ಹದಿನಾರು ಇಪ್ಪತ್ತರ ನಡುವಿನ ಬಾಲೆ
ಮಾರ ಹೊರಟಳು ರುದ್ರಾಕ್ಷಿ ಮಾಲೆ
ಸೆಳೆಯಿತು ಎಲ್ಲರ ಕಣ್ಣೋಟದ ಅಲೆ
ಅವಳೀಗ ತ್ರಿವೇಣಿ ಸಂಗಮದ ಶಿಲೆ
ಕೋಟಿ ಭಕ್ತರೊಳ ಆಧ್ಯಾತ್ಮದ ನಡುವೆ
ಕಂಡು ಬಂದಳೊಬ್ಬ ಸುಂದರ ಚೆಲುವೆ
ವೊಗದೊಳು ಹುಕ್ಕಿದ ಸೌಂದರ್ಯವೇ
ನಿನ್ನಂದಕೆ ಮಾರುಹೋಗಿದೆ ಈ ಜಗವು
ಇವಳ ಬಿಟ್ಟು ಇರಲಾರದು ಬೇರೆ ಲೋಕ
ತುಟಿಯಂಚ ನಗುವಲುಂಟು ಭೂ ನಾಕ
ದೇಹಸಿರಿಯೊಳಿಲ್ಲ ಕಿಂಚಿತ್ತೂ ಉಳುಕ
ಸಾಟಿ ಇಲ್ಲ ರಂಭೆ ಊರ್ವಶಿ ಮೇನಕಾ
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ : 9740199896.
