ಬೀದರ/ ಬಸವಕಲ್ಯಾಣ: ಶ್ರೀ ಘನಲಿಂಗ ರುದ್ರಮನಿ ಶಿವಾಚಾರ್ಯ ಗವಿಮಠದಿಂದ ಕೊಡಮಾಡುವ ಅಭಿನವ ರೇಣುಕ ಶ್ರೀ ಪ್ರಶಸ್ತಿಗೆ ನಿವೃತ್ತ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಆಗಿರುವ ಪಂಚಾಕ್ಷರಿ ಜಿ. ಹಿರೇಮಠ ಬಸವಕಲ್ಯಾಣ ಅವರಿಗೆ ಹಾಗೂ ನಿವೃತ್ತ ಪ್ರಥಮ ದರ್ಜೆ ಸಹಾಯಕರು ಸರಕಾರಿ ಪ್ರೌಢ ಶಾಲೆಯ ಶ್ರೀ ರೇವಣಸಿದ್ದಯ್ಯ ಮಠಪತಿ, ಬಸವಕಲ್ಯಾಣ ಉಭಯರಿಗೆ ಆಯ್ಕೆ ಮಾಡಲಾಗಿದೆ ಎಂದು ಗವಿಮಠದ ಪೀಠಾಧಿಪತಿಗಳಾದ ಶ್ರೀ ಷ. ಬ್ರ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ತಿಳಿಸಿದ್ದಾರೆ.
ಗವಿಮಠದಲ್ಲಿ ಪ್ರತಿ ವರ್ಷ ನಡೆಯುವ ಮಾರ್ಚ್ 12 ರಂದು ಸಾಯಂಕಾಲ 4:00 ಗೆ ಜರಗುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಅಭಿನವ ರೇಣುಕ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಸಾನಿಧ್ಯ ಶ್ರೀ ಷ.ಬ್ರ ಚಿದಾನಂದ ಶಿವಾಚಾರ್ಯರು ವಿರಕ್ತ ಮಠ ಬಿಲಗುಂದಿ, ನೇತೃತ್ವ ಶ್ರೀ ಷ. ಬ್ರ. ಡಾ. ಅಭಿನವ ಗಣಲಿಂಗ ರುದ್ರಮುನಿ ಶಿವಾಚಾರ್ಯರು ಗವಿಮಠ ಬಸವಕಲ್ಯಾಣ, ಸಮ್ಮುಖ ಶ್ರೀ ಮ.ನಿ.ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು ಚೌಕಿಮಠ ಮಂಠಾಳ, ಅಧ್ಯಕ್ಷತೆ ಶ್ರೀ ಶರಣಪ್ಪಾ ಬಿರಾದಾರ ಕಾರ್ಯಾಧ್ಯಕ್ಷ ಜಘರುಶಿ ಗವಿಮಠ ತ್ರಿಪೂರಾಂತ ಬಸವಕಲ್ಯಾಣ ಗೌರವ ಉಪಸ್ಥಿತಿ ಶ್ರೀ ಮಹೇಶ್ ಪಾಟೀಲ ಸಹಾಯಕ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ಬೀದರ ಮುಖ್ಯ ಅತಿಥಿಗಳು – ಶ್ರೀ ಮಲ್ಲಯ್ಯ ಹಿರೇಮಠ ನಿರ್ದೇಶಕರು ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಬಸವಕಲ್ಯಾಣ ಶ್ರೀ ಡಾ. ಬಸವರಾಜ್ ಸ್ವಾಮಿ ಅಧ್ಯಕ್ಷರು ಶ್ರೀಮದ್ವೀರಶೈವ ಸದ್ಭೋಧನ ಸಂಸ್ಥೆ ತಾಲೂಕಾ ಘಟಕ ಬಸವಕಲ್ಯಾಣ ಪ್ರಾಸ್ತಾವಿಕ ನುಡಿ ಶ್ರೀ ಪ್ರೋ. ಸೂರ್ಯಕಾಂತ ಶೀಲವಂತ ಪ್ರಾಚಾರ್ಯರು ಪುಣ್ಯಕೋಟಿ ಪದವಿಪೂರ್ವ ಕಾಲೇಜು ಬಸವಕಲ್ಯಾಣ ಸ್ವಾಗತ ಪ್ರೋ.ರುದ್ರೇಶ್ವರ ವಿರುಪಾಕ್ಷಯ್ಯ ಗೋರ್ಟಾ ನಿರೂಪಣೆ ಶ್ರೀ ರಮೇಶ್ ರಾಜೋಳೆ ಶಿವಪೂರ ಮತ್ತು ಸಕಲ ಸದ್ಭಕ್ತರು ಆಗಮಿಸಿ ಜಗದ್ಗುರು ರೇಣುಕಾಚಾರ್ಯರ ಹಾಗೂ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಯೋಗಿಗಳು ಆಶೀರ್ವಾದ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಶ್ರೀ ಮಠದ ಸದ್ಭಕ್ತರು ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ