ಗದಗ: ಸಭೆಯ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಶ್ರೀನಾಥ ಪೂಜಾರ ಅವರು ಮಾತನಾಡಿ ಪರಿಷತ್‌ನ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರದಲ್ಲಿನ ಸವಾಲುಗಳು, ವಸತಿ ನಿಲಯಗಳ ಸ್ಥಿತಿಗತಿಗಳ ಬಗ್ಗೆ ಹಾಗೂ ಡೊನೇಷನ್ ಹಾವಳಿಯಿಂದ ವಿದ್ಯಾರ್ಥಿಗಳನ್ನು ಮುಕ್ತಗೊಳಿಸುವ ಹೋರಾಟದ ರೂಪರೇಷೆಗಳ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಎಂ.ಕಡೇಮನಿ ಮಾತನಾಡಿ ಸರಕಾರ ದಿಂದ ಬರುವಂತಹ ಸೌಲಭ್ಯಗಳನ್ನ ಶೋಷಿತ ವಿದ್ಯಾರ್ಥಿಗಳಿಗೆ ಒದಗಿಸಿ ಕೊಡುವಂತ ಕೆಲಸ ಪದಾಧಿಕಾರಿಗಳು ಮಾಡಬೇಕು ಮತ್ತು ಹೊಸ ಪ್ರತಿಭೆಗಳನ್ನು ಪರಿಷತ್‌ಗೆ ಸೇರ್ಪಡೆ ಮಾಡಿ ಪರಿಷತ್ತನ್ನು ಬಲ ಪಡಿಸುವ ಕುರಿತು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಸುರೇಶ ವಾಯ್.ಚಲವಾದಿ ವಹಿಸಿಕೊಂಡು ಮಾತನಾಡಿ ಕಳೆದ 2008 ರಿಂದ ದಲಿತ ವಿದ್ಯಾರ್ಥಿ ಪರಿಷತ್ ಸಾಕಷ್ಟು ಶೋಷಿತ ವಿದ್ಯಾರ್ಥಿಗಳ ಪರ ಕೆಲಸ ಮಾಡುತ್ತಾ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗಾಗುವ ತೊಂದರೆಯನ್ನು ನಿವಾರಿಸತ್ತಾ ಬಂದಿದೆ. ಜಿಲ್ಲೆಯಲ್ಲಿ ಸುಸಜ್ಜಿತವಾದ ವಸತಿ ನಿಲಯವನ್ನು ನಿರ್ಮಾಣ ಮಾಡಲು ಪರಿಷತ್‌ನ ಹೋರಾಟ ಮಹತ್ತರವಾದದ್ದಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಪ್ರಾಸ್ಥಾವಿಕವಾಗಿ ಪರಿಷತ್‌ನ ಜಿಲ್ಲಾ ಮುಖಂಡ ಬಸವರಾಜ ಡಿ.ಮುಳ್ಳಾಳ ಮಾತನಾಡಿ ಪರಿಷತ್ ನಡೆದು ಬಂದ ದಾರಿಯನ್ನು ಮೆಲುಕು ಹಾಕಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಪರಿಷತಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಶ್ರೀನಾಥ ಪೂಜಾರ ಅವರು ನೂತನ ಪದಾಧಿಕಾರಿಗಳಿಗೆ ಆದೇಶ ಪ್ರತಿ ನೀಡಿದರು. ಸಭೆಯನ್ನು ಜಿಲ್ಲಾ ಸಂಪರ್ಕ ಕಾರ್ಯದರ್ಶಿ ಗುಡದಪ್ಪ ತಳಗೇರಿ ನಿರೂಪಿಸಿ ವಂದಿಸಿದರು.
ಇದೆ ಸಂದರ್ಭದಲ್ಲಿ ನೂತನ ರೋಣ ತಾಲೂಕು
ಉಪಾಧ್ಯಕ್ಷರಾಗಿ ಅಂದಪ್ಪ ಮಾದರ
ರೋಣ ತಾಲೂಕು ಮಹಿಳಾ ಅಧ್ಯಕ್ಷರಾಗಿ ರೇಖಾ ರಾಮುವಾಡಗಿ ರೋಣ ತಾಲೂಕು ಮಹಿಳಾ ಕಾರ್ಯದರ್ಶಿಯಾಗಿ ಅನ್ನಪೂರ್ಣ ಯಲಿಗಾರ
ಮುಂಡರಗಿ ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಮರಿಯಜ್ಜ ಎಂ. ಎಚ್.
ರೋಣ ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಮುತ್ತು ಕಡಬಿನ ಹೊಳೆಆಲೂರು ಹೋಬಳಿ ಸಂಚಾಲಕರಾಗಿ ಮಂಜುನಾಥ್ ಮಾದರ
ಮುಂಡರಗಿ ತಾಲೂಕು ಪ್ರದಾನ ಕಾರ್ಯದರ್ಶಿಯಾಗಿ ಶಶಾಂಕ ಎಸ್. ಕನ್ನಾರಿ
ಗದಗ ಜಿಲ್ಲಾ ಸಂಪರ್ಕ ಕಾರ್ಯದರ್ಶಿಯಾದಿ ಗುಡದಪ್ಪ ತಳಗೇರಿ ನರಗುಂದ ತಾಲೂಕು ಅಧ್ಯಕ್ಷರಾಗಿ ನೇತಾಜಿ ವೈ ನರಗುಂದ ಆಯ್ಕೆಯಾದರು.
ಈ ಸಂದರ್ಭದಲ್ಲಿ ರೋಣ ತಾಲೂಕಾಧ್ಯಕ್ಷ ರಮೇಶ ನಂದಿ, ನೂತನ ಉಪಾಧ್ಯಕ್ಷ ಅಂದಪ್ಪ ಮಾದರ, ಗದಗ ತಾಲೂಕಾಧ್ಯಕ್ಷ ಉಮೇಶ ಅಬ್ಬಿಗೇರಿ, ಉಪಾಧ್ಯಕ್ಷ ಮಂಜುನಾಥ ದೊಡ್ಡಮನಿ, ಮುಂಡರಗಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಶಶಾಂಕ ಕನ್ನಾರಿ, ರೋಣ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ರಾಮವಾಡಗಿ, ಪ್ರಧಾನ ಕಾರ್ಯದರ್ಶಿ ಅನ್ನಪೂರ್ಣ ಯಲಿಗಾರ, ಪರಿಷತ್‌ನ ಮುಖಂಡರಾದ ಸುಭಾಷ ಐಹೊಳಿ, ಚೇತನ ಸಿದ್ದಮ್ಮನಹಳ್ಳಿ, ಪ್ರವೀಣ ತೆಗ್ಗಿನಮನಿ ಮುಂತಾದವರು ಉಪಸ್ಥಿತರಿದ್ದರು.
