
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣಗೊಂಡಿದ್ದ ಹಿಂದುಳಿದ ವರ್ಗಗಳ ಇಲಾಖೆಯ ಡಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯಗಳನ್ನು ಎನ್ ಟಿ ಶ್ರೀನಿವಾಸ್ ಅವರು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಆಶ್ರಯಗೂಡು ಆಗಿರುವ ನಿಲಯದಲ್ಲಿ ವಿದ್ಯಾಭ್ಯಾಸಗಳಿಗೆ ಯಾವುದೇ ಅಡಚಣೆಗಳು ಆಗಬಾರದು, ಇವತ್ತಿನ ಯುವ ಪೀಳಿಗೆ ಹಲವಾರು ಚಟಗಳಿಗೆ ಮಾರು ಹೋಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಂಡು ತಂದೆ ತಾಯಿ, ಗುರುಗಳಿಗೆ ಕೆಟ್ಟ ಹೆಸರು ತರಬಾರದು ಹಾಗೂ ನಿಲಯದಲ್ಲಿ ಸುಸಜ್ಜಿತವಾದ ಲೈಬ್ರೆರಿ, ಕಂಪ್ಯೂಟರ್, ಕೆಲವೊಂದು ಕ್ರೀಡೆಗಳಿಗೆ ಸಂಬಂಧಿಸಿದ ಸಾಮಗ್ರಿಗಳು ಹಾಗೂ ವಿದ್ಯಾರ್ಥಿಗಳಿಗೆ ಊಟ ತಿಂಡಿ ಯಾವುದೇ ಅಡಚಣೆಗಳಾಗದೆ ಸಮಯಕ್ಕೆ ಸರಿಯಾಗಿ ಒದಗಿಸಿಕೊಡುವುದು ನಿಲಯದ ಪಾಲಕರು ಹಾಗಾಗಿ ಸಿಬ್ಬಂದಿಗಳು ಎಚ್ಚರ ವಹಿಸಬೇಕು ಎಂದರು.
ಡಿ ದೇವರಾಜ ಅರಸು ಅವರ ಮಾಡಿಕೊಟ್ಟಿರುವಂತಹ ಹಿಂದುಳಿದ ವರ್ಗಗಳ ಸೇರಿ, ಎಲ್ಲಾ ವರ್ಗದವರಿಗೂ ವಸತಿ ನಿಲಯಗಳನ್ನು ಕಲ್ಪಿಸಿ ಕೊಟ್ಟಂತ ವ್ಯವಸ್ಥೆ ಇಂದಿನ ಬಡ ಕುಟುಂಬ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ಇದು ದೊಡ್ಡನೆಯ ಸಾಧನೆ ಅಂತ ಹೇಳಿದ್ರೆ ತಪ್ಪಾಗಲಾರದು ಎಂದರು, ಅಂದು ಅವರು ಈ ಯೋಚನೆ ಕಲ್ಪಿಸುತ್ತಿದ್ದಾರೆ ಇಂದು ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಆಶ್ರಯವಾಗಿರುವ ಅಂತ ಈ ನಿಲಯ ಇಲ್ಲಿಂದ ಕಲಿತವರು ಮುಂದೆ ದೊಡ್ಡ ದೊಡ್ಡ ಅಧಿಕಾರಿಗಳಾಗಿ ಮತ್ತೆ ಈ ನಿಲಯಕ್ಕೆ ಬಂದು ತಮ್ಮ ನೆನಪನ್ನು ಸ್ಮರಿಸುತ್ತಾರೆ ಎಂದರು. ವಿದ್ಯಾರ್ಥಿಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ತಹಶೀಲ್ದಾರ್ ಎಮ್ ರೇಣುಕಾ, ತಾಲೂಕು ಪಂಚಾಯತಿ ಇ.ಓ ನರಸಪ್ಪ, ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು, ಮತ್ತು ವಸತಿ ನಿಲಯದ ಮೇಲ್ವಿಚಾರಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಹ ಇದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
