ಗೋಷ್ಠಿ: ಸಾಮಾಜಿಕ ಕಳಕಳಿಯ ಲೇಖಕಿ – ಡಾ.ಜಯದೇವಿ
ಬೀದರ್/ ಬಸವಕಲ್ಯಾಣ: ಡಾ.ಜಯದೇವಿ ಗಾಯಕವಾಡ ಅವರು ಹೊಸ ಕಾವ್ಯ ಪ್ರಕಾರದಲ್ಲಿ ಕೃಷಿ ಗೈದು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಸಾಹಿತ್ಯದ ನಲವತ್ತಕ್ಕೂ ಹೆಚ್ಚು ಕೃತಿ ರಚಿಸಿ ಸಾಹಿತ್ಯದ ಸಾಮಾಜಿಕ ಸಂವೇದನೆಯ ಗಟ್ಡಿ ಬರಹಗಾರ್ತಿಯಾದವರು. ಅವರ ಸಾಹಿತ್ಯದ ಸೇವೆ ಅನನ್ಯ ಎಂದು ಲೇಖಕಿ ಡಾ.ಶೀಲಾದೇವಿ ಬಿರಾದಾರ ನುಡಿದರು.
ಧರ್ಮ ಮಹಿಳಾ ಸಮಾವೇಶದ ಸರ್ವಾಧ್ಯಕ್ಷರ ಬದುಕು-ಧರ್ಮಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಮಾತನಾಡಿದರು.
ಇಲ್ಲಿ ಮಹಿಳೆಗೆ ಧರ್ಮ ಇಲ್ಲ. ಮಹಿಳೆಗೆ ದೈಹಿಕ, ಮಾನಸಿಕ,ನೈಸರ್ಗಿಕ ಮೀರಿದ್ದು ಧರ್ಮ. ಮಹಾನ್ ಸಾಧಕ ಮಹಿಳೆಯರು ಇದ್ದಾರೆ.ಸತ್ಯದ ದಾರಿ ಹಿಡಿದು ನಡೆಯುವುದು ಮಾನವೀಯ ಧರ್ಮವಾಗಿದೆ ಎಂದು ಭಾಲ್ಕಿಯ ಸಾಹಿತಿ ಡಾ.ಮಕ್ತುಂಬಿ ಎಂದು ಹೇಳಿದರು
ಧರ್ಮ ಮಹಿಳಾ ಸಮಾವೇಶದ ಸರ್ವಾಧ್ಯಕ್ಷರ ಬದುಕು-ಧರ್ಮ ಗೋಷ್ಠಿಯಲ್ಲಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರು,ಅಕ್ಷರ ದಾಸೋಹ ಅಧಿಕಾರಿ ಸಂಜಯಕುಮಾರ ಕಾಂಗೆ,ಜಿಲ್ಲಾ ಖಜಾಂಚಿ ಕ.ರಾ.ಪ್ರಾಸಾ.ದ ಅಲ್ಲಾವುದ್ದೀನ್ ಪಟೇಲ್, ಜಿಲ್ಲಾ ಸಂಘಟನಾ ಕಸರ್ಯದರ್ಶಿ ರಾಜಮತಿ ಕೊಳಾರೆ,
ಹುಮನಾಬಾದ ದಲಿತ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಶಿವರಾಜ ಡಿ.ಮೇತ್ರೆ,
ಸಾಹಿತಿ,ಪತ್ರಕರ್ತ, ಸಂಘಟಕರು ಸಂಗಮೇಶ ಜವಾದಿ, ಸಮಾವೇಶದ ಸರ್ವಾಧ್ಯಕ್ಷೆ ಡಾ.ಜಯದೇವಿ ಗಾಯಕವಾಡ ಉಪಸ್ಥಿತಿ ಇದ್ದರು.
ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ
ಡಾ.ಸಂಧ್ಯಾಕಾನೇಕರ ಮಾತನಾಡಿ ನಮ್ಮ ಮಹಿಳೆಯರಿಗಾಗಿ ಸಾವಿತ್ರಿ ಬಾಯಿ ಫುಲೆ ಮತ್ತು ಅಂಬೇಡ್ಕರ್ ಕೊಡುಗೆ ಇದೆ ಮೊದಲು ಮಹಿಳೆಯರು ಸಮಯಕ್ಕೆ ಸರಿಯಾಗಿ ಊಟಮಾಡಿ ಕೆಲಸ ಮಾಡಲು ಕೋರಿದರು.
ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು, ಡಾ.ಸಿದ್ದಪ್ಪ ಹೊಸಮನಿ ನಿರೂಪಿಸಿದರು. ಹಣಮಂತ ಶ್ರೀಂಗೇರಿ ವಂದಿಸಿದರು.
ಕವಿಗೋಷ್ಠಿ
ಪ್ರಚಲಿತ ಸಮಸ್ಯೆ ಒತ್ತು ನೀಡಿ – ಡಾ.ಕೆ.ಎಸ್.ಬಂಧು
ಕವಿಗೋಷ್ಠಿಯ ಆಶಯ ನುಡಿ ಆಡಿ ಬೀದರದ ಹಿರಿಯ ಸಾಹಿತಿ ಡಾ.ವಜ್ರಾ ಪಾಟೀಲ ಕವಿಗಳಿಗೆ ಕಮ್ಮಟ ಅವಶ್ಯ,ಜಿಲ್ಲೆಯ ಕೊಡುಗೆ ಅಪಾರವೆಂದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಕೆ.ಎಸ್.ಬಂಧು ವಹಿಸಿ ಕವಿಗಳು ಓದಬೇಕು ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುವ ಕಾವ್ಯ ರಚಿಸಬೇಕೆಂದು ಕರೆ ನೀಡಿದರು. ಕವಿಗಳಾದ ಡಾ.ಅವಿನಾಶ ದೇವನೂರ, ಡಾ.ಸುಖದೇವಿ ಘಂಟೆ,ಲೀಲಾ ಸಂಗ್ರಮ,ಸಿದ್ಧಾರ್ಥ ಮಿತ್ರ,ಮಾಯಾದೇವಿ ಗೋಖಲೆ, ರವಿದಾಸ ಕಾಂಬಳೆ ಅವರು ಕವನ ವಾಚಿಸಿದರು.
ಡಾ.ಬಸವರಾಜ ದಯಾಸಾಗರ , ರಾಜಕುಮಾರ ಸಾಲಿ ಸಿಇಓ,ಹುಲ್ಲೆಪ್ಪ ಬೇಲೂರು ಸಿ ಅರ್.ಪಿ.ಸಸ್ತಾಪೂರ ವಲಯ ಉಪಸ್ಥಿತರಿದ್ದರು.
ಜೈಭೀಮ ಹೋಳಿಕೇರಿ ಸ್ವಾಗತಿಸಿದರು, ಆಕಾಶ ತೆಗನೂರ ನಿರೂಪಿಸಿದರು ಡಾ.ಮಲ್ಲಿನಾಥ ನಿಂಬರ್ಗೆ ವಂದಿಸಿದರು.
ತ್ರಿವಿಧ ದಾಸೋಹಿ ತಾಯಿ-ಪೂಜ್ಯ ಶಾಂತ ಭೀಷ್ಮ ಸ್ವಾಮೀಜಿ
ಗುರುವಿನ ದಾರಿಯಲ್ಲಿ ನಡೆದು ಆಧ್ಯಾತ್ಮ ಜೀವನ ರೂಪಿಸಿಕೊಂಡು ಜನರಿಗೆ ಬೇಕಾದ ಸಮಸ್ಯೆ ಗೆ ಪರಿಹಾರ ನೀಡಿ ಗುರುವಿನ ಗದ್ದುಗೆ ಸ್ಥಾಪಿಸಿ ಮಠ ಕಟ್ಟಿ ಅಕ್ಕನಂತೆ ವೈರಾಗ್ಯ ತಾಳಿ ಮಹಾದೇವಿ ತಾಯಿ ಅಕ್ಷರ,ಅನ್ನ,ಆಧ್ಯಾತ್ಮ ದಾಸೋಹದ ಮಾಡಿದ ತ್ರಿವಿಧ ದಾಸೋಹಿ ಮಹಾದೇವಿ ತಾಯಿ ಅಮ್ಮ ನವರು ಎಂದು ಜಗದ್ಗುರು ಪೂಜ್ಯ ಶಾಂತ ಭೀಷ್ಮ ಚೌಡಯ್ಯನವರು ಮಹಾಸ್ವಾಮಿಗಳು ಸುಕ್ಷೇತ್ರ ನರಸಿಪುರ ಹಾವೇರಿ ಆಶೀರ್ವಚನ ನೀಡಿದರು.
ಸಸ್ತಾಪೂರದ ಯಲ್ಲಾಲಿಂಗೇಶ್ವರ ಮಠದಲ್ಲಿ ಜರುಗಿದ ಪ್ರಥಮ ಮಹಿಳಾ ಸಮಾವೇಶದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮನುಕುಲದ ಉದ್ಧಾರ ಮಾಡಿದ ಶರಣೆ ಎಂದರು.
ಸಾನಿಧ್ಯವಹಿಸಿದ ಶಿವ ಕ್ಷೇತ್ರದ ಪೂಜ್ಯ ಸದಾನಂದ ಅಪ್ಪ ಅವರು ಧರ್ಮ, ಮಹಿಳೆ ನಮ್ಮ ಪಾಲಿನ ತಾಯಿ. ಹೀಗಾಗಿ ನಾವೆಲ್ಲರೂ ಒಂದಾಗಿ ನಡೆಯಬೇಕಾಗಿದೆ ಎಂದರು.
ಸ್ತ್ರೀಯರು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಮಹಿಳೆಯರು ಸಮಸ್ಯೆಯ ಕಡೆ ಗಮನ ಹರಿಸಲು ಮೀನುಗಾರಿಕೆ ನಿಗಮ ಮಂಡಳಿ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್ ಹೇಳಿದರು.
ಸರ್ವಾಧ್ಯಕ್ಷೆ ಡಾ.ಜಯದೇವಿ ಗಾಯಕವಾಡ ಮಾತನಾಡಿ ನಮ್ಮ ಮಹಿಳಾ ವರ್ಗ ಇಂದು ಮೇಲಕ್ಕೆ ,ಬರಲು ಎಲ್ಲರೂ ಶಿಕ್ಷಣ ಪಡೆದು ವೈಚಾರಿಕತೆಯಿಂದ ಬಾಳಿದಾಗ ಮಾತ್ರ ಸಾಧ್ಯವೆಂದರು.ಇಂತಹ ಹಳ್ಳಿಯಲ್ಲಿ ತಮ್ಮ ಹುಟ್ಡು ಹಬ್ಬದ ನಿಮಿತ್ಯ ಮಹಿಳಾ ಸಮಾವೇಶ ಮಾಡಿ ಅವರ ಸಾಧಕ ಭಾದಕಗಳ ಚಿಂತನೆಗೆ ಹಚ್ಚುವ ಕೆಲಸ ಮಹಾದೇವಿ ತಾಯಿ ಅವರ ಕಾರ್ಯ ಅನುಕರಣೀಯ ಎಂದರು.
ತಹಶಿಲ್ದಾರ ದತ್ತಾತ್ರೇಯ ಗಾದಾ ಮಾತನಾಡಿದರು. ಪೂಜ್ಯ ರತ್ನಕಾಂತ ಶಿವಯೋಗಿಗಳು,ಪೂಜ್ಯ ಮಹಾದೇವಿ ತಾಯಿ ಶರಣೆ ಸಾನಿಧ್ಯ ವಹಿಸಿದರು.
ಶಿವ ಕ್ಷೇತ್ರದ ಪೂಜ್ಯ ಸದಾನಂದ ಅಪ್ಪ ಅವರು ಧರ್ಮ, ಮಹಿಳೆ ನಮ್ಮ ಪಾಲಿನ ತಾಯಿ. ಹೀಗಾಗಿ ನಾವೆಲ್ಲರೂ ಒಂದಾಗಿ ನಡೆಯಬೇಕಾಗಿದೆ ಎಂದರು.
ಪ್ರಶಸ್ತಿ ಪುರಸ್ಕೃತರು:
ಡಾ.ಶಾಂತಪ್ಪ ಡಂಬಳ,ಬಸವರಾಜ ಐನೋಳಿ, ಡಾ.ಚಿನ್ನಾ ಆಶಪ್ಪ, ಡಾ.ರಾಜಕುಮಾರ ಮಾಳಗೆ, ಡಾ.ಚಿದಾನಂದ ಕುಡ್ಡನ್ನ,ಡಾ.ಅವಿನಾಶ ದೇವನೂರ,ಮಹಾದೇವ್ಪ ಸಿ.ಶಿವಶಣರ,ಅಶೋಕ ಕಟ್ಟಿ,ಡಾ.ಸುಖದೇವಿ ಗಂಟೆ,ಡಾ.ಹನಮಂತಪ್ಪ ನಡವಿನ ಕೇರಿ,ಮುತ್ತು ಗು.ಮನಳ್ಳಿ,ಅಜಯಕುಮಾರ,ದೀಪಕ ಕಮತರ,ಗುರಣ್ಣ ರೇವಣಸಿದ್ಧಪ್ಪ ಯಮನೂರ, ಭರಮಪ್ಪ ಈರಪ್ಪ ಹಿರೇಹೊಳಿ,ಅವರಿಗೆ ಪ್ರದಾನ ಮಾಡಲಾಯಿತು.
ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು ನವಲಿಂಗ ಪಾಟೀಲ ನಿರೂಪಿಸಿದರು ಗೌಡಪ್ಪ ಪಾಟೀಲ ವಂದಿಸಿದ ರು.ಶಿವಕುಮಾರ ಪಾಟೀಲ, ಪ್ರಕಾಶ ಪಾಟೀಲ, ಪ್ರತೀಕ ಮುಳೆ,ಭೀಮಾಶಂಕರ ಮಳೆ,ಹಾದೇವರೆಡ್ಡಿ,ನಾಗಪ್ಪ ಜಮಾದಾ,ಡಾ.ಸಿದ್ರಾಮ ವಾಘಮಾರೆ, ಬ್ರಹ್ಮಾರೆಡ್ಡಿ ಕೊಂತಾಮೆ,ವಿಜಯಲಕ್ಷ್ಮೀ ಪ್ತಕಾಶ,ಎಂ.ಎಂ.ತಂಬಾಕೆ, ಇತರರು ಇದ್ದರು.
