
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ
ಕುಳಗೇರಿ ಕ್ರಾಸ್ ( ಖಾನಾಪುರ ಎಸ್.ಕೆ )ನಲ್ಲಿ ಇಂದು ನೂತನವಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ
ಗ್ರಾಮದ ಪ್ರಾಥಮಿಕ ಶಾಲೆ ಕಟ್ಟಡ ಹಾಗೂ ನೂತನ ಬಿಸಿ ಊಟದ ಕೋಣೆ ಉದ್ಘಾಟನೆ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಚೇರಿ ಭೂಮಿ ಪೂಜೆಯನ್ನು ಜನಪ್ರಿಯ ಶಾಸಕರಾದ ಶ್ರೀ ಭೀಮಶೇನ ಬಿ ಚಿಮ್ಮನಕಟ್ಟಿ ಅವರು ನೆರವೇರಿಸಿಕೊಟ್ಟರು.

2023 – 24 ನೇ ಸಾಲಿನ ಬಾಗಲಕೋಟೆ ಜಿಲ್ಲೆ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ ರೂ.12.90 ಲಕ್ಷ ಎಸ್. ಸಿ.ಪಿ./ ಟಿ. ಎಸ್.ಪಿ ಅನುದಾನ ಅಡಿಯಲ್ಲಿ ಕುಳಗೇರಿ ಕ್ರಾಸ್ ಗ್ರಾಮದ ರೇಣುಕಾ ಹಾವರಗಿ ಇವರ ಮನೆಯಿಂದ ಸುರೇಶ ಚನ್ನದಾಸರ ಇವರ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ ಹಾಗೂ ಜಿಲ್ಲಾ ಪಂಚಾಯತ್ ಬಾಗಲಕೋಟೆ, ತಾಲೂಕು ಪಂಚಾಯತ್ ಬಾದಾಮಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬಾದಾಮಿ ತಾಲೂಕಿನ ಖಾನಾಪುರ ಎಸ್.ಕೆ. ಗ್ರಾಮ ಪಂಚಾಯತಿ ವ್ಯಾಪ್ತಿಯ( ಕುಳಗೇರಿ ಕ್ರಾಸ್)ದಲ್ಲಿ
10 ಟಿ ಪಿ ಡಿ ಸಾಮರ್ಥ್ಯದ ವಸ್ತು ಪುನಸ್ಪಂದನ ಸೌಲಭ್ಯ (ಎಂ.ಆರ್ .ಎಫ್.) ನಿರ್ಮಾಣ ಕಾಮಗಾರಿ 2023.24 ನೇ ಸಾಲಿನ ಸ್ವಚ್ಚ ಭಾರತ ಮಿಷನ್ ( ಗ್ರಾಮೀಣ)ಯೋಜನೆಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ M R F ಘಟಕ ಯೋಜನೆಯ ಅಂದಾಜು ಮೊತ್ತ 248.00 ಲಕ್ಷಗಳು ಇದರ ಭೂಮಿ ಪೂಜೆಯನ್ನು ಜನಪ್ರಿಯ ಶಾಸಕರಾದ ಶ್ರೀ ಭೀಮಸೆನ್ ಬಿ ಚಿಮ್ಮನಕಟ್ಟಿ ಇವರ ಅಮೃತ ಹಸ್ತದಿಂದ ನೆರವೇರಿತು.
ಇದೇ ಸಮಯದಲ್ಲಿ ಬಾದಾಮಿ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಭೀಮಶೇನ್ ಬಿ ಚಿಮ್ಮನಕಟ್ಟಿ ಅವರು ರಿಬ್ಬನ್ ಕತ್ತರಿಸುವ ಮೂಲಕ ನಾಡಕಛೇರಿಯ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ತಹಶೀಲ್ದಾರ್ ಮತ್ತು ಬಾದಾಮಿ ತಾಲೂಕಿನ ಪಿ.ಎಸ್. ಐ. ವಿಠ್ಠಲ್ ನಾಯಕ್, ಮತ್ತು ಪೊಲೀಸ್ ಸಿಬ್ಬಂದಿ,
ನಾಡಕಛೇರಿ ಸಿಬ್ಬಂದಿಗಳು, ಮತ್ತು ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು, ಎಲ್ಲಾ ಸುತ್ತ ಮುತ್ತಲಿನ ಗ್ರಾಮಸ್ಥರು ಯುವಕರು ,ಮುಖಂಡರು, ಹಿರಿಯರು ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ : ನಿಂಬಯ್ಯ ಕುಲಕರ್ಣಿ, ಬಾದಾಮಿ
