ಬಾಗಲಕೋಟೆ ಜಿಲ್ಲೆಯ ಹುನಗುಂದ ಜಗತ್ತಿನಲ್ಲಿರುವ ಜನರು ಹೊನ್ನು, ಹೆಣ್ಣು, ಮಣ್ಣುಗಳನ್ನೇ ಮಾಯೆ
ಎಂದು ತಿಳಿದಿದ್ದಾರೆ. ಅಲ್ಲಮಪ್ರಭುಗಳು ಹೊನ್ನು, ಹೆಣ್ಣು, ಮಣ್ಣು ಮಾಯೆಗಳಲ್ಲಾ ಮನದ ಮುಂದಣ ಆಶೆಗಳು ಮಾಯೆಯಾಗಿ ಕಾಡುತ್ತವೆ ಎಂದಿದ್ದಾರೆ ಈ ಆಶೆಗಳನ್ನು ಹತೋಟಿಯಲ್ಲಿಡಲು ಬಸವಾದಿ
ಶರಣರು ಕೊಟ್ಟ ಇಷ್ಟಲಿಂಗವನ್ನು ಏಕಾಗ್ರತೆ ದೃಷ್ಟಿಯಿಂದ ಪೂಜೆಯಿಂದ ಮಾತ್ರ ಮಾಯೆಯ
ನಿಯಂತ್ರಣ ಸಾಧ್ಯ ಎಂದು ಚಿತ್ತರಗಿ ಇಲಕಲ್ ಸಂಸ್ಥಾನಮಠದ ಗುರು ಮಹಾಂತ ಸ್ವಾಮಿಗಳು
ಹೇಳಿದರು. ಹುನಗುಂದದ ನಾಗಲಿಂಗನಗರದ ಶರಣಿ
ಲಕ್ಷ್ಮೀಬಾಯಿ ಶರಣ ಜಗದೀಶ ಹುನಗುಂದ ಅವರ ಮನೆಯಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಹುನಗುಂದ ಇವುಗಳ ಸಹಯೋಗದಲ್ಲಿ
30 ನೇಯ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ
ಇಂದು ನಮ್ಮ ಮನಸ್ಸನ್ನು ಹತೋಟಿಯಲ್ಲಿಡುವದು
ಸುಲಭವಲ್ಲ ಮಂಗನಂತಿರವ ಮನಸ್ಸನ್ನು ಹಾಗೂ ಆಶೆಗಳನ್ನು ನಿಯಂತ್ರಣ ತರಲು ಇಷ್ಟಲಿಂಗವು
ನಮ್ಮ ಮನಸ್ಸನ್ನು ಸೆಳೆಯುತ್ತದೆ
ಎಂದರು. ಅನುಭಾವ ನುಡಿಗಳನ್ನಾಡಿದ ಶ್ರೀಮತಿ
ಗೀತಾ ಇದ್ದಲಗಿ ಬಸವಾದಿ ಶರಣರ ವಚನಗಳನ್ನು ಉದಾಹರಿಸಿ ಸಂಸಾರದ ಬಂಧನದಲ್ಲಿ ಸಿಲುಕಿ ಅದರಿಂದ ಮುಕ್ತಿ ಪಡೆಯಲು ಬಸವಾದಿ
ಶರಣರ ವಚನಗಳನ್ನು ಮೈಗೂಡಿಸಿಕೊಂಡರೆ ನಮ್ಮ ನಮ್ಮ ಸಂಸಾರದ ಕಷ್ಟಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯ
ಎಂದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಡಾ.ಶಿವಗಂಗಾ ರಂಜಣಗಿ ಮಾತನಾಡಿ ಅಲ್ಲಮಪ್ರಭುಗಳ ವಚನ ವಿಶ್ಲೇಷಣೆ ಮಾಡಿ
ಪ್ರತಿಯೊಬ್ಬರೂ ಹತ್ತು ಹಲವು ಚಿಂತೆಗಳು, ತಾಪತ್ರಯಗಳಿಂದ ದೂರವಾಗಲು ಶರಣರ ವಚನಗಳೇ ಬದುಕಿಗೆ ದಾರಿದೀಪ ವಾಗುತ್ತವೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಎಸ್.ಎನ್. ಹಾದಿಮನಿ
ವಹಸಿದ್ದರು. ತಾಲೂಕಾ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರಭು ಮಾಲಗಿತ್ತಿಮಠ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಭಕ್ತಿಸೇವೆ ಮಾಡಿದ ಶರಣ ದಂಪತಿಗಳನ್ನು ಪೂಜ್ಯರು
ಗೌರವಿಸಿದರು. ಪರಿಷತ್ತಿನ ಪ್ರದಾನ ಕಾರ್ಯದರ್ಶಿಯಾದ ಸಂಗಮೇಶ ಹೊದ್ಲೂರ ಕಾರ್ಯಕ್ರಮ ನಿರೂಪಣೆ ಮಾಡಿದರು.
- ಕರುನಾಡ ಕಂದ
