ಕಲಬುರಗಿ: ಫೆಬ್ರವರಿ 11 ರಂದು ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿ ಅಹಿಂಸಾ ಯೋಗಿನಿ, ವೀರ ಧರ್ಮಜ, ರೂಪರಹಿತ ಲಿಂ. ಮಾತಾ ಮಾಣಿಕೇಶ್ವರಿ ಅಮ್ಮನವರ
ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಕಲ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಶಾಸಕ ಬಸವರಾಜ್ ಮತ್ತಿ ಮಡು ಹೇಳಿದರು.
ಕಲಬುಗಿ೯ ನಗರದಲ್ಲಿ ಹಮ್ಮಿಕೊಂಡ ಶ್ರೀ ಮಾತಾ ಮಾಣಿಕೇಶ್ವರಿ ಅವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು 21ನೇ ಶತಮಾನದ ಜೀವಂತ ದೇವರಿಂದ ಪ್ರಸಿದ್ಧಿ ಪಡೆದಿದ್ದ ಶ್ರೀ ಮಾಣಿಕೇಶ್ವರಿ ಅಮ್ಮನವರ ಮೂರ್ತಿ ಪ್ರತಿಷ್ಠಾಪನಾ ಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದರು.
ಫೆಬ್ರವರಿ 9 ರಂದು ಮಾತಾ ಮಾಣಿಕೇಶ್ವರಿ ಅಮ್ಮನವರ ನೂತನ ಮೂರ್ತಿ ಮಹಾಗಾಂವಕ್ಕೆ ಬರಲಿದ್ದು ಮುತ್ತೈದೆಯರಿಂದ ತುಂಬಿದ ಕೊಡ, , ಡೊಳ್ಳು , ನಗಾರಿ ಹಾಗೂ ವಿವಿಧ ಭಜನೆ ತಂಡಗಳೊಂದಿಗೆ ಅಮ್ಮನವರ ಮೂರ್ತಿಯ ಮೆರವಣಿಗೆ ಆಯೋಜಿಸಲಾಗಿದ್ದು ಮೊದಲಿಗೆ ಮಹಾಗಾಂವ್ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿದ ನಂತರ , ಮಹಾಗಾಂವ್ ಕ್ರಾಸ್ ನಲ್ಲಿಯೂ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಗುತ್ತಿದೆ.
7 ರಿಂದ 10 ರ ವರೆಗೆ ಪ್ರವಚನ ಕಾರ್ಯಕ್ರಮ ಜರುಗಲಿದ್ದು 11 ರಂದು ಬೆಳಗ್ಗೆ 6 ಗಂಟೆಗೆ ಮೂರ್ತಿ ಪ್ರತಿಷ್ಠಾಪನೆ ಜರುಗಲಿದ್ದು, 8 ಗಂಟೆಗೆ ಪಲ್ಲಕ್ಕಿ ಉತ್ಸವ, ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1 ಗಂಟೆಗೆ ಧಾರ್ಮಿಕ ಸಭೆ ಜರುಗಲಿದೆ, ಅಂದಿನ ಧಾರ್ಮಿಕ ಸಭೆಗೆ ಯಾನಗುಂದಿಯ ಶ್ರೀ ಮಾತಾ ಮಾಣಿಕೇಶ್ವರಿ ಆಶ್ರಮದ ಕಾರ್ಯದರ್ಶಿ ಶ್ರೀ ಶಿವಯ್ಯ ಸ್ವಾಮಿ ಹಾಗೂ ಮಹಾಗಾಂವ ಕ್ರಾಸ್ ಆಶ್ರಮದ ಮಾತಾ ಸಂಗೀತೇಶ್ವರಿ ನೇತೃತ್ವ, ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳು ಸ್ವಂತ ಶ್ರೀ ಶರಣ ಶಂಕರ್ ಲಿಂಗ ಮಹಾರಾಜರು ವಿಠಲಪುರ ಶ್ರೀ ಶಾಂತಿಬಾಬಾ ದಂಡೋತಿ ಮಾತೋಶ್ರೀ ಜಯಶ್ರೀ ಮಾತಾ, ರಟಕಲ ಶ್ರೀ ರೇವಣಸಿದ್ದಪ್ಪ ಮುತ್ಯಾ, ಮಹಾಗಾಂವ ಶ್ರೀ ವಿರೂಪಾಕ್ಷ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಶಾಸಕ ಬಸವರಾಜ್ ಮತ್ತಿಮಡು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕೂರು ಸಾಯಿ ಬಣ್ಣ ತಳವಾರ್ ಕಾರ್ಯಕ್ರಮದ ಜ್ಯೋತಿ ಬೆಳಗಿಸಲಿದ್ದು ಯಾನಗುಂದಿ ಆಶ್ರಮದ ಖಜಾಂಚಿ , ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರ ಅಧ್ಯಕ್ಷತೆ ವಹಿಸಲಿದ್ದಾರೆ.
ಅಮ್ಮನವರ ಮೂರ್ತಿ ದಾನ ಮಾಡಿರುವ ಗದಗ ಜಿಲ್ಲೆಯ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಅಮ್ಮನವರ ನಾಗ ಸಿಂಹಾಸನ ಸಮರ್ಪಣೆ ಮಾಡಿರುವ ಚೆನ್ನವೀರ ಮಠಪತಿ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ, ಮಾಜಿ ಜಿ.ಪಂ. ಅಧ್ಯಕ್ಷ ಶಿವಪ್ರಭು ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್, ಕಲಬುರ್ಗಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಸಿತಿಕಂಠ ತಡಕಲ್, ಬಿಜೆಪಿ ಮುಖಂಡ ಶಿವಕುಮಾರ್ ಪಸಾರ, ಕೂಲಿ ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಕ್ಷಪ್ಪ ಜಮಾದಾರ್, ಕಮಲಾಪುರ ಕಸಾಪ ತಾಲೂಕಾಧ್ಯಕ್ಷ ಸುರೇಶ ಲೇಂಗಟಿ , ಮಹಾಗಾಂವ ಗ್ರಾಪಂ ಅಧ್ಯಕ್ಷೆ ಮನಿಷಾ ಹರಸೂರಕರ್, ಸುಭಾಷ್ ಕುಲೆ೯, ಮುರುಘೇಂದ್ರ ವೀರಶೆಟ್ಟಿ, ಮಲ್ಲಿಕಾರ್ಜುನ್ ಮರತೂರ ಕರ್, ಡಾ.ಅಂಬಾರಾಯ ಕಂಟಿಕರ್, ಮಹಾರುದ್ರಪ್ಪ ತಡಕಲ್ ಬಸವರಾಜ್ ನಾಟಿಕರ್ , ಬಸವರಾಜ್ ಬಾಜಾರಕೇರಿ, ಅಂಬರಾಯ ಜವಳಗಾ, ನರೇಶ್ ಹರಸುರಕರ್, ಆನಂದ ನಾಟಿಕರ್ , ಅರ್ಜುನ್ ನಾಟಿಕರ್ , ಸಂಜು ಕುಮಾರ್ ನೀರ್, ಸಂಜು ಕುಮಾರ್ ನಾಟಿಕರ್, ಸಂತೋಷ್ ನಾಟಿಕರ್ ಇತರರು ಭಾಗವಹಿಸಲಿದ್ದಾರೆ.
ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿರುವ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾಯ೯ಕ್ರಮದ ಆಮಂತ್ರಣ ಪತ್ರಿಕೆಯನ್ನು ಶಾಸಕರಾದ ಬಸವರಾಜ ಮತ್ತಿಮಡು ಬಿಡುಗಡೆ ಮಾಡಿದರು, ಟ್ರಸ್ಟ್ ಸದಸ್ಯರಾದ ಬಸವರಾಜ ನಾಟೀಕಾರ, ಬಸವರಾಜ ಬಾಜರಕೇರಿ, ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಲೇಂಗಟಿ, ಮಹಾಗಾಂವ ಕೋಲಿ ಸಮಾಜದ ಅಧ್ಯಕ್ಷ ಆನಂದ ನಾಟೀಕರ್, ಬಾಳಪ್ಪ ನಾಟೀಕಾರ, ಕುಪ್ಪಣ್ಣ ಕರಲಗಿ, ಸಂಗಪ್ಪ ನಾಟೀಕರ, ಚಂದ್ರಶಾ ನೀರ್ ಇತರರು ಇದ್ದರು.
