
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಇಂದು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಿಣಜಗಿ ಕ್ಲಸ್ಟರ್ ಮಟ್ಟದ FNM ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ತಾಯಿ ವಿದ್ಯಾ ಸರಸ್ವತಿ ಫೋಟೋಗೆ ಊರಿನ ಮುಖಂಡರುಗಳಿಂದ ಶಾಲೆಯ ಶಿಕ್ಷಕರುಗಳಿಂದ ವಿದ್ಯಾರ್ಥಿಗಳಿಂದ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶಾಲೆಯ ಮುಖ್ಯ ಗುರುಗಳು ಹಾಗೂ ಊರಿನ ಹಿರಿಯ ಮುಖಂಡರು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಮುದ್ದು ವಿದ್ಯಾರ್ಥಿಗಳಿಗೆ ಚಟುವಟಿಕೆಗಳು, ಕಲಿಕಾ ಪದ ಬಂಧನ, ಸಂಧಿ ಹಾಡು, ವ್ಯವಹಾರಿಕ ಪತ್ರಗಳು, ಚಿತ್ರ ಹಲವು ಕಥೆ ಒಂದು ಇನ್ನು ಅನೇಕ ಶಿಕ್ಷಣದ ಕಾರ್ಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ನೆನಪಿನ ಶಕ್ತಿ ಕ್ರಿಯಾಯೋಜನೆಗಳನ್ನು ಗಮನಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಸಣ್ಣ ಸಣ್ಣ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು ಇದೇ ರೀತಿ ಎಲ್ಲಾ ಶಾಲೆಯಲ್ಲಿ ಕಲಿಕಾ ಹಬ್ಬ ಹಮ್ಮಿಕೊಂಡು ವಿದ್ಯಾರ್ಥಿಗಳ ನೆನಪಿನ ಶಕ್ತಿ ಕ್ರಿಯಾ ಚಟುವಟಿಕೆಗಳನ್ನು ಮಾಡುವುದರಿಂದ ಹೆಚ್ಚಿನ ಜ್ಞಾನ ದೊರೆಯುತ್ತದೆ ಎಂದು ತಿಳಿಸಿದರು. ಶಾಲೆಯ ಎಸ್. ಡಿ .ಎಂ .ಸಿ. ಅಧ್ಯಕ್ಷರಾದ ಆನಂದ್ಯಾ ಮದರಿಮಠ ಹಾಗೂ ಉಪಾಧ್ಯಕ್ಷರಾದ ಮುತ್ತು ಮನಹಳ್ಳಿ ಅವರು ಮಕ್ಕಳಿಗೆ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಶಾಲೆಯ ಶಿಕ್ಷಕರು, ಊರಿನ ಗಣ್ಯರುಗಳಾದ ಬಸನಗೌಡ ದೋರನಹಳ್ಳಿ , ಅಮರೇಶಗೌಡ ಪಾಟೀಲ, ಮಲ್ಲು ಬೋರಗಿ, ಪ್ರಭು ಪತ್ತೇಪೂರ , ಅನೇಕ ಮುಖಂಡರುಗಳು, ಶಿಕ್ಷಕರು ಸಹ ಶಿಕ್ಷಕರು ಉಪಸ್ಥಿತರಿದ್ದರು.
ವರದಿ ಉಸ್ಮಾನ ಬಾಗವಾನ (ಬಳಗಾನೂರ)
