ಬೀದರ್: ದಿ : 28-08-2025 ರಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದ ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಹುಡಗೆ ಗುಂಡಪ್ಪ ಅವರು ಮಾತನಾಡಿ ವೈಜ್ಞಾನಿಕ ಮನೋಭಾವ, ಚಿಂತನೆಗೆ ಹೆಚ್ಚು ಮಹತ್ವ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಜೊತೆಗೆ ಜೀವನದ ಎಲ್ಲಾ ಸಂಗತಿಗಳಲ್ಲಿ ವಿಜ್ಞಾನದ ಅನ್ವಯವನ್ನು ನಾವು ನೋಡುವುದರ ಜೊತೆಗೆ ವಿಜ್ಞಾನದ ಅನ್ವಯವು ಕಂದಾಚಾರ ಮೂಢನಂಬಿಕೆಗಳನ್ನು ನಿವಾರಿಸಿ ವೈಜ್ಞಾನಿಕತೆಯಿಂದ ಬದುಕುವ ರೀತಿಯಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದರು. ವೈಜ್ಞಾನಿಕ ಮೌಲ್ಯಗಳು ಜೊತೆಗೆ ರಾಮನ್ ಪರಿಣಾಮದ ಕುರಿತು ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವವನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಮಲ್ಲಿಕಾರ್ಜುನ ಚ. ಕನಕಟ್ಟೆ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ವೈಜ್ಞಾನಿಕ ಚಿಂತನೆಗಳು ವ್ಯಕ್ತಿಯ ಬದುಕಿಗೆ ಸಕಾರಾತ್ಮಕ ಸ್ವರೂಪ ನೀಡಿ ಪ್ರಗತಿಪರ ವಿಕಾಸಕ್ಕೆ ಸಹಾಯಕವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ವಿಜ್ಞಾನ ಸಂಘದ ಉದ್ಘಾಟನೆ, ಪೋಸ್ಟರ್ ಪ್ರದರ್ಶನ, ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಯಿತು.
ವಿಜ್ಞಾನ ಸಂಘದ ಸಂಯೋಜಕರಾದ ಶ್ರೀ ರಾಜಕುಮಾರ ಸಿಂಧೆ ಪ್ರಾಸ್ತಾವಿಕ ನುಡಿಗಳನ್ನು ಆಡಿ ಸಂಘದ ಉದ್ದೇಶಗಳು ಹಾಗೂ ಈ ವರ್ಷದ ಕಾರ್ಯಕ್ರಮಗಳ ಯೋಜನೆಯನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿಜ್ಞಾನ ಸಂಘದ ಸಹ ಸಂಯೋಜಕರಾದ ಡಾ. ಸಂತೋಷಕುಮಾರ್ ಸಜ್ಜನ್ ಅವರು ಉಪಸ್ಥಿತರಿದ್ದರು. ವಿಜ್ಞಾನ ದಿನದ ಪ್ರತಿಜ್ಞಾ ವಿಧಿಯನ್ನು ಶ್ರೀಮತಿ ವೀಣಾ ಜಲಾದೆ ನಡೆಸಿಕೊಟ್ಟರು. ಉಪನ್ಯಾಸಕರಾದ ಶ್ರೀ ಪಾಂಡುರಂಗ ಕುಂಬಾರ ಹಾಗೂ ಸಿಬ್ಬಂದಿವರ್ಗದವರಾದ ಸುವರ್ಣಾ ಪಾಟೀಲ ಇನ್ನಿತರರು ಉಪಸ್ಥಿತರಿದ್ದರು. ದೀಪಾಲಿ ಹಾಗೂ ಪ್ರಿಯಾಂಕಾ ನಿರೂಪಿಸಿದರು, ಭವಾನಿ ಸ್ವಾಗತಿಸಿದರು, ಶಿವಶರಣು ವಿಜ್ಞಾನ ಗೀತೆ ಹಾಡಿದರು ಸ್ವಾತಿ ವಂದಿಸಿದರು.
- ಕರುನಾಡ ಕಂದ