ಮಂಡ್ಯ : ಜಿಲ್ಲೆಯ ಹೊಸಹಳ್ಳಿ ಸರಕಾರಿ ಪ್ರೌಢಶಾಲೆಗೆ ಬ್ಯಾಂಕರ್ಸ್ ಕನ್ನಡಿಗರ ಬಳಗದ ವತಿಯಿಂದ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು.
ಬಳಗದ ಅಧ್ಯಕ್ಷ ಶ್ರೀ ವೆಂಕಟೇಶ ಶೇಷಾದ್ರಿ , ಕೆನರಾ ಬ್ಯಾಂಕ್ ನ ನಿವೃತ್ತ ವರಿಷ್ಠ ಪ್ರಬಂಧಕರಾದ ಶ್ರೀ ಚಂದ್ರಹಾಸ ಮತ್ತು ಅಡ್ವೈಸರ್ ಪತ್ರಿಕೆಯ ಸಂಪಾದಕ ಶ್ರೀ ಬಸವರಾಜು ರವರು ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿಯವರು ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
