ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶಿವಮೊಗ್ಗದ ಸೈಕಲ್ ಕ್ಲಬ್ ಸಹಯೋಗದಲ್ಲಿ, ಫೆಬ್ರವರಿ 9, ಭಾನುವಾರ ಬೆಳಿಗ್ಗೆ 6:30ಕ್ಕೆ ಸಾರ್ವಜನಿಕರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಸೈಕ್ಲೋಥಾನ್ ಆಯೋಜಿಸಿದೆ.
ಪ್ರತಿ ವರ್ಷ, ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ, ಇದನ್ನು ಕ್ಯಾನ್ಸರ್ ಬಗ್ಗೆ ಜಾಗೃತಿ ಹೆಚ್ಚಿಸಲು ಮತ್ತು ಅದರ ತಡೆಗಟ್ಟುವಿಕೆ, ಪತ್ತೆ ಮತ್ತು ಚಿಕಿತ್ಸೆ ಉತ್ತೇಜಿಸಲು ನಡೆಸಲಾಗುತ್ತದೆ. ಸಹ್ಯಾದ್ರಿ ನಾರಾಯಣ ಆಸ್ಪತ್ರೆ , ಜನರಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಈ ಜಾಗೃತಿ ಕಾರ್ಯಕ್ರಮಗಳ ಅಂಗವಾಗಿ, ಶಿವಮೊಗ್ಗ ಸೈಕಲ್ ಕ್ಲಬ್ ಸಹಯೋಗದಲ್ಲಿ ಸೈಕ್ಲೋಥಾನ್ ಆಯೋಜಿಸಲಾಗಿದೆ. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀಯುತ ವರ್ಗಿಸ್ ಪಿ. ಜಾನ್ರವರು ಮತ್ತು ಆಡಳಿತ ಮಂಡಳಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿವಮೊಗ್ಗದ ನಿವಾಸಿಗಳನ್ನು ಆಹ್ವಾನಿಸಿದ್ದಾರೆ.
ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕಡ್ಡಾಯವಾಗಿ ನೀಡಲಾದ QR ಕೋಡ್ ಅನ್ನು ಸ್ಕಾನ್ ಮಾಡಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಭಾಗವಹಿಸುವ ಎಲ್ಲರಿಗೂ ಆಸ್ಪತ್ರೆಯಿಂದ ವಿಶೇಷ ಉಡುಗೊರೆಗಳು ಇರುತ್ತವೆ.
ಸೈಕ್ಲೋಥಾನ್ ಮಾರ್ಗ:
ಸೈಕ್ಲೋಥಾನ್, ನಾರಾಯಣ ಕ್ಲಿನಿಕ್, ಕುವೆಂಪು ರಸ್ತೆ ಯಿಂದ ಪ್ರಾರಂಭವಾಗಿ ಉಷಾ ನರ್ಸಿಂಗ್ ಹೋಂ, ವಿನೋಬಾನಗರ ಪೊಲೀಸ್ ಠಾಣೆ, ಆಲ್ಕೋಳ ಸರ್ಕಲ್, ಗೋಪಾಳ ಬಸ್ ನಿಲ್ದಾಣ, NT ರಸ್ತೆ ಮೂಲಕ ಸಾಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಹರಕೆರೆಯಲ್ಲಿ ಅಂತ್ಯಗೊಳ್ಳಲಿದೆ.
ವಿಶೇಷ ಉದ್ದೇಶ
ಕ್ಯಾನ್ಸರ್ ತಡೆಯಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು, ಈ ವರ್ಷ “ಯುನೈಟೆಡ್ ಬೈ ಯೂನಿಕ್” ಎಂಬ ವಿಷಯದಡಿ ನಗರದ ಹೃದಯ ಭಾಗದಲ್ಲಿರುವ ನಾರಾಯಣ ಕ್ಲಿನಿಕ್ ನಲ್ಲಿ ಹಾಗೂ ಆಸ್ಪತ್ರೆಯ ಆವರಣದಲ್ಲಿರುವ ಕ್ಯಾನ್ಸರ್ ಕೇರ್ ವಿಭಾಗದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಕ್ಯಾನ್ಸರ್ ಅನ್ನು ಬಿಂಬಿಸುವ ವಿವಿಧ ಬಣ್ಣಗಳ ವಿದ್ಯುತ್ ದ್ವೀಪಗಳನ್ನು ಹಾಕಿ ಅಲಂಕರಿಸುವುದರ ಮೂಲಕ ನಗರದಲ್ಲಿನ ಎರಡು ಕಟ್ಟಡಗಳು ವಿದ್ಯುತ್ ದ್ವೀಪಗಳ ಅಲಂಕಾರದಿಂದ ಕಂಗೊಳಿಸುತ್ತಾ ಜನರಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವನ್ನು ಮೂಡಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 88844 92380 / 7.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
