ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೈಕ್ರೋ ಫೈನಾನ್ಸ್ ಹಾಗೂ ಅಕ್ರಮ ಮೀಟರ್‌ ಬಡ್ಡಿ ದಂಧೆಕೋರರ ವಿರುದ್ಧ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷ ಬೃಹತ್ ಪ್ರತಿಭಟನೆ

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನದ್ಯಾಂತ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು ಹಾಗೂ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿದ್ದು ಇವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿ ಪಿ ಐ ಎಂ ಎಲ್ ಪಕ್ಷ ಹರಪನಹಳ್ಳಿ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.

ಈ ಸಮಯದಲ್ಲಿ ಸರ್ಕಾರಕ್ಕೆ ಎನ್ ಆರ್ ಎಲ್ ಎಂ ಯೋಜನೆಯಿಂದ 10 ಲಕ್ಷ ಬಡ್ಡಿ ರಹಿತ ಸಾಲ ನೀಡಲು ಕೋರಲಾಯಿತು.
ಹಾಗೂ ಮೈಕ್ರೋ ಫೈನಾನ್ಸ್ ಹಾಗೂ ಇನ್ನಿತರ ಎಲ್ಲಾ ಮೂಲಗಳಿಂದ ಮಾಡಿರತಕ್ಕಂತ ಸಾಲಗಳನ್ನು ಮನ್ನಾ ಮಾಡಲು ಕೋರಲಾಯಿತು ಫೈನಾನ್ಸ್ ಕಿರುಕುಳದಿಂದ ರಕ್ಷಣೆ ನೀಡಲು ಕೂಡಲೇ ಸಹಾಯವಾಣಿಯನ್ನು ತೆರೆಯಲು ಮನವಿಯನ್ನು ಸಹ ಸಲ್ಲಿಸಲಾಯಿತು
ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಸುಗ್ರೀವಾಜ್ಞೆ ಹೊರಡಿಸುವುದು ಸೇರಿದಂತೆ ಸಿದ್ದರಾಮಯ್ಯನವರಿಗೆ ಹಲವು ಬೇಡಿಕೆ, ಒತ್ತಾಯಗಳನ್ನು ಸೇರಿಸಲು ಮನವಿ ಮಾಡಲಾಯಿತು ಹರಪನಹಳ್ಳಿ ಅಕ್ರಮ ಬಡ್ಡಿ ದಂಧೆ ಕೋರರನ್ನು ಗಡಿಪಾರು ಮಾಡಲು ಮತ್ತು ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕಣ ದಾಖಲಿಸಬೇಕು ಹರಪನಹಳ್ಳಿ ತಾಲೂಕಿನಾದ್ಯಂತ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿದ್ದು ಇವರುಗಳಿಗೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಿ ಕಡಿವಾಣ ಹಾಕಿ ಯುವಕರ ಪ್ರಾಣ ಉಳಿಸುವ ಕೆಲಸ ಪೊಲೀಸ ಇಲಾಖೆ ಮಾಡಬೇಕೆಂದು ವಿನಂತಿಸಲಾಯಿತು.

ಮೈಕ್ರೋ ಫೈನಾನ್ಸ್ ಗಳ ವ್ಯವಸ್ಥಾಪಕರುಗಳನ್ನು ಕರೆಯಿಸಿ ಮೀಟಿಂಗ್ ಮಾಡಿ ಆರ್‌ಬಿಐ ಗೈಡ್ ಲೈನ್ಸ್ ರೀತಿಯಲ್ಲಿ ನಡೆಸಬೇಕು ಹಾಗೂ ಆಂಧ್ರಪ್ರದೇಶದಲ್ಲಿ ಆಗಿರತಕ್ಕಂತ ಘಟನೆಗಳನ್ನು ಮೇಲಕ್ಕೂ ಹಾಕಲಾಯಿತು ಇಲ್ಲಿಯೂ ಸಹ ಕರ್ನಾಟಕದಲ್ಲಿಯೂ ಸಹ ಆಂಧ್ರಪ್ರದೇಶದ ಮೈಕ್ರೋಫೈನಾನ್ಸ್ ಗಳ ರೀತಿ ಕರ್ನಾಟಕದಿಂದಲೂ ಸಹ ಮೈಕ್ರೋ ಫೈನಾನ್ಸ್ ಗಳು ರಾಜ್ಯ ಬಿಟ್ಟು ತೊಲಗಬೇಕೆಂದು ಪ್ರಾರ್ಥಿಸಿಕೊಳ್ಳಲಾಯಿತು ಇನ್ನು ಹತ್ತು ಹಲವಾರು ಬೇಡಿಕೆಗಳನ್ನು ಹಕ್ಕೊತ್ತಾಯಗಳ ಮಂಡಿಸಲಾಯಿತು.

ಈ ಸಂದರ್ಭದಲ್ಲಿ ಸಿ ಪಿ ಐ ಎಂ ಎಲ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂದೇರ್ ಪರಶುರಾಮ್, ತಾಲೂಕು ಕಾರ್ಯದರ್ಶಿ ಬಾಲಗಂಗಾಧರ್, ಐರ್ಲಾ ಜಿಲ್ಲಾಧ್ಯಕ್ಷ ಹುಲಿಕಟ್ಟಿ ಮೈಲಪ್ಪ, ಇಬ್ರಾಹಿಂ ಸಾಬ್, ಹುಲಿಕಟಿ ರಾಜಪ್ಪ k p r s, ಟಿ ಅಜ್ಜಪ್ಪ, ಹರಪನಹಳ್ಳಿ ಪಟ್ಟಣದ ಮುಬಿನಾಬಿ, ಸಿಂಗರಹಳ್ಳಿ ವೀರೇಶ್, ಕಾಯಕದಲ್ಲಿ ಕೊಟ್ರಪ್ಪ, ಜೋಗಿನ ನಾಗರಾಜ್, ಇಲ್ಲಿ ತಿಮ್ಮಪ್ಪ, ಹರಕನಾಳ ಶಾರದಮ್ಮ ರತ್ನಮ್ಮ, ಮಾಂತೇಶ್, ಹ್ಯಾರಡ ಬಸವರಾಜಪ್ಪ ಅಧ್ಯಕ್ಷರು ಗ್ರಾಮ ಪಂಚಾಯಿತಿ, ಯಾಸಿನ್ ಹರಪನಹಳ್ಳಿ ಮಹಬೂಬ್ ಸಾಬ್ ಹರಪನಹಳ್ಳಿ, ಸಿಪಿಐಎಂ ರಾಮ್ಮತ್, ಸಿ ಪಿ ಐ ಎಂ ಎಲ್ ಜಿಲ್ಲಾ ಸಮಿತಿ ಸದಸ್ಯರು ಗುಳೇದಹಟ್ಟಿ ಸಂತೋಷ್ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ