ವಿಜಯನಗರ : ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದಿಂದ ಶ್ರೀಕ್ಷೇತ್ರ ಕೊಟ್ಟೂರಿನಲ್ಲಿ ಬಾಲ್‌ಬಾಕ್ಸ್ ಜೂಜಾಟ ನಿಷೇಧಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಅಮರೇಶ್ ಜಿ ಕೆ ಅವರಿಗೆ ಗುರುವಾರ ಮನವಿ ಪತ್ರ ನೀಡಿದರು.
ವಿಜಯನಗರ ಜಿಲ್ಲೆ ವ್ಯಾಪ್ತಿಯ ಮತ್ತು ಕೊಟ್ಟೂರು ತಾಲ್ಲೂಕಿನ ಸಾರ್ವಜನಿಕರು ಮತ್ತು ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದ ಈ ಮೂಲಕ ದೂರು ಸಲ್ಲಿಸಲಾಯಿತು.
ಕೊಟ್ಟೂರು ಪಟ್ಟಣದ ಆರಾಧ್ಯ ದೈವ, ಕ್ಷೇತ್ರನಾಥ ಶ್ರೀ ಗುರುಬಸವೇಶ್ವರ ಸ್ವಾಮಿ ರಥೋತ್ಸವವು ದಿ. 22-02-2025 ರಂದು ನಡೆಯುತ್ತಿದ್ದು, ಇದರ ಅಂಗವಾಗಿ ದಿ. 21-02-2025 ರಿಂದ 23-02-2025 ರವರೆಗೆ ಬೇರೆ ಬೇರೆ ಊರುಗಳಿಂದ ಸಾರ್ವಜನಿಕರು ತುಂಬಾ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಸದರಿ ಜಾತ್ರೆಯಲ್ಲಿ ಬಾಲ್‌ಬಾಕ್ಸ್ ಮತ್ತು ಆನೆ ಒಂಟೆ ಹಾಗೂ ಇನ್ನಿತರೆ ಜೂಜಾಟ ಆರಂಭವಾಗುವ ಸಂಭವವಿರುತ್ತದೆ. ಜೂಜಾಟಗಳು ಸಾರ್ವಜನಿಕರು ತಮ್ಮ ಹಣವನ್ನು ಕಳೆದುಕೊಳ್ಳುವ ಆಟವಾಗಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಬಾಲ್‌ಬಾಕ್ಸ್ ಹಾಗೂ ಇನ್ನಿತರೆ ಯಾವುದೇ ಜೂಜಾಟಗಳನ್ನು ನಿಷೇಧಿಸಬೇಕೆಂದು ಅಖಿಲ ಕರ್ನಾಟಕ ಕಿಸಾನ್ ಜಾಗೃತ ಸಂಘದ ವಿಜಯನಗರ ಜಿಲ್ಲೆ ಉಪಾದ್ಯಕ್ಷರು ಜಂಬೂರು ಮರುಳಸಿಧ್ದಪ್ಪ, ಕೊಟ್ಟೂರು ತಾಲೂಕು ಉಪಾಧ್ಯಕ್ಷರು ಎಸ್ ಎಸ್ ರಾಜಶೇಖರ್, ಪರುಸಪ್ಪ ಕೆ ಅಯ್ಯನಹಳ್ಳಿ, ಅಶೋಕ, ಪರುಶರಾಮ, ಮೂಗಪ್ಪ, ಮಾಬುಲಿ ಕೃಷಿಕ ಸಮಾಜದ ನಿರ್ದೇಶಕರು ಇತರರು ಇದ್ದರು.
- ಕರುನಾಡ ಕಂದ
