ಚಾಮರಾಜನಗರ/ ಹನೂರು: ಆದಿವಾಸಿ ಸಮುದಾಯದ ಜನತೆಯ ಕಲ್ಯಾಣಕ್ಕೆ ಸಿದ್ದು ಆವಾಸ್ ಯೋಜನೆಯಡಿ ಜಿಲ್ಲೆಗೆ 3 ಸಾವಿರ ವಸತಿ ಅನುಕೂಲ ದೊರೆತಿದ್ದು ಅತಿ ಹೆಚ್ಚು ಹಾಡಿಗಳನ್ನು ಹೊಂದಿರುವ ಹನೂರು ವ್ಯಾಪ್ತಿಗೆ 1248 ವಸತಿಗಳನ್ನು ನೀಡಲಾಗಿದೆ ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಶಾಸಕ ಅಧ್ಯಕ್ಷತೆಯಲ್ಲಿ ಆಯೋಜನೆ ಮಾಡಲಾಗಿದ್ದ ಆದಿವಾಸಿ ಜನಾಂಗದ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಯಾರು ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರಿಗೆ ಆರು ತಿಂಗಳು ಅಥವಾ ಒಂದು ವರ್ಷದ ಒಳಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಭೂಮಿಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದರು.
ಸಮುದಾಯದ ಮುಖಂಡರುಗಳು ನಮ್ಮ ಬುಡಕಟ್ಟು ಜನಾಂಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ಕೊರತೆ ಇದೆ ಶಿಕ್ಷಕರ ನೇಮಕಾತಿಯಾಗದೆ ಇರುವುದರಿಂದ ಮಕ್ಕಳಿಗೆ ಕಲಿಯಲು ತೊಂದರೆಯಾಗುತ್ತಿದೆ ಖಾಯಂ ಶಿಕ್ಷಕರ ನೇಮಕ ಮಾಡಿದರೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಬುಡಕಟ್ಟು ಜನಾಂಗದ ಮಹಿಳೆ ಮಾತನಾಡಿ ನಮ್ಮ ಜನಾಂಗದವರಿಗೆ ಆರೋಗ್ಯ ಇಲಾಖೆಯಿಂದ ಯಾವುದೇ ರೀತಿಯ ಆರೋಗ್ಯ ತಪಾಸಣೆ ಮಾಡಲು ಇಲಾಖೆ ಸಿಬ್ಬಂದಿಗಳು ಬರುತ್ತಿಲ್ಲ ಎಂದು ಮಾತನಾಡಿದರು. ಹಾಗೆಯೇ
ಪೋನ್ನಾಚಿ ಹಾಗೂ ಮಿಣ್ಯಂ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಜೆ ನಾಲ್ಕು ಗಂಟೆಯವರೆಗೆ ಮಾತ್ರ ಚಿಕಿತ್ಸೆ ಸಿಗುತ್ತಿದೆ ನಮ್ಮಗೆ 24/7 ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವಂತೆ ಮಾಡಬೇಕೆಂದು ಶಾಸಕರಿಗೆ ಸಭೆಯಲ್ಲಿ ತಿಳಿಸಿದರು.
ನಮ್ಮ ಮುಖಂಡರಿಂದ ನಮ್ಮ ವಾಸ ಮಾಡಲು ಮನೆಯನ್ನು ಕೊಡಿಸಬೇಕೆಂದು ಮಾತನಾಡಿದ ರು
ಇದಕ್ಕೆ ಸ್ಪಂದಿಸಿದ ಶಾಸಕ ಎಂ.ಆರ್. ಮಂಜುನಾಥ್ ಸಕಾ೯ರದಿಂದ ಆದಿವಾಸಿಗೆ ಗ್ರಾಮವಾರು ಭೇಟಿ ನೀಡಿ ಯಾರಿಗೆ ಮನೆಯಿಲ್ಲ ಅವರಿಗೆ ಮನೆಯನ್ನು ನೀಡಲು ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮ್ತಾಜ್ ಬಾನು, ಪರಿಶಿಷ್ಟ ಪಂಗಡದ ಜಿಲ್ಲಾ ಕಲ್ಯಾಣ ಅಧಿಕಾರಿ ಬಿಂದ್ಯ, ಡಿಸಿಎಫ್ ಪರಮೇಶ್, ತಾಲೂಕು ಅಧಿಕಾರಿ ರಾಜೇಶ್, ಎಇಇ ಶಂಕರ್ , ಎಇ ರಂಗಸ್ವಾಮಿ, ಎಡಿ ರಾಧಾ, ಜೆಜೆ ಎಂ ಪೂರ್ಣಿಮಾ, ಶಿರಸ್ತೆದಾರ ಮಹಾದೇವ ನಾಯಕ, ವಿಎ ಕುಮಾರ್, ಪ್ರಥಮ ದರ್ಜೆ ಸಹಾಯಕ ಮಹೇಶ್ , ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ ಸಿ ಮಾದೇಗೌಡ, ಎಂ. ಜಡೆಸ್ವಾಮಿ, ರಂಗೇಗೌಡ, ಮಹದೇವಸ್ವಾಮಿ, ಹುಚ್ಚಯ್ಯ, ಕರಿಯಪ್ಪ, ವೀರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
