ವಿಜಯನಗರ/ಕೂಡ್ಲಿಗಿ :
ಕಾಡುಗೊಲ್ಲ ಬುಡಕಟ್ಟು ಅತ್ಯಂತ ಪ್ರಾಚೀನವಾದದ್ದು ಅರಣ್ಯ ನೀತಿಗಳು ಗಟ್ಟಿಯಾದಂತೆ, ಹುಲ್ಲುಗಾವಲು ಪ್ರದೇಶಗಳು ನಾಶವಾಗುವ ಹಿನ್ನೆಲೆಯಲ್ಲಿ ಪಶುಪಾಲನೆಯೂ ವಿರಳ ಅನಿಸಿತು. ಕಾಡುಗೊಲ್ಲ ಬುಡಕಟ್ಟಿನವರು ಆಧುನಿಕತೆಯ ಸಮಸ್ಯೆ – ಸವಾಲುಗಳಿಗೆ ಎದುರಾದ ಸಂದರ್ಭ 21 ನೆಯ ಶತಮಾನದಲ್ಲಿ ಪಶುಪಾಲನೆಯನ್ನು ಕಳೆದುಕೊಳ್ಳುತ್ತಿರುವ ಸ್ಥಿತಿಯನ್ನು ಗಮನಿಸಿದ ಸಂಘಟನೆಯಕಾರರು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರಿಗೆ ಮನವಿ ಮಾಡಿಕೊಂಡಿದ್ದರು. ಮಾನ್ಯ ಶಾಸಕರು ನೆಲಮೂಲ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬಂದಿರುವುದರಿಂದ ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಲು ಸಾಧ್ಯವಾಯಿತು. ಕೂಡಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿ, ಕಾನೂನಾತ್ಮಕ ಮತ್ತು ಸರ್ಕಾರದ ಗಮನಕ್ಕೆ ತಂದು, ತಾಲೂಕಿನ ಅಧಿಕಾರಿಗಳಿಂದ ಕಾಡುಗೊಲ್ಲ (ಪ್ರವರ್ಗ -1) ಎಂಬ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ಕೊಡಿಸುವಲ್ಲಿ ಯಶಸ್ವಿಯಾಗಿ ಜನರ ಮನ್ನಣೆಗೆ ಪಾತ್ರರಾದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
