ನವದೆಹಲಿ : ನವದೆಹಲಿಯಲ್ಲಿ ಇಂದು ಅಂಗವಿಕಲ ವ್ಯಕ್ತಿಗಳ ಮುಖ್ಯ ಆಯುಕ್ತರು ಆಯೋಜಿಸಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಭಾರತೀಯ ದಿವ್ಯಾಂಗ ಸಬಲೀಕರಣ ಸಂಘದ (ನೋಂದಣಿ) ಸ್ಥಾಪಕ ಅಧ್ಯಕ್ಷ ಕೊಡಕ್ಕಲ್ ಶಿವಪ್ರಸಾದ್ ಅವರು ಸಕ್ರಿಯವಾಗಿ ಭಾಗವಹಿಸಿದರು.
ಚಿತ್ರದಲ್ಲಿ ಭಾರತ ಸರಕಾರದ ಅಂಗವಿಕಲ ವ್ಯಕ್ತಿಗಳ ಉಪ ಮುಖ್ಯ ಆಯುಕ್ತರಾದ ಶ್ರೀ ಪ್ರವೀಣ್ ಕುಮಾರ್ ಅಂಬಾಸ್ತ, ವಕೀಲ ಶ್ರೀ ರಾಹುಲ್ ಬಜಾಜ್, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಮತ್ತು ಇತರರನ್ನು ಕಾಣಬಹುದು.
