ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಬೋರಗಿ ಪುರದಾಳದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 9 ದಿನಗಳ ಶ್ರೀ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ತಪೋರತ್ನಂ ಶ್ರೀ ಶ್ರೀ ಮಹಾಲಿಂಗೇಶ್ವರ ಮಹಾಸ್ವಾಮಿಗಳ ಗಣ ಅಧ್ಯಕ್ಷತೆಯಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆದವು. ಅಜ್ಜನ ಜಾತ್ರೆಯು ಈ ವರ್ಷವೂ ಕೂಡಾ ನಾಡಿನ ಶಿವಯೋಗಿಗಳು ಶಿವಾಚಾರ್ಯರು, ಶರಣರು, ಸಾಧು ಸಂತರು, ವಿದ್ವಾಂಸರು, ಕವಿ ಕಲಾವಿದರು, ಚಿಂತಕರು ಹಾಗೂ ರಾಜಕೀಯ ಮುಖಂಡರು ಆಗಮಿಸಿದ್ದರು.
ದಿ. 07/03/2025 ರಂದು ಸಾಯಂಕಾಲ 05:30 ಕ್ಕೆ ಭವ್ಯ ರಥೋತ್ಸವ ಜರುಗುವುದು. ಅದೇ ರಾತ್ರಿ 8:00 ರಿಂದ 10:00 ಗಂಟೆ ವರೆಗೆ ನೆತ್ತಿಗೆ ಬುತ್ತಿ ಜ್ಞಾನ ಯಜ್ಞ ಸಮಾರಂಭ ನಡೆಯೋದು ಹಾಗೂ ಅದೇ ರಾತ್ರಿ ಶ್ರೀ ವಿಶ್ವಾರಾಧ್ಯ ಗುರುಕುಲ ಶಾಲೆ ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುವುದು. ಹಾಗೂ ಸಿಂದಗಿಯಿಂದ ಭಕ್ತರಿಗೆ ಬಸ್ಸಿನ ಸೌಕರ್ಯವನ್ನು ಇರುತ್ತದೆ.
ವರದಿ : ಹಣಮಂತ ಚ. ಕಟಬರ