ಜೋಗರದೊಡ್ಡಿ (ಬಿಡದಿ) : ಮೊಬೈಲ್ ಆಕರ್ಷಣೆಯಿಂದಾಗಿ ಇಂದಿನ ಯುವಜನತೆಯು ಸಾಹಿತ್ಯದೆಡೆಗೆ ನಿರಾಸಕ್ತಿ ತೋರಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಬ್ಯಾಂಕರ್ಸ್ ಕನ್ನಡಿಗರ ಬಳಗದ ಅಧ್ಯಕ್ಷ ಶ್ರೀ ಎಂ ವೆಂಕಟೇಶ ಶೇಷಾದ್ರಿಯವರು ಅಭಿಪ್ರಾಯ ಪಟ್ಟರು. ಶ್ರೀಯುತರು ಬ್ಯಾಂಕರ್ಸ್ ಕನ್ನಡಿಗರ ಬಳಗದವರು ಜೋಗರದೊಡ್ಡಿ ಕೆನರಾ ಬ್ಯಾಂಕ್ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕರ್ನಾಟಕ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಿ ಮಾತನಾಡುತ್ತಿದ್ದರು. ಸಾಹಿತ್ಯ ಅಧ್ಯಯನದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ, ಬೌದ್ಧಿಕ ಸಾಮರ್ಥ್ಯವು ಹೆಚ್ಚಳವಾಗುವುದಲ್ಲದೆ, ಶಾಂತಿ ನೆಮ್ಮದಿಯ ಬದುಕನ್ನು ತಮ್ಮದಾಗಿಸಿಕೊಳ್ಳಬಹುದು ಎಂದರು.
ಕೆನರಾ ಬ್ಯಾಂಕ್ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯ ನಿರ್ದೇಶಕ ಶ್ರೀ ಕೆ ಶಿವರಾಂ ರವರು ಮಾತನಾಡಿ, ಕೆನರಾ ಬ್ಯಾಂಕ್ ನ ಎಲ್ಲಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಗಳಲ್ಲೂ ಸುಸಜ್ಜಿತ ಗ್ರಂಥಾಲಯವಿದೆ. ನಿಜವಾದ ಜ್ಞಾನ ಪುಸ್ತಕಗಳ ಅಧ್ಯಯನದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಈ ಗ್ರಂಥಾಲಯದ ಪೂರ್ಣ ಉಪಯೋಗವನ್ನು ಪಡೆದುಕೊಂಡು, ಸಾಹಿತ್ಯಾಭಿರುಚಿಯನ್ನು ಬೆಳಸಿಕೊಳ್ಳಬೇಕು ಎಂದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಈ ಕೆಳಗಿನವರು ವಿಜೇತರಾದರು:
ಪ್ರಥಮ ಬಹುಮಾನ-ಪ್ರಜ್ವಲ್ ವಿಠ್ಠಲ್ ಲಾಳಕಿ, ದ್ವಿತೀಯ ಬಹುಮಾನ: ಬಿ ಕೆ ಯಶವಂತ್ , ತೃತೀಯ ಬಹುಮಾನ: ಬಿ ಆರ್ ರಮೇಶ್ , ಪ್ರೋತ್ಸಾಹಕ ಬಹುಮಾನಗಳು: ಎಮ್ ಎಮ್ ಆದರ್ಶ್ ಮತ್ತು ಹೆಚ್ ವಿ ನೂತನ್ ಗೌಡ .
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಬಿ ಎಂ ಚಂದ್ರಶೇಖರ್, ಜಿ ಎಸ್ ಸಿದ್ದಪ್ಪ, ನರೇಶ್ ಕುಮಾರ್, ಶಿವಕುಮಾರ್, ಕೆ ಕಾವ್ಯ , ಎಂ ವೆಂಕಟೇಶ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
