
ಟೀಮ್ ಇಂಡಿಯಾ 2025 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ತಲುಪಿದೆ. ದುಬೈನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ ಸತತ ಮೂರನೇ ಬಾರಿಗೆ ಫೈನಲ್‌ಗೆ ತಲುಪಿತು.

ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ರಣರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಭಾರತವು, ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ತಲುಪಿದೆ. ಇದರೊಂದಿಗೆ, 2023 ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿದೆ. ಭಾರತ ತಂಡವು ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದು ಫೈನಲ್ ತಲುಪಿದ್ದು, ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯಲ್ಲಿ ಭಾರತ ಸತತ ಮೂರನೇ ಬಾರಿಗೆ ಫೈನಲ್‌ಗೆ ತಲುಪಿದ ಸಾಧನೆ ಮಾಡಿದೆ.
ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ತಲುಪಿದೆ. ಕೆಎಲ್ ರಾಹುಲ್ ಸಿಕ್ಸರ್ ಬಾರಿಸುವ ಮೂಲಕ ಟೀಮ್ ಇಂಡಿಯಾಗೆ ಗೆಲುವು ತಂದುಕೊಟ್ಟರು.
ಆಸೀಸ್ ಪರ ಜಂಪಾ ನಾಥನ್ ತಲಾ ಎರಡು ವಿಕೆಟ್ ಗಳಿಸಿದರೆ, ಬೆನ್ ಮತ್ತು ಕೂಪರ್ ಒದೊಂದು ವಿಕೆಟ್ ಪಡೆದರು. ವಿರಾಟ್ ಕೊಹ್ಲಿ ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ 73 ಹಾಗೂ ಅಲೆಕ್ಸ್ ಕ್ಯಾರಿ 61 ರನ್ ಗಳ ಕಾಣಿಕೆಯ ಹೊರತಾಗಿ 49.3 ಓವರ್ ಗಳಲ್ಲಿ 264 ರನ್ ಗಳಿಗೆ ಸರ್ವಪತನ ಕಂಡಿತು.
ಭಾರತದ ವೇಗದ ಬೌಲರ್ ಮೊಹ್ಮದ್ ಶಮಿ ಆರಂಭದಲ್ಲೇ ಕೂಪರ್ ಕೊನೊಲ್ಲಿ ವಿಕೆಟ್ ಪಡೆದರು.
ಆದರೆ ಒತ್ತಡಕ್ಕೆ ಒಳಗಾಗದ ಅಸೀಸ್, ಟ್ರಾವಿಸ್ ಹೆಡ್ ಬಿರುಸಿನ ಆಟವಾಡಿ 33 ಎಸೆತಗಳಲ್ಲಿ 39 ರನ್ ಗಳಸಿ ವರುಣಗೆ ವಿಕೆಟ್ ಒಪ್ಪಿಸಿದರು.
ಲಾಬುಶೇಷನ್ 29 ಹಾಗೂ ಜೋಶ್ ಇಂಗ್ಲಿಸ್ 11 ರನ್ ಗಳಿಸಿದರು. ರವೀಂದ್ರ ಜಡೇಜಾ ಇವರಿಬ್ಬರ ವಿಕೆಟ್ ಪಡೆದರು.
ಈ ವೇಳೆ ಸ್ಮಿತ್ ಮತ್ತು ಕ್ಯಾರಿ ಜೊತೆಗೂಡಿ ತಂಡವನ್ನು ಮುನ್ನಡೆಸಿದರು. 96 ಎಸೆತಗಳಲ್ಲಿ 73 ರನ್ ಗಳಿಸಿ ನಿರ್ಗಮಿಸಿದರು.
ಮ್ಯಾಕ್ಸ್ ವೆಲ್ 7, ಬೆನ್ ದ್ವಾರ್ಶಿಸ್ 19 ನೇಥನ್ ಎಲ್ಲಿಸ್ 10 , ಜಂಪಾ 7 ಹಾಗೂ ಗಳಿಸಿದರು. ಅರ್ಧ ಶತಕ ಬಾರಿಸಿ ಆಡುತ್ತಿದ್ದ ಕ್ಯಾರಿ 57 ರನ್ ಗಳಿಸಿ ರನೌಟಾದರು.
ಭಾರತದ ಪರ ಶಮಿ ಮೂರು, ಜಡೇಜಾ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ಹಾಗೂ ಪಾಂಡ್ಯ ಒಂದು ವಿಕೆಟ್ ಗಳಿಸಿದರು.
ವರದಿ : ಜಿಲಾನ್ ಸಾಬ್ ಬಡಿಗೇರ್