ಮೈಸೂರು/ ಪಿರಿಯಾಪಟ್ಟಣ : ರಾಜ್ಯದ ತಂಬಾಕು ಬೆಳೆಗಾರರು ಸಂಕಷ್ಟದಲ್ಲಿದ್ದು ಅನಧಿಕೃತ ಬೆಳಗಾರರಿಗೆ ಹೆಚ್ಚುವರಿಯಾಗಿ ವಿಧಿಸಿರುವ ದಂಡವನ್ನು ತಕ್ಷಣ ಹಿಂಪಡೆಯಬೇಕೆಂದು ಕೇಂದ್ರ ವಾಣಿಜ್ಯ ಸಚಿವ ಪಿಯುಷ್ ಗೋಯಲ್ ರವರನ್ನು ಭೇಟಿ ಮಾಡಿ ಸಂಸದರಾದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಮನವಿ ಮಾಡಿದರು. ರಾಜ್ಯದಲ್ಲಿರುವ ತಂಬಾಕು ಬೆಳೆಗಾರರು ತಂಬಾಕು ಬೆಳೆದ ಈ ಬೆಳೆಯಿಂದಾಗಿ ಆರ್ಥಿಕವಾದ ಸಂಕಷ್ಟದಲ್ಲಿ ಇದ್ದಾರೆ ಹಲವಾರು ವರ್ಷಗಳಿಂದ ರೈತರು ಬೆಳೆದ ತಂಬಾಕಿಗೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ ಈ ಸಂದರ್ಭದಲ್ಲಿ ಪರವಾನಿಗೆ ಇಲ್ಲದೆ ತಂಬಾಕು ಬೆಳೆದ ಬೆಳೆ ಮಾರಾಟ ಮಾಡಲು ರೈತರಿಗೆ ದಂಡ ವಿಧಿಸುತ್ತಿರುವುದು ಎಷ್ಟು ಸರಿ ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಆದ್ದರಿಂದ ಈ ದಂಡವನ್ನು ಹಿಂಪಡೆದು ರೈತರಿಗೆ ತಾವು ಬೆಳೆದ ಬೆಳೆಯನ್ನು ದಂಡವಿಲ್ಲದೆ ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಸರ್ಕಾರದ ವಾಣಿಜ್ಯ ಸಚಿವರಾದ ಪಿಯುಷ್ ಗೋಯಲ್ ರವರಿಗೆ ಮನವರಿಕೆ ಮಾಡಿದರು ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು ಈ ಕುರಿತು ಶೀಘ್ರದಲ್ಲಿಯೇ ಉತ್ತಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ ತಂಬಾಕು ಬೆಳೆಗಾರರ ಕಷ್ಟಗಳನ್ನು ಪರಿಹರಿಸಲು ನಾನು ಯಾವುದೇ ತ್ಯಾಗಕ್ಕೂ ಸಿದ್ಧನಾಗಿದ್ದೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದ ಮಾನ್ಯ ಸಂಸದರು ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮಾನ್ಯ ಸಂಸದರ ಈ ಹೋರಾಟಕ್ಕೆ ಪಿರಿಯಪಟ್ಟಣ ತಾಲೂಕು ಬಿಜೆಪಿ ಅಧ್ಯಕ್ಷರಾದ ರಾಜೇಂದ್ರ ಅವರು ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ಎಂದಿಗೂ ತಾವು ರೈತರ ಪರವಾಗಿ ಹೋರಾಟ ಮಾಡಬೇಕೆಂದು ಅವರು ಕೋರಿದ್ದಾರೆ ನೀವು ರೈತರ ಪರವಾಗಿ ಇರಿ ರೈತರು ನಿಮ್ಮ ಪರವಾಗಿ ಇರುತ್ತಾರೆ ಎಂದು ಇವರು ಸಂಸದರಲ್ಲಿ ಮನವಿ ಮಾಡಿದರು.
ವರದಿ ಹೆಚ್.ಆರ್. ಶಂಕರ್
