ಕಲಬುರಗಿ/ ಚಿತ್ತಾಪುರ : ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅನ್ನಪೂರ್ಣ ನಾಗಪ್ಪ ಕಲ್ಲಕ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಆತೀಯಾ ಬೇಗಂ ನಜಮೋದ್ದಿನ್ ಅವರು ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಪಟ್ಟಣದ 23 ವಾರ್ಡ್’ಗಳ ಸರ್ವಾಂಗೀಣ ಅಭಿವೃದ್ಧಿಗೆ ಹಗಲು ರಾತ್ರಿ ಎನ್ನದೇ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದರು.
ಪುರಸಭೆ ಸದಸ್ಯರು ಕೂಡಾ ತಮ್ಮ ತಮ್ಮ ವಾರ್ಡ್’ಗಳಲ್ಲಿನ ಸಮಸ್ಯೆಗಳ ಕುರಿತು ನಮ್ಮ ಹತ್ತಿರ ಕುಲಂಕುಶವಾಗಿ ಚರ್ಚೆ ಮಾಡಬೇಕು. ಹಂತ ಹಂತವಾಗಿ ಸಮಸ್ಯೆಗಳನ್ನು ಬಗಹರಿಸುವುದರೊಂದಿಗೆ ಪಟ್ಟಣವನ್ನು ಅಭಿವೃದ್ಧಿಗೊಳಿಸೋಣ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡಾ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಹೀಗಾಗಿ ಅವರ ಜೊತೆಯಲ್ಲಿ ನಾವು ಕೂಡ ಕೈ ಜೋಡಿಸಿ ಅಭಿವೃದ್ಧಿ ಪಡಿಸೋಣ ಎಂದರು.
ಇದೇ ವೇಳೆ ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಪುರಸಭೆ ಸದಸ್ಯರು, ಅನೇಕ ಮುಖಂಡರು ಹಾಗೂ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ಪಾಶಾಮೀಯಾ ಖುರೇಶಿ, ನಾಗರಾಜ ಭಂಕಲಗಿ, ಶ್ರೀನಿವಾಸರೆಡ್ಡಿ, ಸಂತೋಷ ಚೌದ್ರಿ, ಶಿವರಾಜ ಪಾಳೇದ, ಪ್ರಭು ಗಂಗಾಣಿ, ಶಿವಕಾಂತ ಬೆಣ್ಣೂರಕರ್, ಅಹ್ಮದ್ ಸೇಠ, ಯಕ್ಬಾಲ್, ಅಣ್ಣಾರಾವ ಸಣ್ಣೂರಕರ್, ಮಲ್ಲಿಕಾರ್ಜುನ ಬಮ್ಮನಳ್ಳಿ, ನಜೀರ್ ಆಡಕಿ, ಸಂಜು ಬುಳಕರ್, ಮಲ್ಲಿಕಾರ್ಜುನ ಮುಡಬೂಳಕರ್, ನಾಗಪ್ಪ ಕಲ್ಲಕ್, ಮಹಾಂತೇಶ ಬಮ್ಮನಳ್ಳಿ ಸೇರಿದಂತೆ ಅನೇಕ ಮುಖಂಡರು, ಅಭಿಮಾನಿಗಳು ಹಾಗೂ ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ಮೊಹಮ್ಮದ್ ಅಲಿ, ಚಿತ್ತಾಪುರ