ಬಳ್ಳಾರಿ/ ಕಂಪ್ಲಿ : ತಾಲೂಕಿನ ಸಣಾಪುರ ಗ್ರಾಮದಲ್ಲಿ ಸಾವಿರಾರು ಜನರ ಮಧ್ಯೆ ಐತಿಹಾಸಿಕ ಉದ್ಭವ ವೀರಭದ್ರೇಶ್ವರ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಉದ್ಭವ ಶ್ರೀ ವೀರಭದ್ರೇಶ್ವರನಿಗೆ ಬೆಳಗಿನ ಜಾವ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹಾ ಮೃತ್ಯುಂಜಯ ಮಂತ್ರ ಪಠಣ, ಶಿವಾಮೃತ ಪಠಣದೊಂದಿಗೆ ಪುಷ್ಪಾಲಂಕಾರ ಮಹಾ ಮಂಗಳಾರತಿ,
ಸಂಜೆ 5 ಗಂಟೆಗೆ ರಥೋತ್ಸವ ನಡೆಯಿತು. ವೀರಭದ್ರೇಶ್ವರ ಸ್ವಾಮಿಯ ಮಹಾರಥೋತ್ಸವ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವದಲ್ಲಿ ಸಣಾಪುರ ಗ್ರಾಮದ ಗುರು ಹಿರಿಯರು ಸುತ್ತಮುತ್ತಲಿನ ಗ್ರಾಮಸ್ಥರು ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್.
