
ಬಳ್ಳಾರಿ/ ಕಂಪ್ಲಿ : ಪಕ್ಕದಲ್ಲಿ ತುಂಗಾಭದ್ರ ಹೊಳೆ ಹರಿದರೂ ಕುಡಿಯಲು ಒಂದು ಹನಿ ಶುದ್ಧ ನೀರಿಲ್ಲ ಅನ್ನುವ ಹಾಗೆ ಆಗಿದೆ ಕೋಟೆ ಜನರ ಸ್ಥಿತಿ.
ಹೌದು ಇಲ್ಲಿನ ಕೋಟೆಯ ಶುದ್ಧ ನೀರಿನ ಘಟಕವು ದುರಸ್ತಿ ಹಂತಕ್ಕೆ ತಲುಪಿದೆ. ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹಲವಾರು ದಿನ ಕಳೆದರೂ ಈವರೆಗೆ ದುರಸ್ತಿ ಮಾಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಸ್ಥಳೀಯವಾಗಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಘಟಕ ಕೆಟ್ಟಿರುವುದರಿಂದ ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೈ ಕಾಲು ಗಟ್ಟಿ ಇರುವವರು ದೂರ ಹೋಗಿ ಕುಡಿಯುವ ನೀರನ್ನು ತಂದು ಕುಡಿಯುತ್ತಾರೆ ಆದರೆ ವಯಸ್ಸಾದವರು ಶುದ್ಧ ನೀರನ್ನು ತಂದು ಕುಡಿಯಲು ನಲ್ಲಿ ಸರಬರಾಜು ಮಾಡುವ ನೀರನ್ನೇ ಕುಡಿಯುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕುಡಿಯುವ ನೀರಿನ ಘಟಕದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ನೀರಿನ ಘಟಕವನ್ನು ತ್ವರಿತ ಗತಿಯಲ್ಲಿ ದುರಸ್ತಿಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ್.