಣ್ಣು ಮಕ್ಕಳೇ ಕೇಳು
ರಸ್ತೆ ಪಕ್ಕದ ಹೋಟೆಲಲ್ಲಿ ತಿಂಡಿ ತಿನಿಸುಗಳು
ಮನೆಗೆ ಕೊಂಡೊಯ್ಯಲು ಕಾರ ಮಂಡಕ್ಕಿ ಬೆಂಡು ಬತ್ತಾಸುಗಳು
- ಎಂ ಚಂದ್ರಶೇಖರ ಚಾರ್
ಸಹ ಶಿಕ್ಷಕರು ,ವಿಶ್ವಮಾನವ ವಸತಿ ಪ್ರೌಢಶಾಲೆ
ಸಿಬಾರ ಗುತ್ತಿ ನಾಡು ಚಿತ್ರದುರ್ಗ
7892642593
