ಬಳ್ಳಾರಿ / ಕಂಪ್ಲಿ : ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ(ಜೆ.ಕಾರ್ತಿಕ)ಯ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ರಾಮಾಂಜನೇಯ(ಅಧ್ಯಕ್ಷ), ಹೆಚ್.ತಿಮ್ಮಪ್ಪ(ಉಪಾಧ್ಯಕ್ಷ), ವಿ.ಗುರುಸ್ವಾಮಿ(ಖಜಾಂಚಿ), ಎನ್.ಆನಂದ(ಪ್ರಧಾನ ಕಾರ್ಯದರ್ಶಿ), ವಿ.ಹನುಮಂತ (ಸಹ ಕಾರ್ಯದರ್ಶಿ) ಇವರನ್ನು ಸರ್ವಾನುಮತದಿಂದ ನೇಮಕ ಮಾಡಿ, ಕಂಪ್ಲಿ ಕ್ಷೇತ್ರ ಅಧ್ಯಕ್ಷ ಸಿ.ಎ.ಚನ್ನಪ್ಪ ಆದೇಶಿಸಿದರು. ನಂತರ ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ಎನ್. ಜಡಿಯಪ್ಪ ಇವರನ್ನು ಆಯ್ಕೆ ಮಾಡಲಾಯಿತು.
ನಂತರ ನೂತನ ಪದಾಧಿಕಾರಿಗಳಿಗೆ ಸಂಘಟನೆಯ ಶಾಲು ಹೊದಿಸಿ ಮಾಲಾರ್ಪಣೆಯೊಂದಿಗೆ ಗೌರವಿಸಿದರು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಎನ್. ನಿಂಗಪ್ಪ, ಮುಖಂಡರಾದ ದುರುಗಪ್ಪ, ಸಿ.ಮಾಯಪ್ಪ, ಮರಿಯಪ್ಪ, ಹೆಚ್.ಪೂಜಾರಿ, ವಿ.ಹನುಮಂತರೆಡ್ಡಿ, ನಾಗಪ್ಪ, ಪಂಪಾಪತಿ, ಮಂಜುನಾಥ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ