ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸಿರಿಬಿ ರಸ್ತೆಯಲ್ಲಿರುವ ಇಂದು ಕಾಲೇಜ್ ನಲ್ಲಿ
ಪ್ರವೇಶ ಪರೀಕ್ಷೆ ಮೂಲಕ 206 ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ 20ನೇ ವರ್ಷಕ್ಕೆ ಕಾಲಿಡುತ್ತಿರುವ ಇಂದು ಪಿ.ಯು. ಕಾಲೇಜ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ 50 ಲಕ್ಷ ರೂಪಾಯಿ ಸ್ಕಾಲರ್ ಶಿಪ್ ಗೆ ಮೀಸಲು.
ರಾಜ್ಯದಲ್ಲಿ ಸತತ 9 ಬಾರಿ ಫಸ್ಟ್ ರ್ಯಾಂಕ್ ಪಡೆದ ಕೊಟ್ಟೂರಿನ ಇಂದು ಪಿ.ಯು. ಕಾಲೇಜ್ ಆಡಳಿತ ಮಂಡಳಿವತಿಯಿಂದ ಈ ಭಾರಿ ಇಂದು ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್ (ಐ.ಟಿ.ಎಸ್.ಇ.) ಏಪ್ರೀಲ್ 13, 2025ರಂದು ಆಯೋಜಿಸಲಾಗಿದೆ. ಕಳೆದ ವರ್ಷ ಇದೇ ಪರೀಕ್ಷೆಗೆ 4200 ವಿದ್ಯಾರ್ಥಿಗಳು ಹಾಜರಾಗಿದ್ದರು, ನಂತರ 50 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ. 2 ವರ್ಷದ ಸಂಪೂರ್ಣ ಶುಲ್ಕವನ್ನು ಆಡಳಿತ ಮಂಡಳಿ ಭರಿಸಿತ್ತು. ಇಂದು ವಿದ್ಯಾಸಂಸ್ಥೆಯು 20ನೇ ವರ್ಷಕ್ಕೆ ಕಾಲಿಡುತ್ತಿರುವ ಸುಸಂದರ್ಭದಲ್ಲಿ 206 ವಿದ್ಯಾರ್ಥಿಗಳ ಅನುಕೂಲಕ್ಕಾಗಿ 50 ಲಕ್ಷ ರೂಗಳನ್ನು ಸ್ಕಾಲರ್ ಶಿಪ್ ಗಾಗಿ ಮೀಸಲಿಡಲಾಗಿದೆ. ರಾಜ್ಯದ ಯಾವುದೇ ಪ್ರೌಢಶಾಲೆಯಲ್ಲಿ (State, CBSE, ICSE) 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ದಿನಾಂಕ 13-04-2025ರ ಭಾನುವಾರದಂದು ಬೆಳಿಗ್ಗೆ 11.00 ಗಂಟೆಗೆ ಇಂದು ಕಾಲೇಜಿನಲ್ಲಿ ನಡೆಯುವ ಸಾಮಾನ್ಯ ಪರೀಕ್ಷೆಗೆ ಹಾಜರಾಗಬಹುದು. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ 206 ವಿದ್ಯಾರ್ಥಿಗಳಿಗೆ 50 ಲಕ್ಷ ರೂಗಳನ್ನು ಸ್ಕಾಲರ್ ಶಿಪ್ ಗಾಗಿ ಮೀಸಲಿಡಲಾಗುವುದು. ಇಂದಿನಿಂದ 10ನೇ ತರಗತಿ ವಿದ್ಯಾರ್ಥಿಗಳು ಅನ್ಲೈನ್ ಮೂಲಕ ನೋಂದಣಿ ಮಾಡಿಸಬಹುದು. ಐ.ಟಿ.ಎಸ್.ಇ. ಸಂಬಂಧಿಸಿದ ನೋಂದಣಿ ಕಾರ್ಯಕ್ಕೆ ಕಾಲೇಜಿನ ಮುಖ್ಯಸ್ಥರು ಅಧಿಕೃತ ಚಾಲನೆ ನೀಡಿದರು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಡಳಿತಾಧಿಕಾರಿ ವೀರಭದ್ರಪ್ಪ ತಿಳಿಸಿದರು. ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಾಗೀಶಯ್ಯ, ಪಿ.ಯು. ವಿಭಾಗದ ಮುಖ್ಯಸ್ಥರಾದ ಮಹೇಶ್ ಮತ್ತು ಹರೀಶ್ ಆಡಳಿತ ಮಂಡಳಿ ಪದಾಧಿಕಾರಿಗಳಾದ ಚಂದ್ರಪ್ಪ, ರಾಜೇಶ್ ಉಪಸ್ಥಿತರಿದ್ದರು. ಕಳೆದ ವರ್ಷ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ತಿಳಿಸಿದರು. ಉಪನ್ಯಾಸಕಿ ಕವಿತಾ ನಿರೂಪಿಸಿದರು, ಹಾಲೇಶ್ ಪ್ರಾರ್ಥಿಸಿದರು, ಪ್ರಜ್ವಲ್ ವಂದಿಸಿದರು.
