ಅಂದು ನಾನು ಕೊರೊನಾ ಎಂಬ ನರಕಯಾತನೆಯಿಂದ ಹೊರ ಬಂದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಸಮಯ ಯಾರೂ ಸ್ನೇಹಿತರು ಇಲ್ಲದೆ ಪುಸ್ತಕಗಳ ಜೊತೆ ಒಂಟಿ ಪಯಣಿಗಳಾಗಿದ್ದೆ. ಒಂದು ದಿನ ಒಂದು ಮೆಸೆಜ್ ಬಂತು ಅದು ವಡ್ಡಾರಾಧನೆಯ ಕೃತಿ ಮೊದಲು ಸಂಪಾದನೆ ಮಾಡಿದವರು ಯಾರು ಎಂದು
ಪ್ರಶ್ನೆಯಾಗಿತ್ತು ಪುರುಷರು ಇರಬಹುದು ಎಂದು ತಿಳಿದು ನಾನು ರಿಪ್ಲೈ ಮಾಡದೆ ಇರುವಾಗ ನಂತರ ಡಿಲೀಟ್ ಮಾಡಿದರು ಏಕೆ ಡಿಲೀಟ್ ಮಾಡಿದ್ದು ಎಂದು ನಾನು ಮರು ಪ್ರಶ್ನೆ ಕೇಳುತ್ತಾ ನಮ್ಮ ವಡ್ಡಾರಾಧನೆ ಚರ್ಚೆ ಸಾಗಿತ್ತು ಅವರ ವಾಟ್ಸಪ್ ಮತ್ತು ಟೆಲಿಗ್ರಾಂ ಡಿಪಿ ವಿಶ್ವಶಾಂತಿಯೇ ಇಷ್ಟೇ ಹೆಸರು ನನಗೆ ಗೊತ್ತಿತ್ತು ಒಬ್ಬೊರನೊಬ್ಬರು ನೋಡದ ವೈಯಕ್ತಿಕ ವಿಷಯ ಗೊತ್ತಿರದ ಯಾವ ಜಿಲ್ಲೆಯವರು ಎಂದು ಕೂಡಾ ತಿಳಿಯದವರು ಆದ ನಾವು ನಮ್ಮ ಸ್ನೇಹ ಪಯಣ ಮುಂದುವರೆಸಿದೆವು ನಾವು ಅಪರಿಚಿತರು ಇದ್ದರೂ ಪರಿಚಿತರಾದೆವು ಅವರು ನನಗೆ ಅಪರಿಚಿತರು ಹೊಸ ಪರಿಚಯ ಅಂತಾ ಯಾವಾಗಲೂ ಅನಿಸಲಿಲ್ಲ ಅಷ್ಟು ಆತ್ಮೀಯ ಸ್ವಭಾವ ಅವರದು ನಗುಮೊಗದ ಮೃದು ಮನಸಿನ ಸಾಹಿತಿ ಅವರು ಸ್ನೇಹಿತೆ ಸಾಹಿತಿ ಅಂತಾ ನನಗೆ ಗೊತ್ತಾದದ್ದು ನಮ್ಮ ಸ್ನೇಹ ಪ್ರಾರಂಭವಾಗಿ ಒಂದು ವರ್ಷದ ನಂತರ ನನಗೆ ಬಹಳಷ್ಟು ಖುಷಿ ಅನಿಸಿತು ಸ್ನೇಹ ಅನ್ನೊದು ಹಾಗೆ ಅದು ದೇವರು ಕೊಟ್ಟವರ ಸ್ನೇಹ ಹಲವರ ಜೊತೆ ಆಗುತ್ತೆ ಆದ್ರೆ ನಿಷ್ಕಲ್ಮಶ ಸ್ನೇಹ ಸಿಗೋದು ಅಪರೂಪ ನಮ್ಮ ಸ್ನೇಹ ಯಾವುದನ್ನು ಅಪೇಕ್ಷೆ ಮಾಡದ ನಿಷ್ಕಲ್ಮಷ ಗೆಳೆತನ ನಾವು ಒಬ್ಬರಿಗೊಬ್ಬರು ನಮ್ಮ ವೈಯಕ್ತಿಕ ಪರಿಚಯ ಯಾರೂ ಹೇಳಿಕೊಂಡಿರಲಿಲ್ಲ ಆದರೂ ನಮ್ಮ ಸ್ನೇಹ ಬಹಳ ಗಾಡವಾಗಿತ್ತಿ ನಮ್ಮ ಸ್ನೇಹಕ್ಕೆ ಈಗ ಮೂರುವರ್ಷ ಇಲ್ಲಿಯವರೆಗೂ ನಾವು ಯಾವತ್ತೂ ಜಗಳವಾಡಲಿಲ್ಲ ಅಷ್ಟು ಹೊಂದಾಣಿಕೆ ನಮ್ಮಲ್ಲಿ ನಾನು ಸಖಿಯ ಲೇಖನ ಬರೆದಾಗಲೇ ಗೊತ್ತಾಗಿದ್ದು ಅವರ ಮನಸು ಅಷ್ಟು ಮೃದು ಆತ್ಮೀಯತೆ ಏಕೆ ಎಂದು ಸಖಿ ಬಾಲ್ಯದಲ್ಲಿ ನಡೆಸಿದ ಜೀವನದ ಹೊರಾಟ ಸಂಘರ್ಷ ದಿಂದ ಅವರ ವ್ಯಕ್ತಿತ್ವ ವಜ್ರದ ಹಾಗೆ ಹೊಳೆಯುತಿರುವುದು ಎಂದು ತಿಳಿಯಿತು.
ನಮ್ಮ ಸ್ನೇಹ ಪಯಣದಲ್ಲಿ ಇನ್ನೂ ಒಬ್ಬರು ಇದ್ದಾರೆ ಅವರಬಗ್ಗೆ ಹೇಳದಿದ್ದರೆ ನಮ್ಮ ಸ್ನೇಹ
ಅಪೂರ್ಣವಾಗುವುದು ಎಂದು ಹೇಳುತಿರುವೆ ಸದಾ ಪುಸ್ತಕ ಓದುತ್ತಾ ಪುಸ್ತಕದ ಹುಳುವಾಗಿರುವ ಮಲೆನಾಡಿನ ಸಖಿ ಪ್ರಿಯಾ ನಮ್ಮ ಮೂವರ ಸ್ನೇಹ ಪಯಣ ಮೂರುವರ್ಷಗಳ ಹಿಂದೆ ಪ್ರಾರಂಭವಾದದ್ದು ಈ ಇಬ್ಬರು ನನಗೆ ಪರಿಚಯವಾದಾಗ ಅವರು ಓದುವ ರೀತಿಯನ್ನು ನೋಡಿ ಈಗ ತಾನೆ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಯುವ ಹುಡುಗಿಯರು ಆಗಿರಬಹುದು ಎಂದುಕೊಂಡಿದ್ದೆ ಅವರು
ವಿವಾಹಿತರಾಗಿದ್ದರು ಮನೆಯ ಎಲ್ಲಾ ಕೆಲಸವನ್ನು ಮೂಗಿಸಿ ಸಂಸಾರ ನಿಭಾಯಿಸುತ್ತಾ ಓದಿಗೆ ಸಮಯ ಮೀಸಲಿಡುವುದು ನೋಡಿ ನನಗೆ ಬಹಳ ಮೆಚ್ಚುಗೆ ಆಯಿತು ಓದಿಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದು ಅವರಿಂದ ಕಲಿತೆ ಸಂಸಾರ ಜವಾಬ್ದಾರಿ ನಿಭಾಯಿಸುತ್ತಾ ಹೀಗೂ ಕೂಡಾ ಓದಬಹುದು ಎಂಬುದು ನೋಡಿ ಮನಸ್ಸಿಗೆ ಸ್ಪೂರ್ತಿ ತಂದಿತು ಇದು ವ್ಯಕ್ತಿ ಪರಿಚಯವಾಗಿರುವುದರಿಂದ ಸಖಿ ಪ್ರಿಯ ಬಗ್ಗೆ ಹೆಚ್ಚು ಹೇಳದೆ ನನ್ನ ಲೇಖನ ಮುಂದುವರೆಸುತ್ತೇನೆ ನಮ್ಮ ಮೂವರ ಸ್ನೇಹಕ್ಕಾಗಿ ಸ್ನೇಹಿತೆ ಭವ್ಯ ಬರೆದ ‘ಬಂದ ಮಧುರ ಬಂದ’ ನುಡಿಮುತ್ತು ಇಲ್ಲಿ ಬರೆಯಲು ಇಚ್ಚಿಸುವೆ.
” ಸ್ನೇಹವೂ ಸುಮಧುರ ಸಂಬಂಧ ಬಂದ
ಮನಸು ಮನಸುಗಳ ಬಾಂಧವ್ಯ ಬಂದ
ಚಿಂತೆಯನು ಅಳಿಸುವ ಚಿತ್ತವರಳಿಸುವ
ಚಿನ್ಮಯಾನಂದ
ಅನುಗಾಲ ಅಚ್ಚಳಿಯದಿರಲಿ
ಈ ಅನುಬಂಧ “
ಇಂದು ಬಹಳಷ್ಟು ಜನ ವಾಟ್ಸಪ್ ನಲ್ಲಿ ವ್ಯರ್ಥ ಸಮಯ ಹಾಳು ಮಾಡುತ್ತಿರುವ ಈಗಿನ ಕಾಲದಲ್ಲಿ ಚಾಟ್ ಮೂಲಕ ಕನ್ನಡ ಸಾಹಿತ್ಯವನ್ನು ಚರ್ಚೆ ಮಾಡುತ್ತಾ ಓದಬಹುದು ಎಂಬುದು ನನಗೆ ಗೊತ್ತಾಗಿದ್ದು ಅವರಿಂದ ನಾವು ದಿನಾಲೂ ಒಂದು ಗಂಟೆ ಓದಿಗಾಗಿ ಮೀಸಲಿಡುತ್ತಾ ನಮ್ಮ ಸಾಹಿತ್ಯ ಓದಿನ ಪಯಣ ಮುಂದುವರೆಸಿದೆವು ಚರ್ಚಿಸಿದ ವಿಷಯ ಹೇಗೆ ಸೇವ್ ಮಾಡಿ ಇಟ್ಟುಕೊಳ್ಳುವುದನ್ನು ಕಲಿತೆ ಆಗತಾನೆ ಮೊಬೈಲ್ ನಲ್ಲಿ ಕನ್ನಡ ಭಾಷೆಯಲ್ಲಿ ಟೈಪ್ ಮಾಡುವುದನ್ನು ಕಲಿಯುತ್ತಿದ್ದ ನನಗೆ ಎಲ್ಲಾ ಹೊಸದು ‘ಕರ್ನಾಟಕ ‘ಎಂದು ಬರೆಯಬೆಕಾದರೆ ಅರ್ಕಾ ಕಾರ ‘೯ ‘ಈ ರ ಟೈಪ್ ಮಾಡಲು ಬರದೆ ಇರುವಾಗ ಮೇಡಮ್ ಗೆ ಕೇಳಿದಾಗ ಕನ್ನಡದ ೧೨೩ ಇರುತ್ತೆ ಅಲ್ವಾ ಅದು’ ೯ ‘ಟೈಪ್ ಮಾಡಿ ಎಂದು ಸಲಹೆ ನೀಡಿದರು.
ಇದು ಹಾಸ್ಯಾಸ್ಪದವಾಗಿದ್ದರೂ ಕೂಡಾ ಹೀಗೂ ಬರೆಯಬಹುದು ಎಂದು ಆ ‘ ೯ ‘ ಅಂಕಿಯನ್ನು’ ರ ‘ಪದ ಬಳಕೆಗೆ ಟೈಪ್ ಮಾಡುವುದು ಮುಂದುವರೆಸಿ
ಬರೆಯತೊಡಗಿದೆ ವಾಟ್ಸಪ್ ಚಾಟ್ ನಲ್ಲಿ ಇಂಗ್ಲಿಷ್ ಬಳಕೆ ಮಾಡುವ ಈಗಿನ ಕಾಲದಲ್ಲಿ ಸಖಿ ಮಲೆನಾಡಿನಲ್ಲಿ ಇದ್ದುಕೊಂಡು ಯಾವುದೇ ಮುಖ ಪರಿಚಯ ಇಲ್ಲದ ತೊಗರಿಯ ನಾಡಿನಲ್ಲಿ ಇರುವ ನನಗೆ ಕನ್ನಡ ಅಕ್ಷರ ಟೈಪ್ ಕಲ್ಪಿಸಿರುವುದು ಹೆಮ್ಮೆಯ ವಿಷಯ ನಾನು ಯಾವಾಗಲೂ’ ೯’ ಈ ಅಕ್ಷರ ಬರೆಯುವಾಗ ಪ್ರತಿ ಬಾರಿ ಭವ್ಯ ಮೇಡಮ್ ನೆನಪಾಗುವರು ಅವರ ನಿಸ್ವಾರ್ಥ ಸ್ನೇಹ ನನಗೆ ಬಹಳಷ್ಟು ಖುಷಿ ಕೊಟ್ಟಿತು ಮಹಿಳೆಯರಿಗೆ ಮೂವತ್ತು ನಲವತ್ತು ವಯಸ್ಸು ದಾಟಿದರೆ ಸಾಕು ನಮ್ಮ ಜೀವನ ಇಲ್ಲಿಗೆ ಮೂಗಿಯಿತು ನಾವು ಏನು ಸಾಧನೆ ಮಾಡಲಾಗದು ಎನ್ನುವ ಪ್ರಶ್ನೆ ಕಾಡತೊಡಗುವುದು ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಯಾವ ವಯಸ್ಸಿನಲ್ಲಿ ಬೇಕಾದರೂ ಮಹಿಳೆಯು ಕೂಡಾ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ ಭವ್ಯ ಸುಧಾಕರ್ ಜಗಮನೆ ಮೆಡಮ್ ಎಲ್ಲಾ ಮಹಿಳೆಯರಿಗೆ ಆದರ್ಶರಾಗಿದ್ದಾರೆ ಅವರ ಸಾಹಿತ್ಯ ಸಾಧನೆ ಹಿಗೆ ಬೆಳೆಯಲಿ ಎಂದು ಹಾರೈಸುತ್ತಾ
ನನ್ನ ಚಿಕ್ಕ ಲೇಖನ ಮುಗಿಸುತ್ತೇನೆ.
ಎರಡು ವರ್ಷಗಳ ಹಿಂದೆ ಬರೆದ ನನ್ನ ಈ ಕವನ ನಮ್ಮ ಸ್ನೇಹ ಬಾಂಧವ್ಯ ಕ್ಕಾಗಿ ಸಮರ್ಪಣೆ.
ಇಂಟರ್ನೆಟ್ ಯುಗದ ಓದುವ ಸಖಿಯರು
ಸಾಹಿತ್ಯ ಓದುವ ಜಾಣ ಸಖಿಯರು
ಲೇಖನಿ ಹಿಡಿದು ಬರೆಯಲು ಹೊರಟರು
ಮನಸಿನ ಭಾವನೆ ಕವನದಲ್ಲಿಹಂಚಿದರು
ಇದುವರೆಗೆ ಒಬ್ಬರನ್ನೊಬ್ಬರು ನೋಡದ
ವಾಟ್ಸಾಪಿನ ಆತ್ಮೀಯ ಸಖಿಯರು
ಪ್ರಾಚೀನ ಕೃತಿಗಳಾದ ವಡ್ಡಾರಾಧನೆ
ಪಂಪಭಾರತ ಕೃತಿಗಳ ಚರ್ಚೆಯ
ಮೂಲಕ ಆದರೂ ಪರಿಚಿತರು
ಆಧುನಿಕ ಯುಗದ ಪ್ರಾಣಸಖಿಯರು
ರಾಷ್ಟ್ರಕವಿ ಕುವೆಂಪು ನಡೆದಾಡಿದ
ಸೊಬಗಿನ ಸಿರಿಯ ಮಲೆನಾಡಿನಲ್ಲಿ
ಇರುವಳು ಒಬ್ಬಳು
ಕವಿರಾಜಮಾರ್ಗ ಕಾರ ನಡೆದಾಡಿದ
ಬಿಸಿಲೂರಿನ ತೊಗರಿಯ ನಾಡಿನಲ್ಲಿ
ಇರುವಳು ಇನ್ನೊಬ್ಬಳು
ಒಬ್ಬಳು ಓದುವಳು ಕಂಪ್ಯೂಟರಿನಲ್ಲಿ
ಇನ್ನೊಬ್ಬಳು ಓದುವಳು ಪುಸ್ತಕದಲ್ಲಿ
ಒಬ್ಬರಿಗೊಬ್ಬರೂ ಸ್ಪರ್ಧೆಗೆ ಇಳಿದಂತೆ
ಇಬ್ಬರು ಕೂಡಿ ಓದುವರು ಮೊಬೈಲ್ ನಲ್ಲಿ
ವಾಟ್ಸಾಪ್ ಯುಗದ ವಾಟ್ಸಪ್ ಸಖಿಯರು
ಅಪರಿಚಿತರಿದ್ದರೂ ಪರಿಚಿತರಾದರು
ಒಂಬತ್ತು ತಿಂಗಳಿನಿಂದ ಸ್ಪರ್ಧಾತ್ಮಕ
ಪರೀಕ್ಷೆಗೆ ಕೂಡಿ ಓದುತಲಿರವರು
ವಯಸ್ಸು ಮೂವತೈದು ದಾಟಿದರೂ
ಹಠ ಬಿಡದೆ ಓದುತಲಿರುವ ಸಖಿಯರು
ಮದುವೆಯಾದರು ಸಂಸಾರ
ನಿಭಾಯಿಸುತಾ ಹುಟ್ಟಿದ ಮನೆಯ
ಕೊಟ್ಟ ಮನೆಯ ಜವಾಬ್ದಾರಿ ಹೊತ್ತು
ಕುಟುಂಬದ ಕಣ್ಣಾದ ಓದುವ ಸಖಿಯರು
ಎಲ್ಲರ ಮೆಚ್ಚಿನ ಓದುವ ಮನೆಯ
ಓದು ಕರ್ನಾಟಕ ವಾಟ್ಸಪ್ ಬಳಗದ
ಪ್ರಶ್ನೆ ಸರಣಿಗೆ ಉತ್ತರ ಬಿಡಿಸುವರು
ನಗುನಗುತ ಹರುಷದಿ ನಾ ಮೊದಲು
ನಿಮೊದಲು ಎನ್ನುತ್ತಾ ಪುಸ್ತಕ ಓದುವರು
ಇಂಟರ್ನೆಟ್ ಯುಗದ ವಾಟ್ಸಪ್ ಸಖಿಯರು
ಸಾಹಿತ್ಯ ಸುಕ್ಷಿತ ಟೆಲಿಗ್ರಾಂ ಬಳಗದಲಿ
ಕಠಿಣ ಪ್ರಶ್ನೆ ಗಳು ಚರ್ಚಿಸುತಲೀರುವರು
ಉತ್ತರ ಸಿಗದ ಪ್ರಶ್ನೆಗೆ ಉತ್ತರ ಹುಡುಕುವರು
ಇಂಟರ್ನೆಟ್ ಯುಗದ ಟೆಲಿಗ್ರಾಂ ಸಖಿಯರು
ಸಾಹಿತ್ಯ ಸಂಭ್ರಮ ಮೂಡಿಗೆರಿ
ವಾಟ್ಸಪ್ ಬಳಗದಲಿ
ಜಪಾನದೆಶದ ಸಾಹಿತ್ಯ ಪ್ರಕಾರದ
ಹಾಯ್ಕು ಕವನ ಬರೆಯುತಲಿರುವರು
ಕವನ ಲೊಕದ ಕವಿಯತ್ರಿ ಸಖಿಯರು
ಗೂಗಲ್ ಮೀಟಲ್ಲಿ ಪಾಠವ ಹೇಳುತ್ತ ಕೇಳುತ್ತಲಿರುವರು ಗೂಗಲ್ ಮೀಟ್
ಯುಗದ ಓದುವ ಸಖಿಯರು
ಗೂಗಲ್ ಲೊಕದಗೂಗಲ್ ಮಿಟ್ ಸಖಿಯರು
ಇಂಟರ್ನೆಟ್ ಯುಗದ ಓದುವಸಖಿಯರು
ಬರಹಗಾರರು: ಡಾ.ಭಾಗ್ಯಜ್ಯೋತಿ ಸುನಿಲ್ ಕುಮಾರ್ ಗಾಯಕವಾಡ, ಬಸವಕಲ್ಯಾಣ
