ರಾಯಚೂರು ತಾಲೂಕಿನ ಸರಕಾರಿ ಪ್ರೌಢಶಾಲೆ ಅಸ್ಕಿಹಾಳ ಶಾಲೆಯಲ್ಲಿ ಪ್ರಭಾರಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ವಿಜಯಲಕ್ಷ್ಮಿ ರವರಿಗೆ ಮೈಸೂರಿನ ಜಾನಪದ ಕಲಾವಿದರ ಒಕ್ಕೂಟದಿಂದ ಜಾನಪದ ಕಲಾ ರತ್ನ ಪ್ರಶಸ್ತಿ ದೊರೆತಿದೆ.
ಜಾನಪದ ಭಜನಾ ಮಂಡಳಿಗಳಿಗೆ ಹಾಗೂ ನಂದಿಕೋಲು ಕುಣಿತಗಾರರಿಗೆ ಇವರು ಪ್ರೋತ್ಸಾಹಿಸುತ್ತಿದ್ದು ಜಾನಪದ ಕಲೆಗಳು ಉಳಿಯುವಲ್ಲಿ ಇವರ ಸೇವೆಯನ್ನು ಗಮನಿಸಿ ಈ ಪ್ರಶಸ್ತಿ ದೊರೆತಿದೆ.
ಶಿಕ್ಷಕಿ ವೃತ್ತಿ ನಿರ್ವಹಿಸುತ್ತಲೇ ಜಿಲ್ಲೆಗೆ ಕೀರ್ತಿ ತಂದಂತಹ ಶ್ರೀಮತಿ ವಿಜಯಲಕ್ಷ್ಮಿ ರವರಿಗೆ ಶಾಲಾ ಶಿಕ್ಷಣ ಇಲಾಖೆ, ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
