
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕು ಗೊಜನೂರ ಗ್ರಾಮದಲ್ಲಿ ಪಂಚಾಯತ್ ಕಾರ್ಯಾಲಯದಲ್ಲಿ ವಚನ ರಕ್ಷಕ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜಯಂತಿಯನ್ನು ಇಂದು ಆಚರಿಸಲಾಯಿತು.

ಮಡಿವಾಳ ಮಾಚಿದೇವರು 12ನೇ ಶತಮಾನದ ಹಿರಿಯ ಶರಣರಾಗಿದ್ದರು, ಇವರು ಸಿಂದಗಿಯ ಹಿಪ್ಪರಗಿಯಲ್ಲಿ ಜನಿಸಿದ್ದರು. ‘ಕಲ್ಲಿದೇವರದೇವ’ ಅವರ ವಚನದ ಅಂಕಿತವಾಗಿದ್ದು 354 ವಚನಗಳು ಇಲ್ಲಿಯವರೆಗೆ ಲಭ್ಯವಾಗಿದೆ. ಇವರನ್ನು ‘ವೀರಭದ್ರ ದೇವರ ಸಂಭೂತ ಅವತಾರ ಪುರುಷ’ ನೆಂದು ಹೇಳಲಾಗುತ್ತದೆ. ಜ್ಞಾನಲೋಕದಿಂದ ಜ್ಯೋತಿಯನ್ನು ಬೆಳಗಿಸಿದ ಮಾಚಯ್ಯ ‘ನುಡಿದಂತೆ ನಡೆದ, ನಡೆದಂತೆ ನುಡಿದ’ ಶರಣರಲ್ಲಿ ಒಬ್ಬರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಭಾಗವಹಿಸಿದ್ದರು ಮಾಂತಗೌಡ್ರ.ಎಸ್. ಪಾಟೀಲ್, ನಿಂಗನಗೌಡ ಬಾಗವಾಡ, ಸಂಜೀವ್ ಮಡಿವಾಳರ, ಮುತ್ತಪ್ಪ ಮಡಿವಾಳರ, ಶರಣಪ್ಪ ಮಡಿವಾಳರ, ನಿಂಗಪ್ಪ ಮಡಿವಾಳರ, ಮಂಜುನಾಥ್ ಛಲವಾದಿ ಹಾಗೂ ಅಧಿಕಾರಿಗಳು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
