ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಜನತಾ ಕಾಲೋನಿಯ ಒಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶನಿವಾರ ವನಸಿರಿ ಪೌಂಡೇಷನ್(ರಿ.) ರಾಯಚೂರು ರಾಜ್ಯ ಘಟಕದ ವತಿಯಿಂದ ಆಕ್ಸಿಜನ್ ಕ್ರಾಂತಿ ಯೋಜನೆ ಅಭಿಯಾನ ಕಾರ್ಯಕ್ರಮ ಹಾಗೂ ಪರಿಸರ ಪ್ರೇಮಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ವನಸಿರಿ ಫೌಂಡೇಷನ್ ಮಾರ್ಗದರ್ಶಕರಾದ ಶಂಕರಗೌಡ ಎಲೆಕೊಡ್ಲಿಗಿ ಅವರ 41ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ಪಂಪಾಪತಿ ಮಾತನಾಡಿ ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಗಿಡಮರಗಳನ್ನು ನೆಡುವ ಮೂಲಕ ಸುಸ್ಥಿರ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಬೇಸಿಗೆಯಲ್ಲಿ ಗೂಡಿನಲ್ಲಿ ಹೆಚ್ಚಿನ ತಾಪಮಾನದಿಂದ ಸುರಕ್ಷಿತವಾಗಿರಲು ನಾಗರಿಕರಿಗೆ, ಪಕ್ಷಿಗಳಿಗೆ ಭವಿಷ್ಯದ ಜೀವನ ಗುಣಮಟ್ಟವನ್ನು ಸುರಕ್ಷಿತಗೊಳಿಸಲು ಗಿಡ ಮರಗಳನ್ನು ನೆಡಲಾಗುತ್ತಿದೆ. ಭೂಮಿಯ ಮೇಲಿನ ತಾಪಮಾನವನ್ನು ಸರಿದೂಗಿಸಲು ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಣೆ ಮಾಡಲು ಮುಂದಾಗಬೇಕು. ಜೊತೆಗೆ ಪರಿಸರ ಪ್ರೇಮಿ, ವನಸಿರಿ ತಂಡದ ಮಾರ್ಗದರ್ಶಕರಾದ ಶಂಕರಗೌಡ ಎಲೆಕೊಡ್ಲಿಗಿ ಅವರು ಕೂಡಾ ತಮ್ಮ 41ನೇ ಹುಟ್ಟು ಹಬ್ಬವನ್ನು ಸಸಿಗಳನ್ನು ನೆಡುವ ಮೂಲಕ ಆಚರಿಸಿಕೊಂಡು ಅಕ್ಸಿಜನ್ ಕ್ರಾಂತಿ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ವನಸಿರಿ ತಂಡದ ಏಳಿಗೆಗೆ ಸಹಕರಿಸುತ್ತಿರುವುದು ಶ್ಲಾಘನೀಯ. ವನಸಿರಿ ತಂಡದ ಆಕ್ಸಿಜನ್ ಕ್ರಾಂತಿ ಯೋಜನೆ ರಾಜ್ಯಾದ್ಯಂತ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಶ್ರೀ ಚನ್ನಬಸವನಗೌಡ ಮು.ಗು ,
ಶ್ರೀ ಪೊಂಪಾಪತಿ ಕೆ ಎಸ್ ಮು. ಗು, ಶಿವಕುಮಾರ ಸ್ವಾಮಿ, ಸಿದ್ದರಾಮಯ್ಯ ಹಿರೇಮಠ,
ಚನ್ನಪ್ಪ, ಶಿವಕುಮಾರ ಆನಂದ, ಶ್ರೀಮತಿ ರಂಗಮ್ಮ,
ಶ್ರೀಮತಿ ಚನ್ನಮ್ಮ, ಶ್ರೀಮತಿ ರಾಧಾ ಕೀರ್ತಿ,ಶಂಕರಗೌಡ ಎಲೆಕೊಡ್ಲಿಗಿ, ರಾಜು ಪತ್ತಾರ,ವೀರಭದ್ರಯ್ಯ ಸ್ವಾಮಿ ತಿಮ್ಮಾಪುರ, SN ವೀರೇಶ, ಉರ್ದು ಶಾಲೆಯ ಮುಖ್ಯ ಗುರುಗಳ ಹುಸೇನ್ ಬಾಷಾ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಹಾಗೂ ವಿದ್ಯಾರ್ಥಿಗಳು ಇದ್ದರು.
