ಕನ್ನಡವೆಂದರೆ ಬರಿ ಪದವಲ್ಲ
ಅಪಾರಜ್ಞಾನ ಸುಧೆಯ ಭಂಡಾರ
ಕರ್ನಾಟಕವೆಂದರೆ ಬರಿ ನಾಡಲ್ಲ
ಕೋಟ್ಯಾಂತರ ಜೀವನಾಡಿಗಳ ಆಗರ
ಕನ್ನಡವೆಂದರೆ ಕೇವಲ ನುಡಿಯಲ್ಲ
ಸಂಗೀತ ಸಾಹಿತ್ಯ ಕಲಾ ರಸಿಕರ ಕುಸುಮ
ಕರ್ನಾಟಕವೆಂದರೆ ಬರಿ ರಾಜ್ಯವಲ್ಲ
ಶ್ರೀಗಂಧ ಪಾವನ ತೀರ್ಥಗಳ ಸಂಗಮ
ಕನ್ನಡವೆಂದರೆ ಬರಿ ಕೋಶವಲ್ಲ
ಜ್ಞಾನಪೀಠ ಪಾರಿತೋಷಕಗಳ ಸಂಭ್ರಮ
ಕರ್ನಾಟಕವೆಂದರೆ ಕೇವಲ ಭೂಪಟವಲ್ಲ
ಕಲ್ಪತರು ದಾನ ದಾಸೋಹಿಗಳ ಉಗಮ
ಕನ್ನಡವೆಂದರೆ ಬರಿ ಉತ್ಸವವಲ್ಲ
ರವಿ ಶಶಿ ತಾರೆಯರ ನಿತ್ಯೋತ್ಸವ
ಕರ್ನಾಟಕವೆಂದರೆ ಬರಿ ತಾಣವಲ್ಲ
ಕಲಿತವರಿಗೆ ಅಮೃತ ನೆನೆದವರಿಗೆ ನೆರಳು
ಕನ್ನಡವೆಂದರೆ ಬರಿ ಸುಂದರ ಕಾವ್ಯವಲ್ಲ
ಸಾವಿರಾರು ವರುಷಗಳ ಇತಿಹಾಸ
ಕರ್ನಾಟಕವೆಂದರೆ ಬರಿ ನವೆಂಬರ್ ಒಂದಲ್ಲ
ಜೀವ ಗತ ಗತಾನುಕಾಲದ ಮಂದಹಾಸ
ಬೆಳೆಸಿ ಗೌರವಿಸುವುದು ನಮ್ಮ ಕೆಲಸ
- ಸತೀಶ ಗೋಡಿ
