ಮೈಸೂರು ನಗರದಲ್ಲಿ ಪ್ರಚೋದನೆ ನೀಡಿ ಗಲಭೆ ಉಂಟು ಮಾಡಿ ಸಮಾಜದಲ್ಲಿ ಆಶಾಂತಿ ಉಂಟು ಮಾಡಿದ ಸತೀಶ್ ಅಲಿಯಾಸ್ ಪಾಂಡುರಂಗ ಅವರನ್ನು ಗಡಿಪಾರು ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ, ಕರ್ನಾಟಕ ಯುವ ಘರ್ಜನೆ ಅಧ್ಯಕ್ಷ ಉಮೇಶ್ ಧರಣಿ ನಡೆಸಿದರು.
ಮೈಸೂರು ನಗರದಲ್ಲಿ ಪ್ರಚೋದನೆ ನೀಡಿ ಗಲಭೆ ಉಂಟು ಮಾಡಿ ಸಮಾಜದಲ್ಲಿ ಆಶಾಂತಿ ಉಂಟು ಮಾಡಿದ ಸತೀಶ್ ಅಲಿಯಾಸ್ ಪಾಂಡುರಂಗ ಅವರನ್ನು ಗಡಿಪಾರು ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯುಸಿದ್ದಾರೆ.
ಎರಡು ಧರ್ಮಗಳ ನಡುವೆ ಘರ್ಷಣೆಗೆ ಕಾರಣವಾಗಿ, ಸಮಾಜದ ಸ್ವಾಸ್ಥ್ಯ ಕದಡಿದ ಸತೀಶ್ ಅಲಿಯಾಸ್ ಪಾಂಡುರಂಗ ಮೇಲೆ ರೌಡಿ ಪಟ್ಟಿ ತೆರೆದು ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆಯನ್ನು ಅವರು ಆಗ್ರಹಿಸಿದರು.
ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮತ್ತು ಕರ್ನಾಟಕ ಯುವ ಘರ್ಜನೆ ಅಧ್ಯಕ್ಷ ಉಮೇಶ್ ಇಂದು ಅಗ್ರಹಾರ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಧರಣಿ ನಂತರ ಮಾತನಾಡಿದ ತೇಜಸ್ವಿ,ನಮ್ಮ ಮೈಸೂರು ಶಾಂತಿ,ನೆಮ್ಮದಿಗೆ ಹೆಸರಾಗಿದೆ. ಆದರೆ ಸತೀಶ್ ಅಲಿಯಾಸ್ ಪಾಂಡುರಂಗ ನಂತವರಿಂದಾಗಿ ನಗರದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ, ಪೊಲೀಸರು ಕೂಡಲೇ ಆತನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
