ಗದಗ: ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು,
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಕೂಡಲೇ ಬಿಡುಗಡೆ ಮಾಡಿ !
ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಂದ ಬೆಳವಣಕಿ ಗ್ರಾಮದ ಬಸ್ ನಿಲ್ದಾಣದಲ್ಲಿ ವಿಜಯೋತ್ಸವ
ಬೆಳವಣಕಿ ಗ್ರಾಮದ ಬಸ್ ಸ್ಟ್ಯಾಂಡ್ ನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಬೆಳವಣಕಿ ವಲಯ ಘಟಕದ ನೇತೃತ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ಇರುವ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನ ಕೂಡಲೇ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ ಅದಕ್ಕೆ ಕಾರ್ಮಿಕರು ವಿದ್ಯಾರ್ಥಿಗಳು ಅದನ್ನು ಸ್ವಾಗತಿಸಿ ವಿಜೃಂಭಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರೋಣ ತಾಲೂಕ್ ಸಂಚಾಲಕರು ಹನುಮಂತ ಮಾದರ ಮಾತನಾಡಿ ಈ ಗೆಲುವಿಗೆ ಕಾರಣರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಮಹಾಂತೇಶ್ ಕೆ ಅವರಿಗೆ ಮತ್ತು ರಾಜ್ಯ ಅಧ್ಯಕ್ಷರು ಕಾಮ್ರೆಡ್ ಬಾಲಕೃಷ್ಣ ಶೆಟ್ಟಿ ಅವರಿಗೆ ಹಾಗೂ ವಕೀಲರಾದ ಅಕ್ಷಿತಾ ಗೋಯಲ್ ಮತ್ತು ಆದಿತ್ಯ ಚಟರ್ಜಿ ಅವರಿಗೆ ಕಾರ್ಮಿಕರು ವಿದ್ಯಾರ್ಥಿಗಳು ರೋಣ ತಾಲೂಕ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸುವುದರ ಮೂಲಕ ಕರ್ನಾಟಕ ರಾಜ್ಯ ಹೈಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತ ಮಾಡುತ್ತೇವೆ ಎಂದು ಮಾತನಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರಾದ ಸಂಕಪ್ಪ ಕುರಹಟ್ಟಿ ಅವರು ಮಾತನಾಡಿ 2021 ರಿಂದ 2023 ರ ವರೆಗೆ ಬಾಕಿ ಇರುವ ಕಾರ್ಮಿಕ ಮಕ್ಕಳ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಆದಷ್ಟು ಬೇಗನೆ ಬಿಡುಗಡೆ ಮಾಡಿ ಎಂದು ಹೇಳಿ ರಾಜ್ಯ ಸರ್ಕಾರ ಕಾರ್ಮಿಕರಿಗೆ ವಂಚನೆ ಮಾಡಿದೆ ಶೈಕ್ಷಣಿಕ ಸಹಾಯ ಧನ ನೀಡದೆ ಸತಾಯಿಸುತ್ತಿದ್ದಾರೆ ಇದನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿ ದಾವೆಯನ್ನು ಹೂಡಿ ಇವತ್ತು ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ ಅದಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಸ್ವಾಗತಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ಹನಮಂತ ತಾಳಿ, ಚಾಂದಸಾಬ್ ಕೌಜಗೇರಿ , ಮುಸ್ತಾಕ್ ಯಲಿಗಾರ, ಪ್ರವೀಣ್ ದಾನಿ, ಖಾಜೇಸಾಬ್ ಮುಲ್ಲಾ , ಹುಸೇನ್ ಸಾಬ್ ಮುಲ್ಲಾ, ಶೇಖಪ್ಪ ಬಡಿಗೇರ್, ಮಂಜುನಾಥ ಮಾದರ, ಷಣ್ಮುಖ ಕುರಿ, ಮಹಾಲಿಂಗಪ್ಪ ಬಡಿಗೇರ್ , ಬೆಳ್ಳಪ್ಪ ಕಿರಟಗೇರಿ , ದ್ಯಾಮಣ್ಣ ಬಡಿಗೇರ್, ಮಮ್ಮದ್ ಸಾಹೇಬ್ ಮುಲ್ಲಾ, ಭಾಗವಹಿಸಿದ್ದರು.
