ಚಿಟಗುಪ್ಪ : ಬೀದರ ನಗರದ ಬಸವ ಗಿರಿಯಲ್ಲಿ ಜರುಗಿದ ೨೩ನೇ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಂದಗೋಳ ಗ್ರಾಮದ ಬಸವ ಅನುಯಾಯಿ, ಪ್ರಗತಿಪರ ರೈತರು, ಹಿರಿಯ ಚಿಂತಕರಾದ ಬಂಡೆಪ್ಪಾ ಮೂಲಗೆ ರವರಿಗೆ ಶರಣ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಅಕ್ಕ ಗಂಗಾಂಬಿಕಾ ತಾಯಿಯವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಬಂಡೆಪ್ಪಾ ಮೂಲಗೆ ರವರಿಗೆ ಶರಣ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ದಿನನಿತ್ಯ ವಿಚಾರಗೋಷ್ಠಿಗಳು, ವಚನ ಗೋಷ್ಠಿಗಳು, ವಚನ ಸಂಗೀತೋತ್ಸವ, ವಚನ ನೃತ್ಯ ವೈಭವ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ಭವ್ಯ ಮೆರವಣಿಗೆ, ಅಷ್ಟೇ ಅಚ್ಚುಕಟ್ಟಾದಂತ ದಾಸೋಹ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯಗಳು ಸುಸೂತ್ರವಾಗಿ ಜರುಗಿದವು.
೨೩ನೇ ವಚನ ವಿಜಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಳ್ಳಲು ಕಾರಣೀಭೂತರಾದಂತ ಇಡೀ ನಾಡಿನ ಎಲ್ಲಾ ಬಸವ ಅಭಿಮಾನಿಗಳಿಗೂ, ವಿಶೇಷವಾಗಿ ಸ್ವಾಗತ ಸಮಿತಿಯ ಅಧ್ಯಕ್ಷರಿಗೂ, ಸ್ವಾಗತ ಸಮಿತಿ ಪದಾಧಿಕಾರಿಗಳಿಗೂ ಬಸವ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳಿಗೂ ಹಾಗೂ ಇನ್ನಿತರ ಎಲ್ಲಾ ಉಪಸಮಿತಿಗಳ ಪದಾಧಿಕಾರಿಗಳಿಗೂ ಹಾಗೂ ವಿಶೇಷವಾಗಿ ಅಕ್ಕನ ಬಳಗಕ್ಕೂ ಸೇರಿದಂತೆ ಸರ್ವ ಬಾಂಧವರಿಗೂ ಅಕ್ಕ ಗಂಗಾಂಬಿಕಾ ತಾಯಿಯವರು ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.
- ಸಂಗಮೇಶ ಎನ್ ಜವಾದಿ.
