ನಿನ್ನ ಸನ್ನಿಧಿಯ ಸ್ವಚ್ಛಗೊಳಿಸಿ
ರಂಗೋಲಿ ಚಿತ್ತಾರ ಬಿಡಿಸುವೆ
ನೇಮ ನಿಷ್ಠೆಯ ವ್ರತವ ಪಾಲಿಸಿ
ನಿನ್ನ ನಿತ್ಯವೂ ನೆನೆಯುವೆ
ಬಿಲ್ವ ಪಾತ್ರೆಯ ಪಾದಕೆ ಅರ್ಪಿಸಿ
ಶುದ್ಧ ಭಕುತಿಯ ತೋರುವೆ
ಕಾಮಧೇನುವಿನ ಕ್ಷೀರ ಸುರಿಸಿ
ನಿತ್ಯ ಮಜ್ಜನ ಮಾಡುವೆ
ಭಸ್ಮ ಚಂದನ ನೊಸಲಿಗಿರಿಸಿ
ನಿನ್ನ ನಾಮವ ಜಪಿಸುವೆ
ಜಾಗರಣೆ ಉಪವಾಸ ಅನುಸರಿಸಿ
ತಂಬಿಟ್ಟು ಫಲಾಹಾರ ತಂದಿಡುವೆ
ಅಜ್ಞಾನ ಅಂಧಕಾರ ನಾಶಗೊಳಿಸಿ
ಸುಜ್ಞಾನ ನೀಡೆಂದು ಕೇಳುವೆ
ಎನ್ನ ಕಾಯಕವ ನಿನಗೆ ಒಪ್ಪಿಸಿ
ಸಮಾಜದ ಏಳಿಗೆಗೆ ಬಾಳುವೆ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
