ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಕನ್ನಡ ನಾಡಿನ ಹೆಮ್ಮೆ ವೀರವನಿತೆ ಒನಕೆ ಓಬವ್ವ ಚಿತ್ರದುರ್ಗದ ಕೋಟೆ ರಕ್ಷಣೆಗೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ
ವೀರ ವನಿತೆ ಓಬವ್ವ ಉತ್ಸವ ಆಚರಣೆಯ ಹಿರಿಮೆ ನಮ್ಮ ವಿಜಯನಗರ ಜಿಲ್ಲೆಯ ಹುಣಸೆ ನಾಡು ಕೋಟೆ ಕೊತ್ತಲಗಳ ನೆಲೆಬೀಡು, ಪಾಳೆಗಾರರ ನಾಡು ಕೂಡ್ಲಿಗಿ ತಾಲೂಕಿನ ಗುಡೇಕೋಟೆಗೆ ಸಲ್ಲುತ್ತದೆ.
ಇಂತಹ ಧೀರ ಮಹಿಳೆಯ ಹಿರಿಮೆಯ ನಾಡಿನ ನಂಟು ನಮ್ಮ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮಕ್ಕೆ ಸಲ್ಲುತ್ತದೆ ಎಂಬುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ.
2025ರ ಉತ್ಸವಕ್ಕೆ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾ ನಮ್ಮ ನೆಲದ ಹಿರಿಮೆಯನ್ನು ಪರಿಚಯ ಮಾಡಿಕೊಡುವ ಚಿಕ್ಕ ಪ್ರಯತ್ನವನ್ನು ಪಟ್ಟಿರುತ್ತಾರೆ.
ಇದೇ 24,25 ಫೆಬ್ರವರಿ 2025 ರಂದು ಜರುಗುವ ಉತ್ಸವಕ್ಕೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ರಾಜ್ಯದ ಪ್ರತಿಷ್ಠಿತ ಕಲಾವಿದರು, ಸ್ಥಳೀಯ ಕಲಾವಿದರು ಭಾಗವಹಿಸುತ್ತಿದ್ದಾರೆ ಈ ಕಾರ್ಯಕ್ರಮ ಯಶಸ್ವಿಗೊಳ್ಳಬೇಕಾದರೆ ಅತ್ಯಂತ ಪ್ರಮುಖ ಹಾಗೂ ಗೌರವಾನ್ವಿತ ಎಲ್ಲಾ ಸಾರ್ವಜನಿಕರು ಭಾಗವಹಿಸಬೇಕು ಹಾಗಿದ್ದಲ್ಲಿ ಈ ಕಾರ್ಯಕ್ರಮ ರಾಜ್ಯ ರಾಷ್ಟ್ರಮಟ್ಟಕ್ಕೆ ನಮ್ಮ ಸ್ಥಳೀಯ ಹಿರಿಮೆಯ ಓಬವ್ವನ ಧೈರ್ಯ ಶೌರ್ಯ ಸಾಹಸದ ಯಶೋಗಾಥೆ ತಲುಪಿಸಲು ಸಾಧ್ಯವಾಗುತ್ತದೆ ಹಾಗಾಗಿ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿ.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
