ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ವತಿಯಿಂದ ಹಳೆಯ ಪಿಂಚಣಿ ಯೋಜನೆ (OPS ಹಕ್ಕೊತ್ತಾಯ) ಜಾರಿಗೊಳಿಸುವಂತೆ ಒತ್ತಾಯಿಸಿ ಧರಣಿ -ಉಪವಾಸ ಸತ್ಯಾಗ್ರಹ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಪ್ರತಿಭಟನಾ ಸ್ಥಳಕ್ಕೆ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರು ಭೇಟಿ ನೀಡಿ ಹಳೆಯ ಪಿಂಚಣಿ (OPS) ಯೋಜನೆಗೆ ಬೆಂಬಲ ನೀಡಿದರು.
ಕಳೆದ 2004 ರಿಂದ ನೇಮಕಾತಿಯಾದ ಎಲ್ಲಾ ಇಲಾಖೆಯ ಸರ್ಕಾರಿ ನೌಕರರಿಗೆ NPS ಎಂಬ ಹೊಸ ಪಿಂಚಣಿ ಯೋಜನೆ ಸೇರ್ಪಡೆ ಮಾಡಿ ಅನಿಶ್ಚಿತ ಪಿಂಚಣಿ ಯೋಜನೆಗೆ ದೂಡಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗುವುದರ ಮೂಲಕ ಪ್ರತಿಭಟಿಸಿ, ಸರ್ಕಾರಿ ನೌಕರರ ಹಕ್ಕುಗಳಿಗೆ,ಅವರ ನಿವೃತ್ತಿ ಕಾಲದ OPS ಪಿಂಚಣಿಗೆ ಒತ್ತಾಯಿಸಿ ವನಸಿರಿ ಫೌಂಡೇಶನ್ (ರಿ.) ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪುರವರು ಮತ್ತು ಅವರ ವನಸಿರಿ ತಂಡ ಸರ್ಕಾರಿ ನೌಕಾರಿಗೆ ಬೆಂಬಲ ಸೂಚಿಸುವುದರ ಮೂಲಕ ಅವರ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ರಾಯಚೂರು ಜಿಲ್ಲೆಯ ಶಿಕ್ಷಕರಾದ ಆದೇಶ ಶಿಕ್ಷಕರು,ದುರುಗಪ್ಪ ಗುಡದೂರು ಶಿಕ್ಷಕರು,ಹುಷನ್ ಬಾಷ್ ಉರ್ದು ಶಾಲೆ ಶಿಕ್ಷಕರ,ಶಾಂತರಾಜ ಮುಖ್ಯ ಗುರುಗಳು ಬೊಮ್ಮನಾಳ ಇದ್ದರು.
