ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜಯಪುರ ಜಿಲ್ಲೆ ಅಲ್ಲದೆ ಕರ್ನಾಟಕದಲ್ಲಿ ನಂಬರ್ ಒನ್ : ಶ್ರೀ ಯುತ ಚೇತನ ಭಾವಿಕಟ್ಟಿ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಸ್ಥಳೀಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ “ದಿ ತಾಳಿಕೋಟಿ ಸಹಕಾರಿ ಬ್ಯಾಂಕ್ ನಿಯಮಿತ” ಆಡಳಿತ ಮಂಡಳಿಯ ಸದಸ್ಯರ ಆಯ್ಕೆ ಚುನಾವಣೆ ದಿನಾಂಕ ೧೯-೧-೨೦೨೫ ರಂದು ಚುನಾವಣೆ ನಡೆಸಲಾಗುತ್ತಿದೆ ಎಂದು ಚುನಾವಣಾ ಅಧಿಕಾರಿಗಳಾದ ಶ್ರೀ ಯುತ ಚೇತನ ಭಾವಿಕಟ್ಟಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದರು. ನಿಗದಿಯಾದ ದಿನಾಂಕದಂತೆ ಬ್ಯಾಂಕಿನ ಸಾಮಾನ್ಯ ಕ್ಷೇತ್ರದಲ್ಲಿ ೭ ಸದಸ್ಯರು ಆಯ್ಕೆ ಮಾಡಬೇಕಾಗಿದ್ದು ಅದಕ್ಕೆ ೧೪ ಅಭ್ಯರ್ಥಿಗಳು ಸ್ಪರ್ಧಿಸಿದ್ದರು ,ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದ ಪೈಕಿ ೪ ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಹಿಂದಳಿದ ಅ ಮತ್ತು ಬ ಎರಡು, ಪ.ಜಾತಿ ಪ.ಪಂಗಡ ತಲಾ ಒಬ್ಬರಂತೆ ಆಯ್ಕೆ ಮಾಡಬೇಕಾದಲ್ಲಿ ಒಂದೊಂದಕ್ಕೆ ಮೂರು ನಾಲ್ಕು ಜನ ಸ್ಪರ್ಧಿಸಿದ್ದರು ಆದರೆ ಈ ಚುನಾವಣೆ ಬೆಳಗಾವಿ ಪ್ರತಿಷ್ಟಿತ ಪಿ.ಎಲ್ .ಡಿ ಬ್ಯಾಂಕ್ ನ ಮಾನ್ಯ ಶ್ರೀ ಮತಿ ಮಹಿಳಾ ಮತ್ತು ಮಕ್ಕಳ ಸಚಿವೆಯರಾದ ಲಕ್ಷ್ಮೀ ಹೆಬ್ಬಾಳ್ಕರ ಮತ್ತು ಮಾನ್ಯ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಬ್ರದರ್ಸ್ ಚುನಾವಣೆಯಂತೆ ಬಿಂಬಿತವಾಗಿದೆ, ೨೫೦೦೦=೦೦ ಬಂಡವಾಳ ಹೂಡಿಕೆಯಿಂದ ಪ್ರಾರಂಭಗೊಂಡು ಇಂದು ರೂ. ೨.೫ ಕೋಟಿಯವರಗೆ ಸಂಸ್ಥೆಯನ್ನು ಬೆಳೆಸಿ ಗಣ್ಯಮಾನ್ಯರ ನೆನೆದು ಅವರ ನೆರಳಿನಂತೆ ಸಂಸ್ಥೆಯನ್ನು ಅವರಿಂದ ಇಂದಿನವರೆಗೂ ಸುಭದ್ರವಾಗಿ ಬೆಳೆಸಿ ಉಳಿಸಿಕೊಂಡು ಬಂದಿದ್ದಾರೆ ಹಳೆಯ ಪೆನಲ್ ಎಂದು ನಾಮಕರಣ ಮಾಡಿಕೊಂಡು ಚುನಾವಣೆ ಎಂಬ ಅಖಾಡದಲ್ಲಿ ಒಗ್ಗಟ್ಟಾಗಿ ಧುಮುಕಿ ಗೆಲ್ಲುವವರೆಗೂ ಎದುರಾಳಿಗಳಿಗೆ ಎದೆಗುಂದದೆ ತಾವು ಅಧಿಕಾರ ಅವಧಿಯಲ್ಲಿ ಮಾಡಿದ ನಿಸ್ವಾರ್ಥ ಸೇವೆಯಿಂದ ಮತ್ತು ಅದನ್ನು ಹಿರಿಯರು ಠೇವಣಿದಾರರ ಹಣ ಭದ್ರವಾಗಿ ಕಾಪಾಡಿಕೊಂಡು ಬಂದಿದ್ದರ ಪರಿಣಾಮವಾಗಿ ದಿನಾಂಕ ೧೯-೧-೨೦೨೫ ರಂದು ನಡೆದು ಒಟ್ಟು ೩೫೦೦ ಮತದಾರರ ಪೈಕಿ ೨೯೯೦ ಮತಗಳು ಚಲಾವಣೆಯಾಗಿದ್ದು ಅದೇ ದಿನ ಸಾಯಂಕಾಲ ೪:೫೦ ಘಂಟೆಯಿಂದ ಮತ ಎಣಿಕೆ ಪ್ರಾರಂಭಗೊಂಡು ರಾತ್ರಿ ೯ ಘಂಟೆಗೆ ಎಣಿಕೆ ಮುಕ್ತಾಯಗೊಂಡಿತು ನಂತರ ಚುನಾವಣಾಧಿಕಾರಿಗಳಾದ ಶ್ರೀ ಯುತ ಚೇತನ ಭಾವಿಕಟ್ಟಿ ಅವರು ಚುನಾವಣೆಯಲ್ಲಿ ಜಯಶಾಲಿಯಾದವರ ಪಟ್ಟಿ ಬಿಡುಗಡೆ ಮಾಡಿದರು.

ಸಾಮಾನ್ಯ ಕ್ಷೇತ್ರದಿಂದ
೧) ಶ್ರೀ ಮಾನ್ಯ ಕಾಶಿನಾಥ ಸಜ್ಜನ (ಬಿದರಕುಂದಿ) ೨೦೦೬
೨) ಶ್ರೀ ಮಾನ್ಯ ದತ್ತಾತ್ರೇಯ ಸುಬ್ಬಯ್ಯ ಹೆಬ್ಬಸೂರ ೧೭೮೫
೩) ಶ್ರೀ ಮಾನ್ಯ ಈಶ್ವರಪ್ಪ ಬ.ಬಿಳೇಭಾವಿ ೧೪೯೦
೪) ಶ್ರೀ ಮಾನ್ಯ ಧ್ಯಾಮನಗೌಡ ಕಲ್ಲನಗೌಡ ಪಾಟೀಲ (ಮಿಣಜಗಿ) ೧೪೫೨
೫) ಶ್ರೀ ಮಾನ್ಯ ಚಿಂತಪ್ಪಗೌಡ ಸಾ.ಯಾಳಗಿ (ಬ ಸಾಲವಾಡಗಿ) ೧೪೩೦
೬) ಶ್ರೀ ಮಾನ್ಯ ಮುರಿಗೆಪ್ಪ ಸಂ ಸರಶಟ್ಟಿ ೧೩೨೮
೭) ಹೊಸ ಫೈನಲ್ ಹೊಸ ಹುರಿಯಾಳುಗಳಾದ ಶ್ರೀ ಮಾನ್ಯ ಪ್ರಲ್ಹಾದಸಿಂಗ್ ಹಜೇರಿ ಅವರು ನಾಗಪ್ಪ ಚಿನಗುಡಿಯವರನ್ನು ಪರಾಭವಗೊಳಿಸಿ ೧೧೯೨ ಇವರೆಲ್ಲರೂ ಅಂಕಿ ಅಂಶಗಳಲ್ಲಿ ಕಾಣಿಸಿದ ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಎರಡನೆಯದಾಗಿ ಮಹಿಳಾ ಸಾಮಾನ್ಯ ಮೀಸಲು ಕ್ಷೇತ್ರದಿಂದ ಶ್ರೀ ಗಿರಿಜಾಬಾಯಿ ಕೊಡಗಾನೂರ ೨೧೧೦ ಮತ್ತು ಶ್ರೀ ಮತಿ ಶೈಲಾ ಬಡದಾಳೆ ೧೧೦೩ ಮತಗಳನ್ನು ಪಡೆದು ಜಯಗಳಿಸಿದರು ಹಿಂದುಳಿದ ಅ ವರ್ಗ ೩ ಅಭ್ಯರ್ಥಿಗಳ ಸ್ಪರ್ಧಿಸಿದ್ದರ ಪೈಕಿ ಮೀಸಲು ಕ್ಷೇತ್ರದಿಂದ ಶ್ರೀ ಮಾನ್ಯ ಅಮರಸಿಂಗ್ ಬಾಬು ಹಜೇರಿ ೧೫೧೮ ಮತಗಳನ್ನು ಪಡೆದು ಜಯಗಳಿಸಿದರು, ಹಿಂದುಳಿದ ಬ. ಮೀ. ಕ್ಷೇತ್ರ ೩ ಅಭ್ಯರ್ಥಿಗಳ ಸ್ಪರ್ಧೆಯ ಪೈಕಿ ಶ್ರೀ ಮಾನ್ಯ ಸುರೇಶ ಪಾಟೀಲ ೧೩೬೭ ಮತಗಳನ್ನು ಪಡೆದು ಜಯಗಳಿಸಿದರು.
ಪ. ಜಾತಿ ಮೀಸಲು ಕ್ಷೇತ್ರ ೩’ ಅಭ್ಯರ್ಥಿಗಳ ಸ್ಪರ್ಧೆಯ ಪೈಕಿ ಶ್ರೀ ಮಾನ್ಯ ರಾಮಪ್ಪ ಕಟ್ಟಿಮನಿ ೧೪೪೫ ಮತಗಳನ್ನು ಪಡೆದು ಜಯಗಳಿಸಿದರು , ಪ. ಪಂ. ಮೀಸಲು ಕ್ಷೇತ್ರ ೩ ಅಭ್ಯರ್ಥಿಗಳ ಸ್ಪರ್ಧೆಯಲ್ಲಿ ಸಂಜೀವಪ್ಪ ಬರದೇನಾಳ ೧೫೭೫ ಮತಗಳನ್ನು ಜಯಗಳಿಸಿದರು ಎಂದು ತಿಳಿಸಿದರು.
ಚುನಾವಣೆ ಸಹಾಯಕರಾಗಿ ಶ್ರೀ ಯುತ ಆರ್.ಬಿ.ಧಮ್ಮೂರಮಠ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗವರು, ಪಂಚಾಯತ ಬಿಲ್ ಕಲೆಕ್ಟರ್ ಮುದಿಗೌಡ ಎಮ್ ಮುಗಳಿ ಹಾಗೂ ಸಿಬ್ಬಂದಿ ವರ್ಗದವರು
ಈ ಚುನಾವಣೆಯಲ್ಲಿ ಭಾಗವಹಿಸಿದ್ದರು.
ಅಲ್ಲದೆ ಈ ಚುನಾವಣೆ ಬಂದೋಬಸ್ತ್ ಸಲುವಾಗಿ ಸ್ಥಳೀಯ ಆರಕ್ಷಕ ಸಿಬ್ಬಂದಿ ವರ್ಗದವರು ಚುನಾವಣೆ ಮೇಲುಸ್ತುವಾರಿಯಾಗಿ ಡಿ.ವೈ.ಎಸ್.ಪಿ ಬೆಲ್ಲದ‌‌ ನಂದಗಾವಿ , ಸಿ.ಪಿ.ಐ.ಮಲ್ಲಿಕಾರ್ಜುನ ತುಳಸಿಗೇರಿ, ಸ್ಥಳೀಯ ಪಿ.ಎಸ್.ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗದ ಪಿ.ಎಸ್.ಐ ಆರ್ ಎಸ್.ಭಂಗಿ ಭಾಗವಹಿಸಿದ್ದರು.
ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಜಯಗಳಿಸಿದವರ ಅಪಾರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ವರದಿಗಾರರು : ಸಂಗಮೇಶ ಸಿ ಚೌದರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ