ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಗೆ ಬರುವ ಅಮ್ಮನ್ ಕಾಲೋನಿಯಲ್ಲಿ ವಿವಿಧ ಬಡಾವಣೆ ಅಭಿವೃದ್ಧಿ ಕಾಮಗಾರಿಗೆ ಸುಮಾರು 200 ಲಕ್ಷ ರೂ. ವೆಚ್ಚದಲ್ಲಿ ಶಾಸಕ ಎ. ಆರ್. ಕೃಷ್ಣಮೂರ್ತಿ ಗುದ್ದಲಿ ಪೂಜೆ ನೆರೆವೇರಿಸಿದರು.
ನಂತರ ಮಾತನಾಡಿದ ಅವರು ಮುಸ್ಲಿಂ ಕಾಲೋನಿಗೆ ಚರಂಡಿ, ಸಿ.ಸಿ.ರಸ್ತೆ, ಅಮ್ಮನ್ ಕಾಲೋನಿಗೆ ಚರಂಡಿ ಸಿ.ಸಿ.ರಸ್ತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್, ರಾಜ್ ಕುಮಾರ್ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು. ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಕೊರಿಕೆ ಮೆರೆಗೆ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿ ರೂ. ನೀಡಿ ಮಂಜೂರು ಮಾಡಿದ್ದಾರೆ. ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ 56,000 ಕೋಟಿ ರೂ. ಹಣಕಾಸು ಕ್ರೂಢೀಕರಿಸಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ ಇಷ್ಟೊಂದು ಕಷ್ಟ ಸಮಯದಲ್ಲೂ ಮುಖ್ಯಮಂತ್ರಿಗಳು ನನ್ನ ಕ್ಷೇತ್ರಕ್ಕೆ 25. ಕೋಟಿ ರೂ. ನೀಡುವುದರಿಂದ ಕ್ಷೇತ್ರದ ಜನತೆಯ ಪರವಾಗಿ ಅವರಿಗೆ ನನ್ನ ಕೃತಜ್ಞೆತೆ ಸಲ್ಲಿಸುತ್ತೇನೆ ಹಾಗೂ ಯಳಂದೂರು ತಾಲ್ಲೂಕು ವೈ. ಕೆ. ಮೋಳೆ ಗ್ರಾಮದಿಂದ ಬಿಳಿಗಿರಿ ಬೆಟ್ಟದವರೆಗೆ ಸುಸಜ್ಜಿತ ರಸ್ತೆ ನಿಮಾರ್ಣಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅನುದಾನ ಬಿಡುಗಡೆ ಮಾಡಿದ್ದು ಟೆಂಡರ್ ಪ್ರಕ್ರಿಯೆ ನೆಡೆಯುತ್ತಿದೆ ಈ ಸಂದರ್ಭದಲ್ಲಿ ಅವರಿಗೂ ಕೂಡಾ ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾದ್ಯಕ್ಷ ಎ.ಪಿ. ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರುಗಳಾದ ರಾಘವೇಂದ್ರ, ಧರಣೇಶ್, ಬಸ್ತಿಪುರ ಶಾಂತರಾಜು ಪೌರಾಯುಕ್ತ ರಮೇಶ್, ಎ.ಇ.ಇ. ಸುರೇಶ್, ಜೆ.ಇ. ನಾಗೇಂದ್ರ, ಮುಖಂಡರುಗಳಾದ ‘ಚೇತನ್ ದೊರೆ ರಾಜ್, ಕುಂತೂರು ಮೋಳೆ ರಾಜೇಂದ್ರ, ಬಸ್ತಿಪುರ ಸ್ವಾಮಿ ನಂಜಪ್ಪ, ರವಿ, ಪುನೀತ್ ಸೇರಿದಂತೆ ಇತರರು ಇದ್ದರು.
ವರದಿ : ಉಸ್ಮಾನ್ ಖಾನ್
