ಕಲಬುರಗಿ ಜಿಲ್ಲೆಯ ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕಳಪೆ ಕಾಮಗಾರಿ ಅಥವಾ ನಕಲಿ ಕಾಮಗಾರಿ ಹೆಚ್ಚಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ ಆದ್ದರಿಂದ ಆಯಾ ತಾಲೂಕಿನ ಮತ್ತು ಪ್ರತಿ ಹಳ್ಳಿಯ ಯುವಕರು ಮಾಹಿತಿ ಹಕ್ಕಿನ ಕಾಯ್ದೆಯಡಿ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಕಾನೂನಾತ್ಮಕ ಹೋರಾಟ ಆರಂಭಿಸಬೇಕು ಅಂದಾಗ ಮಾತ್ರ ಪಾರದರ್ಶಕ ಆಡಳಿತ ವ್ಯವಸ್ಥೆಯ ಬದಲಾವಣೆಗಾಗಿ ಪ್ರತಿಯೊಬ್ಬರೂ ಮುಂದಾಗಬೆಕು ಪ್ರತಿಯೊಂದು ಸಮಸ್ಯೆಗಳಲ್ಲಿ ಪ್ರತಿರೋಧ ಸಮಸ್ಯೆ ಕಂಡು ಬರುವುದು ಸಹಜ ಆದರೆ ಇದ್ಯಾವುದಕ್ಕೂ ಯಾರೂ ಹೆದರಿಕೊಳ್ಳಬಾರದು ಪ್ರಾಥಮಿಕ ಹಂತದಿಂದ ಪ್ರತಿಯೊಂದು ಹಳ್ಳಿಗಳಲ್ಲಿ ತಮ್ಮ ವಾರ್ಡಿನ ಸದಸ್ಯರನ್ನು ಕುರಿತು ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡಬೇಕು ಅದೇ ರೀತಿಯಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಹೇಳಬೇಕು ಹೇಳಿಕೆಗೂ ಬಗ್ಗದಿದ್ದರೆ ಹೋರಾಟದ ಅಸ್ತ್ರವನ್ನು ಕೈಗೆತ್ತಿಕೊಂಡು ಕಾನೂನಾತ್ಮಕ ಹೋರಾಟ ಹಮ್ಮಿಕೊಳ್ಳುವುದರಿಂದ ನಮ್ಮ ಸುತ್ತ ಮುತ್ತಲಿನ ಭ್ರಷ್ಟಾಚಾರದ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತು ಬಿಸಾಕಬಹುದು ಎಂದು ರಾಷ್ಟ್ರೀಯ ಅಹಿಂಧ ಸಂಘಟನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಮಹಾಂತಗೌಡ ಆರ್ ಪಾಟೀಲ್ ಹಂಗರಗಾ ಕೆ ಅವರು ಇಂದಿನ ಯುವ ಸಮುದಾಯಕ್ಕೆ ಸಲಹೆ ನೀಡಿದ್ದಾರೆ.
