ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕಮಾಲಾಪುರ ಗ್ರಾ.ಪಂ ಉಪಾಧ್ಯಕ್ಷರಾಗಿ ಮಹಾದೇವಮ್ಮ ಅವಿರೋಧ ಆಯ್ಕೆಯಾದರು. 15 ಸದಸ್ಯರ ಬಲಾಬಲ ಹೊಂದಿರುವ ಗ್ರಾ.ಪಂ ಉಪಾಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆಯಲ್ಲಿ ನಡೆದ ಚುನಾವಣೆಯಲ್ಲಿ ಮಹಾದೇವಮ್ಮ ಹೊರತು ಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
2 ನೇ ಬಾರಿಗೆ ಉಪಾಧ್ಯಕ್ಷ ಸ್ಥಾನ
ಇದೇ ಅವಧಿಯ ಗ್ರಾ.ಪಂ ನೂತನ ಆಡಳಿತ ಮಂಡಳಿಯಲ್ಲಿ ಮೊದಲ ಎರಡೂವರೆ ವರ್ಷ ಅವಧಿಗೆ ಮಹಾದೇವಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಳಿಕ ಮತ್ತೊಮ್ಮೆ 2ನೇ ಬಾರಿಗೆ ಆಯ್ಕೆಯಾಗಲು ಯಶಸ್ವಿಯಾಗಿದ್ದಾರೆ. ವಿಜೇತರಿಗೆ ಗ್ರಾಪಂ ಅಧ್ಯಕ್ಷೆ ಪುಷ್ಪಾ ಅಂಕರಾಜು, ಸದಸ್ಯ ನಾಗಣ್ಣಸೇರಿ ಇನ್ನಿತರೆ ಸದಸ್ಯರು, ಮುಖಂಡರಾದ ಕಂಡಾಯನಪಾಳ್ಯ ಮಾದೇಶ್, ನಂಜುಂಡ ಶೆಟ್ಟರು, ಅಂಕರಾಜು, ಉದ್ದನೂರು ಸಿದ್ದರಾಜು ಸನ್ಮಾನಿಸಿದರು.
ವರದಿ ಉಸ್ಮಾನ್ ಖಾನ್
