ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಕೊಡಹಳ್ಳಿ ಸರ್ಕಲ್ ನಿಂದ ಬಾಚಹಳ್ಳಿ ರೋಡಿನ ಅಣ್ಣೂರು ಗೇಟ್ ಬಳಿ ಗೂಡ್ಸ್ ಆಟೋ ಒಂದು ಗಾರೆ ಕೆಲಸಕ್ಕೆ ತೆರಳುತಿದ್ದ ಅಣ್ಣೂರು ಗ್ರಾಮದ ಚಂದ್ರಸ್ವಾಮಿ, ಮಾಕಯ್ಯರವರು ಎಂದಿನಂತೆ ಬೆಳಿಗ್ಗೆ 9ಗಂಟೆ ಸಮಯದಲ್ಲಿ ಕೆಲಸಕ್ಕೆ ಬೈಕ್ ನಲ್ಲಿ ತೆರಳುವಾಗ ಗುಂಡ್ಲುಪೇಟೆ ಕಡೆಯಿಂದ ಗೂಡ್ಸ್ ಆಟೋ ತುಂಬಾ ವೇಗವಾಗಿ ಬಂದು ಬೈಕ್ ಗೆ ಗುದ್ದಿದೆ. ಅದಾಗಿಯೂ ಆಟೋ ಡ್ರೈವರ್ ಬ್ರೇಕ್ ಹಾಕದ ಕಾರಣ ಸುಮಾರು ದೂರ ಉಜ್ಜಿಕೊಂಡು ಬಂದಿದೆ. ಹಾಗಾಗಿ ಬೈಕ್ ನಲ್ಲಿದ್ದ ಸವಾರನ ಬಲ ಗಾಲು ಮುರಿದಿದ್ದು ಇನ್ನೊಬ್ಬನಿಗೆ ತಲೆಗೆ ಬಲವಾದ ಏಟು ಬಿದ್ದಿದೆ. ಇದನ್ನು ಕಂಡ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಸೇರಿಸಿರಾದರೂ ಹೆಚ್ಚಿನ ಚಿಕಿತ್ಸೆಗೆ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಲಾಯಿತು.
ವರದಿ ಗುಂಡ್ಲುಪೇಟೆ ಕುಮಾರ್
