
ಮೈಸೂರು: ರಾಜ ವಂಶಸ್ಥರೂ, ಮಾಜಿ ಸಂಸದರೂ ಆದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನ್ಮದಿನದ ಪ್ರಯುಕ್ತ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಅನಂತಾನಂತ ಪ್ರಣಾಮಗಳನ್ನು ಸಲ್ಲಿಸಿದ್ದಾರೆ.

ಮೈಸೂರಿನ ಯದುವಂಶದ ರಾಜ ಮನೆತನದ ಕೊಡುಗೆ ಕರ್ನಾಟಕ ರಾಜ್ಯಕ್ಕೆ ಮತ್ತು ಭಾರತ ದೇಶಕ್ಕೆ ಅಪಾರವಾದದ್ದು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಬಣ್ಣಿಸಿದ್ದಾರೆ.
ಅಲ್ಲದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಮ್ಮ ತಂದೆಯವರಾದ ರಾಜ್ಯ ಪ್ರಶಸ್ತಿ ಪುರಸ್ಕೃತರು ಮತ್ತು ಸಾಹಿತಿಗಳು, ಕನ್ನಡ ಚಳವಳಿಗಾರರಾದ, ಕನ್ನಡ ಯೋಧ ನ. ನಾಗಲಿಂಗ ಸ್ವಾಮಿ ಅವರ ಜೊತೆ ಅಪಾರ ಒಡನಾಟ ಹೊಂದಿದ್ದರು ಎಂದು ತೇಜಸ್ವಿ ಸ್ಮರಿಸಿದ್ದಾರೆ.
ಅವರ ಜನ್ಮದಿನವಾದ ಇಂದು ಅವರಿಗೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ತಿಳಿಸುತ್ತಾ ಅವರ ಆದರ್ಶಗಳನ್ನು ಪಾಲಿಸುವುದಾಗಿ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.
- ಕರುನಾಡ ಕಂದ
