ಬೀದರ/ ಬಸವಕಲ್ಯಾಣ: ಜಗದೊಡೆಯ ಪರಮಾತ್ಮನ ಅಪರಾವತಾರಿಯಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗ ಯುಗಗಳಲ್ಲಿ ವಿವಿಧ ನಾಮಗಳಿಂದ ಅವತರಿಸಿದ ಯುಗಪುರುಷರಾಗಿದ್ದು ಸಕಲ ಸದ್ಭಕ್ತರಿಗೆ ಮಾನವ ಧರ್ಮ ಬೋಧಿಸಿ ಉದ್ದರಿಸಿದವರಾಗಿದ್ದಾರೆ. ಎಲ್ಲೆಡೆಯಂತೆ ಅನೇಕ ವರ್ಷಗಳಿಂದ ಸುಕ್ಷೇತ್ರ ಬಸವಕಲ್ಯಾಣದಲ್ಲಿ ಪೂಜ್ಯ ಗುರುಗಳ ದಿವ್ಯ ಸಾನಿದ್ಯದಲ್ಲಿ ಸಕಲ ಸದ್ಭಕ್ತರು ಸೇರಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷದಿಂದ ಕರ್ನಾಟಕ ಸರಕಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಆಚರಿಸಲು ಆದೇಶಿಸಿ ಜಯಂತಿ ಯುಗಮಾನೋತ್ಸವವನ್ನು ಪ್ರಾರಂಭಿಸಿದ್ದು ಸಕಲ ಸದ್ಭಕ್ತರಿಗೆ ಅಪಾರ ಸಂತೋಷ ಉಂಟುಮಾಡಿದೆ. ಈ ಕಾರಣಕ್ಕಾಗಿ ಭಕ್ತರು ಕರ್ನಾಟಕ ಸರಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ. ಹೀಗಾಗಿ ಶಿವಶರಣರ ಕಾಯಕ ಭೂಮಿಯಾದ ಸುಕ್ಷೇತ್ರ ಬಸವಕಲ್ಯಾಣದಲ್ಲಿ ಪೂಜ್ಯ ಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ತಾಲೂಕಾ ಅಡಳಿತ ಹಾಗೂ ಸಕಲ ಸದ್ಭಕ್ತರು ಸೇರಿ ಫಾಲ್ಗುಣ ಶುದ್ಧ ತ್ರಯೋದಶಿ ಯಂದು ದಿನಾಂಕ 12-03-2025 ರಂದು ಬುಧವಾರ ಬೆಳಿಗ್ಗೆ 09-00 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮತ್ತು ಅಲಂಕೃತವಾದ ರಥದ ಮೇಲೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯ ಭವ್ಯ ಮೇರವಣಿಗೆಯನ್ನು ವೈಭವದಿಂದ ಆಚರಿಸಲಾಗುತ್ತಿದ್ದು, ಸಕಲ ಸದ್ಭಕ್ತರು ಈ ಪವಿತ್ರ ನಮಾರಂಭದಲ್ಲಿ ಪಾಲ್ಗೊಂಡು ಶ್ರೀ ಜಗದ್ಗುರು ರೇಣುಕಾಚಾರ್ಯರ ದರ್ಶನ ಆಶೀರ್ವಾದ ಪಡೆದು ಮಹಾ ಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಕರ್ನಾಟಕ ಸರಕಾರ ತಾಲೂಕು ಆಡಳಿತ, ಬಸವಕಲ್ಯಾಣ, ಗವಿಮಠ ಟ್ರಸ್ಟ್ ಬಸವಕಲ್ಯಾಣ ಹಾಗೂ ಶ್ರೀ ಮದ್ವೀರಶೈವ ಸಧ್ಬೋಧನಾ ಸಂಸ್ಥೆ ತಾಲೂಕು ಘಟಕ ಬಸವಕಲ್ಯಾಣ ವತಿಯಿಂದ ಕೋರಿರುತ್ತಾರೆ.
ಭವ್ಯ ಮೆರವಣಿಗೆ
ದಿ: 12/03/2025 ಬುಧವಾರ ಬೆಳಿಗ್ಗೆ 09 ಗಂಟೆಗೆ ಬಸವಕಲ್ಯಾಣ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಬಿ.ಕೆ.ಡಿ.ಬಿ. ಗ್ರಂಥಾಲಯದವರೆಗೆ ತದನಂತರ ಧರ್ಮಸಭೆ ಜರುಗುವುದು.
ವರದಿ: ಶ್ರೀನಿವಾಸ ಬಿರಾದಾರ