ನನ್ನ ಅಮ್ಮ ತುಂಬು ಕುಟುಂಬದ ತೇರಎಳೆಯುತ್ತಿರುವ ತ್ಯಾಗಮಯಿ.
ಕಷ್ಟವ ತಾನು ಉಂಡು ಸುಖವ ನಮಗೆ ಉಣಬಡಿಸಿದವಳು. ನಯವಾಗಿ ತಿದ್ದಿ ತೀಡಿದವಳು. ಸಂಸ್ಕಾರ ಬಿತ್ತಿ ಬೆಳೆಸಿ ಕಷ್ಟಕ್ಕೆ ಅಂಜದೆ ಮುನ್ನುಗಲು ಕಲಿಸಿರುವಳು. ಇದ್ದದ್ದರಲ್ಲೇ ಹಂಚಿತಿನ್ನುವುದ ಕಲಿಸಿದಳು. ಮೆಟ್ಟಿದ ಹುಟ್ಟಿದ ಮನೆಯೆಂದು ತಿಳಿದು ಯಾವುದಕ್ಕೂ ನೊಂದುಕೊಳ್ಳದೆ ಎಲ್ಲರೊಂದಿಗೆ ಹೊಂದಿಕೊಂಡು ಎಂದು ಬದುಕಿನ ಪಾಠವ ಕಲಿಸಿ ಗುರುವಾದಳು. ಅಮ್ಮ ಹೇಳಲು ಪದಗಳು ಸಾಕಾಗುವುದಿಲ್ಲ.
ನನ್ನ ಅತ್ತೆ ಕೂಡಾ ನನ್ನ ಮತ್ತೊಂದು ಅಮ್ಮ, ಕ್ರಮೇಣ ನಮ್ಮಿಬ್ಬರ ಭಾಂದವ್ಯ ತುಂಬಾ ಗಟ್ಟಿಯಾಗಿದೆ ನಂಗೆ ಅತ್ತೆಯೊಡನೆ ಸ್ನೇಹಿತೆಯಂತೆ ನನ್ನಂತರಾಳ ಹೇಳಿ ಕೊಂಡು ನಿರಾಳವಾಗುವೆ. ನನ್ನ ಪತಿಯನ್ನು ಸದ್ಗುಣಗಳ ಸಾಹುಕಾರನನ್ನಾಗಿ ಮಾಡಿದ್ದಾರೆ. ನಾ ಕೇಳುವ ಮುನ್ನವ ಎಲ್ಲವ ತಂದುಕೊಡುವರು. ನನಗೆ ಸಣ್ಣ ನೋವಾದರು ಸಂತೈಸುವರು. ಧಾರಾಳ, ಗುಣ, ಸಮಯದ ಸಾದ್ವಿನಿಯೋಗ, ಬದುಕಿನ ಜಾಣ್ಮೆ, ಶಿಸ್ತು ಸಂಯಮ ಸಹಕಾರಗುಣಗಳನ್ನು ಅವರನ್ನು ನೋಡಿ ಕಲಿತಿರುವೆ. ನನ್ನೆಲ್ಲಾ ಸಾಧನೆಗೆ ಪ್ರೀತಿಯಿಂದ ಪ್ರೋತ್ಸಾಹ ನೀಡುತ್ತಿದ್ದಾರೆ. ನನ್ನ ಅತ್ತೆಯ ಒಳ್ಳೆಯ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ.
✍️ಭವ್ಯ ಸುಧಾಕರ ಜಗಮನೆ
![](https://i0.wp.com/karunadakanda.com/wp-content/uploads/2023/06/IMG_20230605_071424.jpg?fit=344%2C664&ssl=1)