ಕೊಪ್ಪಳ: ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ “ಪದ್ಮಶ್ರೀ ” ಪ್ರಶಸ್ತಿ, ಈ ಬಾರಿ ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ , ತೊಗಲುಗೊಂಬೆಯಾಟದ ಶತಾಯುಷಿ, ಕಲಾವಿದೆ, ಶ್ರೀಮತಿ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳಿಕ್ಯಾತರ ಅವರಿಗೆ ಲಭಿಸಿರುವುದು, ಇಡೀ ದೇಶವೇ ಹೆಮ್ಮೆ ಪಡುವ ವಿಚಾರ. ಅವರು ತಮ್ಮ ಬಾಲ್ಯದಿಂದ, ಇಲ್ಲಿಯವರೆಗೆ ತೊಗಲುಗೊಂಬೆಯಾಟದ ಕಲೆಯನ್ನು ಪ್ರದರ್ಶನ ಮಾಡುತ್ತಾ ಆ ಜನಪದ ಕಲೆ ಇಂದಿಗೂ ಜೀವಂತವಾಗಿರವುದಕ್ಕೆ ,ಭೀಮವ್ವ,ಅವರು ಜೀವಂತ ಸಾಕ್ಷಿಯಾಗಿದ್ದಾರೆ ಅವರಿಗೆ ಈ ಸನ್ಮಾನ ಕೇವಲ ಸಾಂಕೇತಿಕ.
ಪದ್ಮಶ್ರೀ ಪ್ರಶಸ್ತಿ ಪಡೆದ ಭೀಮವ್ವ ದೊಡ್ಡ ಬಾಳಪ್ಪ, ಶಿಳ್ಳಿಕ್ಯಾತರ ಅವರನ್ನು ಕೊಪ್ಪಳದ ಪ್ರಧಾನ ಅಂಚೆ ಕಚೇರಿಯಲ್ಲಿ ಅನೇಕ ಸಾಹಿತಿಗಳು, ಕಥೆಗಾರ, ನಾಟಕಕಾರರ ಸಮ್ಮುಖದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ ಭಂಡಾರಿ, ಕಾರ್ಯದರ್ಶಿ ಡಾ.ಮಹಾಂತೇಶ ನೆಲಾಗಣಿ, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಹಾದಿಮನಿ, ಹಿರಿಯ ಸಾಹಿತಿ ಹೋರಾಟಗಾರ್ತಿ ಸಾವಿತ್ರಿ ಮುಜಮದಾರ್, ರವಿ ಕಾಂತನವರ್, ಅಲ್ಲಮಪ್ರಭು ಬೆಟ್ಟದೂರು, ನವ್ಯಾ ನೆಲಾಗಣಿ ಮತ್ತು ಅಂಚೆ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳು, ಭೀಮವ್ವನವರನ್ನು ಅವರ ಕಲೆಯನ್ನು ಕುರಿತು ಸುಧೀರ್ಘವಾಗಿ ಮಾತನಾಡಿದರು ಸಾವಿತ್ರಿ ಮುಜಮದಾರ್ ಅವರೂ ಅಜ್ಜಿಯ ಯಶೋಗಾಥೆಯನ್ನು ಬಿಚ್ಚಿಟ್ಟು
ಸಭೆಯಲ್ಲಿದ್ದವರೆಲ್ಲಾ ಹುಬ್ಬೇರಿಸುವಂತೆ ಮಾಡಿದರು.
ರವಿ ಕಾಂತನವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
