
ಕಲಬುರಗಿ/ ಜೇವರ್ಗಿ: ಜೇವರ್ಗಿ ತಾಲೂಕ ಕ.ಸಾ.ಪ. ಅಧ್ಯಕ್ಷರಾದ ಶ್ರೀ ಎಸ್ ಕೆ ಬಿರಾದಾರ ರವರು ಹಾಗೂ
ನೆಲೋಗಿ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ತಾಯಮ್ಮ ಕಿರಣಗಿಯವರು ಪರಿಷತ್ ಧ್ವಜಾರೋಣ ನೆರವೇರಿಸಿದ ನಂತರ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಶ್ರೇಷ್ಠ ವಚನಕಾರರಾದ ಶ್ರೀ ಕೋಲ ಶಾಂತಯ್ಯನವರ ವೇದಿಕೆ ಮತ್ತು ಶೃಂಗಾರಗೊಂಡ ವಿವಿಧ ಶರಣ – ಸಂತರ ಮಹಾದ್ವಾರಗಳ ಮೂಲಕ ಸಮ್ಮೇಳನಾ ಸರ್ವಾಧ್ಯಕ್ಷರಾದ ಪೂಜ್ಯ ಮ.ನಿ.ಪ್ರ.ಡಾ. ಶಿವಾನಂದ ಮಹಾ ಸ್ವಾಮಿಗಳು ದಾಸೋಹ ಮಠ ಸೊನ್ನ ಮತ್ತು ಪೂಜ್ಯ ಶ್ರೀ ಮ.ನಿ.ಪ್ರ.ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತ ಮಠ ನೆಲೋಗಿಯವರ ಉಪಸ್ಥಿತರಾಗಿ ಸರಕಾರಿ ಪ್ರೌಢ ಶಾಲೆಯಿಂದ ಶ್ರೀ ಶರಣ ಕೋಲ ಶಾಂತಯ್ಯನವರ ವೇದಿಕೆಯವರೆಗೆ ಪೂಜ್ಯರು ವಿವಿಧ ರೀತಿಯ ಸಂಗೀತ ವಾದ್ಯಗಳ ಮೂಲಕ ವೇದಿಕೆಯನ್ನು ಪ್ರವೇಶಿಸಿದರು. ಈ ಮೆರವಣಿಗೆಯ ಉದ್ಘಾಟಕರಾಗಿ ಶ್ರೀ ಅಲ್ಲಮಪ್ರಭು ಪಾಟೀಲ್ ಶಾಸಕರು ಕಲಬುರಗಿ ದಕ್ಷಿಣ ಮತ ಕ್ಷೇತ್ರದವರು ಮಾಡಿದರು.
ಮೆರವಣಿಗೆಯಲ್ಲಿ ಗೌರವ ಉಪಸ್ಥಿತರಾದ ಕ.ಸಾ.ಪ.ಗೌರವ ಅಧ್ಯಕ್ಷರಾದ ಶ್ರೀ ಚನ್ನಮಲ್ಲಯ್ಯ ಹಿರೇಮಠ, ಜೇವರ್ಗಿ ತಹಶಿಲ್ದಾರರಾದ ಶ್ರೀ ಮಲ್ಲಣ್ಣ ಯಲಗೋಡ್, ಸಂಗನಗೌಡ ಪಾಟೀಲ್ ಸಿ ಡಿ ಪಿ ಓ ಜೇವರ್ಗಿ, ರಾಜೇಸಾಬ್ ನದಾಫ್, ಶಂಬುಲಿಂಗ ದೇಸಾಯಿ, ಶರಣು ಬಿಲ್ಲಾಡ, ಮಲ್ಲಿಕಾರ್ಜುನ ಕಲ್ಲೂರ, ಸುರೇಶ ಹಿರೇಮಠ, ರವಿಚಂದ್ರ ಗುತ್ತೇದಾರ, ಮಲ್ಲಣ್ಣ ಬಂಗಾರಿ, ಸೋಮಶೇಖರ ಯರಗಲ್ಲ, ಮಲ್ಲಿಕಾರ್ಜುನ ಮಂಗಾ, ರವಿ ಕಿರಣಗಿ, ಬಸವರಾಜ ದಬಕಿ ಹಾಗೂ ನೂರಾರು ಶಾಲೆಯ ವಿದ್ಯಾರ್ಥಿ ಶಿಕ್ಷಕರ ಜತೆಗೆ ಇತರರೆಲ್ಲಾ ಕನ್ನಡಾಭಿಮಾನಿಗಳು ಗೌರವ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಅಜಯ ಸಿಂಗ್ ಶಾಸಕರು, ಜೇವರ್ಗಿ ಹಾಗೂ ಕೆ ಕೆ ಆರ್ ಡಿ ಬಿ ಅಧ್ಯಕ್ಷರು ಕಲಬುರಗಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೆಲೋಗಿ ಗ್ರಾಮದ ಮಣ್ಣಿನ ಸತ್ವವು ಬಹಳ ಸದೃಢವಾಗಿದೆ ಏಕೆಂದರೆ ನಮ್ಮ ಗ್ರಾಮದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ತಾಕತ್ತಿದೆ ಅದೇ ರೀತಿಯಾಗಿ ೧೨ ಶತಮಾನದ ಶ್ರೇಷ್ಠ ವಚನಕಾರರಾದ ಶ್ರೀ ಕೋಲ ಶಾಂತಯ್ಯನವರು ನಮ್ಮೂರಿನವರೇ ಇರುವುದರಿಂದ ಅವರಿಗೆ ಒಂದು ಹೆಕ್ಟರ್ ಭೂಮಿ ಈಗಾಗಲೇ ಮೀಸಲಿಟ್ಟಿದ್ದೇವೆ ಮುಂಬರುವ ದಿನಗಳಲ್ಲಿ ಕೋಲ ಶಾಂತಯ್ಯನವರ ಸ್ಮಾರಕ ಮತ್ತು ಇತರೆ ಮೂಲಭೂತವಾಗಿರುವ ಕಾರ್ಯಗಳನ್ನು ನಾನು ಮಾಡೇ ಮಾಡುತ್ತೇನೆಂದು ಸಮಸ್ತ ಕನ್ನಡಾಭಿಮಾನಿಗಳು ಹಾಗೂ ಗ್ರಾಮಸ್ಥರ ಮುಂದೆ ಮಾತು ಕೊಟ್ಟರು.
ಕರ್ನಾಟಕ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೇದಾರಲಿಂಗಯ್ಯ ಹಿರೇಮಠ ಜ್ಯೋತಿ ಬೆಳಗಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಕ.ಸಾ.ಪ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯಕುಮಾರ ಪಾಟೀಲ್ ತೆಗಲ ತಿಪ್ಪಯ್ಯರವರು ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಶಿವಾನಂದ ಶಿವಯೋಗಿಗಳು ಸೊನ್ನ ಪೂಜ್ಯರು ಆಯ್ಕೆಯಾಗಿದ್ದಕ್ಕೆ ಖುಷಿ ಆಯ್ತು ಜತೆಗೆ ಅಕ್ಷರ ಜೋಳಿಗೆಯನ್ನು ಹಿಡಿದು ಜ್ಞಾನ ದಾಸೋಹಿಗಳಾದರು ಇದು ಐತಿಹಾಸಿಕ ನೆಲ ನೆಲೋಗಿಯ ಶಕ್ತಿ ಆಗಿದೆ ಎಂದು ಆಶಯ ನುಡಿಗಳನ್ನು ಆಡಿದರು.
ಇದೇ ಸಂದರ್ಭದಲ್ಲಿ ಶ್ರೀ ಶರಣಗೌಡ ಪಾಟೀಲ್ ಜೈನಾಪೂರವರ ಭಾವೈಕ್ಯತೆಯ ಬಿಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿರುವ ಷ.ಬ್ರ. ಡಾ. ಶಿವಾನಂದ ಮಹಾಸ್ವಾಮಿಗಳು ದಾಸೋಹ ಮಠ ಸೊನ್ನ ಹಾಗೂ ಷ.ಬ್ರ.ಶ್ರೀ ಡಾ. ಸಿದ್ದರಾಮ ಶಿವಾಚಾರ್ಯರು ತಪೋವನ ಮಠ ಶಖಾಪೂರ ವಹಿಸಿದರು, ಮಾಜಿ ಶಾಸಕರಾದ ಶ್ರೀ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಶ್ರೀ ಧರ್ಮರಾಜ ಓ ಒಡೆಯರ್, ಡಾ. ಕೆ ಎಸ್ ನಾಯಕ ಬದನಿಹಾಳ ಹಾಗೂ ಉಪಸ್ಥಿತರಿದ್ದರು ಇನ್ನೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ರಮೇಶ ಬಾಬು ವಕೀಲ, ರೇವಣಸಿದ್ದಪ್ಪ ಸಂಕಾಲಿ ಇದ್ದರು.
ಮಹಾಲಕ್ಷ್ಮಿ ಕಾಲೇಜು ಪ್ರಾಚಾರ್ಯರಾದ ಶ್ರೀ ಧರ್ಮಣ್ಣ ಬಡಿಗೇರ್ ನಿರೂಪಣೆ ಮಾಡಿದರು.
ಮಧುಸೂದನ ಚಿಂತಪನಳ್ಳಿಯವರು ಮುಂದಿನ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟು ಕಾರ್ಯಕ್ರಮಕ್ಕೆ ವಂದಿಸಿದರು.
ಕಾರ್ಯಕ್ರಮದ ಕೊನೆಯ ಘಟ್ಟವಾದ ಸಮಾರೋಪ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ.ಪ.ಬ್ರ.ರುದ್ರಮುನಿ ಶಿವಾಚಾರ್ಯರು ಕಡೋಳರವರು ವಹಿಸಿಕೊಂಡಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳ ಸ್ವಾಗತವನ್ನು ಸುರೇಶ ಪಾಟೀಲ್ ನೇದಲಗಿಯವರು ಸ್ವಾಗತಿಸಿದರು.
ಕಡಗಂಚಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಸಚಿವರಾದ ಶ್ರೀ ಆರ್ ಆರ್ ಬಿರಾದಾರ ಅದ್ಯಕ್ಷತೆಯನ್ನು ವಹಿಸಿದರು.
೭ ನೇ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಮತ್ತು ಗೋಷ್ಠಿಯ ಉಪನ್ಯಾಸಗಳಾದ ಶರಣ ಕೋಲ ಶಾಂತಯ್ಯನವರ ಸ್ಮಾರಕ ನಿರ್ಮಾಣ ಮಾಡಬೇಕು, ಜೇವರ್ಗಿ ಭಾಗದ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಬೇಕು, ನಮ್ಮ ಭಾಗದ ಶರಣ ಸ್ಮಾರಕಗಳು ಬಸವ ಕಲ್ಯಾಣದ ಅಭಿವೃದ್ಧಿ ಮಂಡಳಿಗೆ ಸೇರಿಸಬೇಕು ಎಂದು ಶ್ರೀ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ ಗೌರವ ಕಾರ್ಯದರ್ಶಿಗಳು ತಾಲೂಕಾ ಕ.ಸಾ.ಪ. ಜೇವರ್ಗಿಯವರು ನಿರ್ಣಯ ಮಂಡನೆ ಮಾಡಿದರು.
ಶ್ರೀ ಹರಿ ಕರಕಿಹಳ್ಳಿ ಗೌರವ ಕಾರ್ಯದರ್ಶಿಗಳು ಕ.ಸಾ.ಪ ಜೇವರ್ಗಿಯವರ ವಂದಿಸಿದರು.
ವರದಿ ಚಂದ್ರಶೇಖರ ಪಾಟೀಲ್, ಗುಡೂರ ಎಸ್ ಎನ್
