
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಂಪೌಂಡಿಗೆ ಹೊಂದಿಕೊಂಡಿರುವ ಚರಂಡಿ ಸ್ವಚ್ಛಗೊಳಿಸದೆ ದುರ್ವಾಸನೆ ಬೀರುತ್ತಿದೆ.
ಕೂಡಲೇ ಇದನ್ನು ಸ್ವಚ್ಛಗೊಳಿಸಿ ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ರಕ್ಷಿಸಿ ಎಂದು ವಿದ್ಯಾರ್ಥಿಗಳು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಶಾಲೆ ಕಾಂಪೌಂಡಿಗೆ ಹಾಗೂ ಬಿಸಿ ಊಟದ ಕೋಣೆಗೆ ಹತ್ತಿರದಲ್ಲಿರುವ ಚರಂಡಿಯಿಂದಾಗಿ ವಿದ್ಯಾರ್ಥಿಗಳು ಶಾಲೆಯಲ್ಲಿ ಕೊಡುವ ಮಧ್ಯಾಹ್ನದ ಬಿಸಿ ಊಟ ಮತ್ತು ವಿದ್ಯಾಭ್ಯಾಸ ಮೂಗು ಮುಚ್ಚಿಕೊಂಡೆ ಮಾಡುವಂತಾಗಿದೆ.
ಸಾರ್ವಜನಿಕರು ಕಸವನ್ನು ಶಾಲೆಯ ಪಕ್ಕದ ಚರಂಡಿಗೆ ಎಸೆಯದಂತೆ ಡಂಗೂರ ಸಾರಿ ನಮಗೆ ಸ್ವಚ್ಛತೆ ಒದಗಿಸಿಕೊಡಿ ಎಂದು ಮುದ್ದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.
- ಕರುನಾಡ ಕಂದ
